ಕಾರವಾರ: ಪ್ರಕೃತಿ ಅಧ್ಯಯನ ಮತ್ತು ಕರಾವಳಿ ಚಾರಣ ಶಿಬಿರಕ್ಕಾಗಿ ಕರ್ನಾಟಕದ ಕಾಶ್ಮೀರವೆಂದೇ ಪ್ರಸಿದ್ಧಿ ಪಡೆದ ಕಾರವಾರಕ್ಕೆ ಆಗಮಿಸಿದ್ದ ಮಂಡ್ಯದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ರೋವರ್ಸ್ ಕ್ರೀವ್ ನಗರದ ಟ್ಯಾಗೋರ್ ಕಡಲತೀರವನ್ನ ಸ್ವಚ್ಛಗೊಳಿಸಿದರು.
ರೋವರ್ಸ್ ಸ್ಕೌಟ್ಸ್ ಲೀಡರ್ ಎಸ್.ಕೆ.ವೀರೇಶ, ಸಹಾಯಕ ರೋವರ್ಸ್ ಲೀಡರ್ ನಂದೀಶ್‌ಕುಮಾರ್ ಎಂ.ಎಸ್., ಅಧ್ಯಾಪಕ ಗಿರೀಶ್ ಆರ್., ಸಂತೋಷಕುಮಾರ್ ಎಂ., ಹಾಗೂ 13 ಮಂದಿ ರೋವರ್ಸ್ ವಿದ್ಯಾರ್ಥಿಗಳು ಮೀನುಗಾರಿಕೆ & ಮೀನುಗಾರರ ಜ್ವಲಂತ ಸಮಸ್ಯೆಗಳ ಕ್ಷೇತ್ರ ಕಾರ್ಯ ಮತ್ತು ಅಧ್ಯಯನ ಮಾಡಿರುವುದರ ಜೊತೆ ಜೊತೆಗೆ ಟ್ಯಾಗೋರ್ ತೀರದಲ್ಲಿದ್ದ ಪ್ಲಾಸ್ಟಿಕ್, ಬಾಟಲಿಗಳು ಮತ್ತು ಕಸವನ್ನು ತೆಗೆದು ಸ್ವಚ್ಚತಾ ಸೇವೆಯನ್ನು ಮಾಡಿರುವುದು ಅಮೋಘವಾಗಿದೆ.
ವಿದ್ಯಾರ್ಥಿಗಳ ಸಮಾಜಮುಖಿ ಕಾರ್ಯಗಳನ್ನು ಕಾರವಾರದ ಜಗದೇಶ ಬಿರ್ಕೋಡಿಕರ, ಗಣೇಶ ಬಿಷ್ಣಣ್ಣನವರ ಮತ್ತು ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಘಟಕ ಕಾರವಾರ ಹಾಗೂ ಕರಾವಳಿ ಕಾವಲು ಪಡೆಯು ಅಭಿನಂದಿಸಿ, ಪ್ರಶಂಸೆ ವ್ಯಕ್ತಪಡಿಸಿದರು.