ಶಿವಮೊಗ್ಗ: ಪ್ರೋಪಾತ್ ಅಕಾಡೆಮಿ ವತಿಯಿಂದ ಇಲ್ಲಿನ ಶುಭಮಂಗಳ ಸಭಾಭವನದಲ್ಲಿ ಹಮ್ಮಿಕೊಂಡಿದ್ದ 4ನೇ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್‌ಮೆಟಿಕ್ ಹಾಗೂ ವೇದಿಕ್ ಮ್ಯಾಥಮೆಟಿಕ್ಸ್ ಸ್ಪರ್ಧೆಯಲ್ಲಿ ಕಾರವಾರದ ವಿದ್ಯಾರ್ಥಿಗಳು ಸಾಧನೆ ತೋರಿದ್ದಾರೆ.
ಈ ಸ್ಪರ್ಧೆಯಲ್ಲಿ ಸುಮಾರು 650 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರವಾರ ಶಾಖೆಯಿಂದ ಸುಮಾರು 10 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಅದರಲ್ಲಿ ಪ್ರೋಪಾತ್ ಅಕಾಡೆಮಿ ಅಬಾಕಸ್ ಕಾರವಾರ ಬ್ರಾಂಚ್‌ನಿಂದ ಭಾಗವಹಿಸಿದ್ದ ಈರ್ವರು ಪ್ರಥಮ, ಈರ್ವರು ದ್ವಿತೀಯ, ಈರ್ವರು ತೃತೀಯ ಮತ್ತು ಮೂವರು ಸಮಾಧಾನಕರ ಬಹುಮಾನಗಳನ್ನು ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ವಿಜೇತರಿಗೆ ಶಿವಮೊಗ್ಗದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನೂ ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ, ಕಟೀಲು ಅಶೋಕ್ ಪೈ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ.ಸಂಧ್ಯಾ ಕಾವೇರಿ ಹಾಗೂ ಪ್ರೋಪಾತ್ ಅಕಾಡೆಮಿ ಕಂಪನಿಯ ಮಾರ್ಕೆಟಿಂಗ್ ಡೈರೆಕ್ಟರ್ ನರಹರಿ ಆರ್.ಬೋರಕರ್ ಬಹುಮಾನ ವಿತರಿಸಿದರು.
ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರೋಪಾತ್ ಅಕಾಡೆಮಿ ಅಬಾಕಸ್ ಕಾರವಾರ ಬ್ರಾಂಚ್‌ನ ಮುಖ್ಯಸ್ಥರಾದ ನರಹರಿ ಆರ್.ಬೋರಕರ್, ಅಬಾಕಸ್ ಶಿಕ್ಷಕಿ ನಂದಿತಾ ಮತ್ತು ಅಕ್ಷತಾ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.