• Slide
    Slide
    Slide
    previous arrow
    next arrow
  • ಭಾವ-ಭೂಮಿ ಪುಸ್ತಕ ಬಿಡುಗಡೆ: ಅನುಭವವನ್ನು ಅಕ್ಷರದಲ್ಲಿ ಅಚ್ಚೊತ್ತಿದ ಜಾಹ್ನವಿ ಹೆಗಡೆ

    300x250 AD

    ಶಿರಸಿ: ಓದು, ಬರಹ ಸುಖಾ ಸುಮ್ಮನೆ ಬರುವುದಿಲ್ಲ. ಅದಕ್ಕೂ ಪ್ರೇರಕ, ಪ್ರೇರಣೆ ಎಲ್ಲವೂ ಅವಶ್ಯ. ಇಂಥ ಇಳಿವಯಸ್ಸಿನಲ್ಲಿ ಪುಸ್ತಕ ಮಾಡುವುದೆಂದರೆ ಜಾನಕಿಯವರು ತಮ್ಮ ಒಳಗಿನ ಭಾವನೆಗಳೆನ್ನೆಲ್ಲ ಅಕ್ಷರ ರೂಪಕ್ಕೆ ತಂದಿದ್ದು ಅವರ ನಿಜಕ್ಕೂ ಶ್ಲಾಘನೀಯ. ಎಂದು ಬರಹಗಾರ ರಾಜೀವ ಅಜ್ಜೀಬಳ ಹೇಳಿದರು.
    ಅವರು ತಾಲೂಕಿನ ಹೀಪನಳ್ಳಿಯ ಬಡ್ನಮನೆಯಲ್ಲಿ ನಡೆದ ಜಾಹ್ನವಿ ಹೆಗಡೆ ಬರೆದ ಭಾವ-ಭೂಮಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಶನಿವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.
    ಅಕ್ಷರವನ್ನು ಪೊಣಿಸುವುದೇ ಒಂದು ಕಲೆ ಅಂಥದ್ದರಲ್ಲಿ ತಮ್ಮ ಅಕ್ಷರ ಕಲಾವಂತಿಕೆಯನ್ನು ಅಡುಗೆ, ಹಸೆ, ಔಷಧ, ನೆಲ, ಮನೆಗಳ ಕುರಿತು ಸೌಂದರ್ಯ ಭಾವ, ಭಾವನೆಗಳ ಓದುಗರಿಕೆ ಕಟ್ಟಿ ಕೊಟ್ಟಿದ್ದು ಸಾಧನೆಯೇ ಸರಿ ಎಂದರು.
    ಭಾವ-ಭೂಮಿ ಪುಸ್ತಕ ಬಿಡುಗಡೆಗೊಳಿಸಿದ ಮಾತನಾಡಿದ ಲೋಕಧ್ವನಿ ಸುದ್ದಿ ಸಂಪಾದಕಿ, ಪತ್ರಕರ್ತೆ ವಿನುತಾ ಹೆಗಡೆ ಮಾತನಾಡಿ,
    ಅರವತ್ತರ ಆಸುಪಾಸಲ್ಲಿ ತಮ್ಮೆಲ್ಲ ಭಾವನೆಗಳಿಗೆ ನಿಲ್ದಾಣ ಕೊಟ್ಟು ಅದನ್ನು ಪುಸ್ತಕ ರೂಪದಲ್ಲಿ ಹೊರತಂದ ಜಾನಕಜ್ಜಿ ನಿಜಕ್ಕೂ ಪ್ರತಿಯೊಬ್ಬ ಮಹಿಳೆಗೂ ಪ್ರೇರಕ. ಕೆಲಸದ ನಡುವೆ ಯಾರಿಗೂ ಸಮಯ ಇರದು, ಸಮಯದ ಅಭಾವದ ನಡುವೆಯೂ ನಾವು ನಮ್ಮ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಬರೆಯುವ ಪ್ರಯತ್ನ ಮಾಡಬೇಕು. ಆದಾಗ ಮಾತ್ರ ಪ್ರತಿಯೊಬ್ಬರಲ್ಲಿಯೂ ಅಡಕವಾಗಿರುವ ಕಲೆ, ಕಲಾತ್ಮಕ ಅಕ್ಷರಗಳು ಮೂಡಲು ಸಾಧ್ಯ. ಉತ್ತಮ ಬರವಣಿಗೆಗಳಿಗೆ ಎಂದಿಗೂ ಲೋಕಧ್ವನಿಯಂತ ಪತ್ರಿಕೆ ವೇದಿಕೆ ನೀಡುತ್ತದೆ ಎಂದರು.
    ಶರತ್ ರಾಯ್ಕರ್ ಮಾತನಾಡಿ, ಅಜ್ಜಿಯ ಹಾಗೂ ಅವರ ಪುಸ್ತಕದಲ್ಲಿ ಅಚ್ಚೊತ್ತಿದ ಪ್ರೀತಿಯ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
    ಭವ್ಯ ಸಂಗಡಿಗರು ಪ್ರಾರ್ಥಿಸಿದರು. ಕೃಷ್ಣ ಹೆಗಡೆ, ಜಾಹ್ನವಿ ಹೆಗಡೆ ವೇದಿಕೆಯಲ್ಲಿದ್ದರು. ಕೀರ್ತನಕಾರ ನಾರಾಯಣದಾಸ್ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top