• Slide
    Slide
    Slide
    previous arrow
    next arrow
  • NSS ಶಿಬಿರವು ಸೇವಾ ಮನೋಭಾವದ ಜೊತೆ ಶಿಸ್ತು‌ ಕಲಿಸುತ್ತದೆ: ಎಂ.ಎಸ್.ಹೆಗಡೆ

    300x250 AD

    ಹೊನ್ನಾವರ: ಕೊಳಗದ್ದೆಯ ಸಿದ್ದಿವಿನಾಯಕ ಪ್ರೌಢಶಾಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರ ಜರುಗಿತು.
    ಖರ್ವಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಭವಾನಿ ಗೌಡ ಕಾರ್ಯಕ್ರಮ ಉದ್ಘಾಟಿಸಿ ಶುಭಾಹಾರೈಸಿದರು. ಶಾಲಾಭಿವೃದ್ದಿ ಸಮಿತಿ ಸದಸ್ಯ ಎಂ.ಎಸ್.ಹೆಗಡೆ ಕಣ್ಣಿ ಮಾತನಾಡಿ, ಎನ್.ಎಸ್.ಎಸ್ ಶಿಬಿರವು ಸೇವಾ ಮನೋಭಾವನೆಯ ಜೊತೆ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಮೂಡಿಸಲಿದೆ. ಸ್ವಚ್ಚತೆಯ ಬಗ್ಗೆ ಎಲ್ಲೆಡೆ ಚರ್ಚೆಯಾದರೆ, ಎನ್.ಎಸ್.ಎಸ್ ಶಿಬಿರಾರ್ಥಿಗಳು ಸ್ವಯಂ ಸೇವಕರಾಗಿ ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಕಾಲೇಜು ವಿದ್ಯಾರ್ಥಿಗಳು ಈ ಸಂಘಟನೆಯ ಸದಸ್ಯರಾಗುವಂತೆ ಮನವಿ ಮಾಡಿದರು.
    ಕಾಲೇಜಿನ ಪ್ರಾಚಾರ್ಯರಾದ ಶಿಲ್ಪಾ ಎಚ್.ಆರ್. ಮಾತನಾಡಿ, ಶಿಕ್ಷಣದ ಜೊತೆ ಸಹಪಠ್ಯ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಶಿಬಿರವು ಮುಂಜಾನೆ ಶ್ರಮದಾನ ನಂತರ ವಿವಿಧ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಹಾಗೂ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಗ್ರಾಮೀಣ ಭಾಗದ ದಿನನಿತ್ಯ ವವ್ಯಹಾರದ ಕುರಿತು ಮಾಹಿತಿಗೆ ಈ ಶಿಬಿರವು ಬಹುಮುಖ್ಯ ಪಾತ್ರ ವಹಿಸಲಿದೆ. ಕಾಲೇಜಿನ ಗೌರವಕ್ಕೆ ದಕ್ಕೆಯಾಗದಂತೆ ವಿದ್ಯಾರ್ಥಿಗಳು ವರ್ತಿಸುವಂತೆ ಸಲಹೆ ನೀಡಿದರು.
    ಈ ವೇಳೆ ಗ್ರಾ.ಪಂ. ಉಪಾಧ್ಯಕ್ಷ ಶ್ರೀಧರ ಹೆಗಡೆ, ಸದಸ್ಯರಾದ ಶೈನಾಸ್ ಪೊಟ್ಲಿ, ಮುಖ್ಯಧ್ಯಾಪಕರಾದ ಷಣ್ಮುಖ ನಾಯ್ಕ, ಶಿಕ್ಷಕರಾದ ಅಶೋಕ ರಾಥೊಡ್, ಗಣೇಶ ಭಟ್, ಶಿಬಿರದ ಯೋಜನಾಧಿಕಾರಿ ಭಾಸ್ಕರ್  ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಭವ್ಯ ಸ್ವಾಗತಿಸಿ, ಐಶ್ವರ್ಯ ವಂದಿಸಿದರು. ಸುಚಿತ್ರಾ ಕಾರ್ಯಕ್ರಮ ನಿರ್ವಹಿಸಿದರು

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top