Slide
Slide
Slide
previous arrow
next arrow

ಸಾಕ್ಷರತಾ ಬೋಧಕರ ತರಬೇತಿ ಕಾರ್ಯಗಾರ

300x250 AD

ಹೊನ್ನಾವರ: ತಾಲೂಕಿನ ಹಳದೀಪುರ ಹಾಗೂ ಕೆಳಗಿನೂರು ಪಂಚಾಯತಿ ವ್ಯಾಪ್ತಿಯಲ್ಲಿ ಗುರುತಿಸಲಾದ ಅನಕ್ಷರಸ್ಥರಿಗೆ ಪಾಠ ಬೋಧನೆಯ ಮೂಲಕ ಅಕ್ಷರಸ್ಥರನ್ನಾಗಿಸುವ ಉದ್ದೇಶದಿಂದ ನೇಮಕ ಮಾಡಲಾದ ಬೋಧಕರಿಗೆ ಒಂದು ದಿನದ ತರಬೇತಿ ಕಾರ್ಯಗಾರ ಜರುಗಿತು.
ತರಬೇತಿಗೆ ಚಾಲನೆ ನೀಡಿದ ಇ.ಓ. ಸುರೇಶ ನಾಯ್ಕ ಮಾತನಾಡಿ, ಬೋಧಕರಾದವರು ತಮ್ಮ ವ್ಯಾಪ್ತಿಯ ಮನೆ- ಮನೆಗಳಲ್ಲಿ ಅಕ್ಷರ ಬೆಳಕನ್ನು ಬೆಳಗುವ ಕಾರ್ಯ ಮಾಡಬೇಕು. ಅನಕ್ಷರಸ್ಥರ ಬಾಳಿಗೆ ಜ್ಞಾನವನ್ನು ಮೂಡಿಸುವಲ್ಲಿ ಬೋಧಕರ ಪಾತ್ರ ಮಹತ್ತರವಾಗಿದೆ ಎಂದರು.
ಸಾಕ್ಷರತಾ ಜಿಲ್ಲಾ ನೋಡೆಲ್ ಅಧಿಕಾರಿಗಳು ಡಯಟ್ ಉಪನ್ಯಾಸಕ ಚಂದ್ರಹಾಸ ರಾಯ್ಕರ ಮಾತನಾಡಿ, ಸಾಕ್ಷರತಾ ಕಾರ್ಯಕ್ರಮ ಒಂದು ಪುಣ್ಯದ ಕಾರ್ಯವಾಗಿದ್ದು, ಓದು ಬರಹ ಬಾರದವರಿಗೆ ಒಂದು ವರದಾನ. ಆ ನಿಟ್ಟಿನಲ್ಲಿ ಬೋಧಕರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಿ ಅನಕ್ಷರಸ್ಥರ ಪ್ರೀತಿಗೆ ಪಾತ್ರರಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ವಹಿಸಿದ್ದರು. ಬಿ.ಆರ್.ಸಿ ಸಮನ್ವಯಾಧಿಕಾರಿ ಎಸ್.ಎಂ.ಹೆಗಡೆ, ತಾಲೂಕ ಸಾಕ್ಷರತಾ ಸಂಯೋಜಕಿ ಸಾಧನಾ ಬರ್ಗಿ ಮತ್ತಿತರರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ರಾಮಚಂದ್ರ ಹಳದೀಪುರ ಬೋಧಕರಿಗೆ ತರಬೇತಿ ನೀಡಿದರು. ವಯಸ್ಕರ ಶಿಕ್ಷಣ ಇಲಾಖೆಯ ದಿಲೀಪ ನಾಯಕ ಕಾರ್ಯಗಾರಕ್ಕೆ ಭೇಟಿ ನೀಡಿ ಮಾಹಿತಿ ನೀಡಿದರು.

300x250 AD
Share This
300x250 AD
300x250 AD
300x250 AD
Back to top