• Slide
    Slide
    Slide
    previous arrow
    next arrow
  • ಎಂಎಲ್‌ಆರ್ ಮಧುರ ಸಾಹಿತ್ಯ ಪ್ರಶಸ್ತಿ ಪಟ್ಟಿ ಪ್ರಕಟ: ಡಾ. ರಶ್ಮಿ ಪ್ರಥಮ

    300x250 AD

    ಕಾರವಾರ: ವಿಕ್ರಮ ಪ್ರಕಾಶನದಿಂದ ಪ್ರಶಸ್ತಿಗಾಗಿ ಮುಕ್ತ ಜಾಗತಿಕ ಕಥಾಸ್ಪರ್ಧೆ 2022ರ ಫಲಿತಾಂಶ ಪ್ರಕಟವಾಗಿದ್ದು, ಪ್ರಥಮ ಬಹುಮಾನವನ್ನು ‘ಈ ಸಲ ಕಪ್..’ ಎಂಬ ಕತೆಗಾಗಿ ಡಾ.ರಶ್ಮಿ ಕೆ.ಎಮ್. ಆಯ್ಕೆಯಾಗಿದ್ದಾರೆ.
    ಬಹುಮಾನ ಮೊತ್ತ 7500 ರೂ. ಮತ್ತು ಪ್ರಶಸ್ತಿ ಫಲಕವಿದ್ದು, ವಿಜಯ ಕೋಟೆಮನೆ ಅವರ ‘ಜುಲ್ಮಾನೆಯಾಗದ ಕನವರಿಕೆಗಳು’ ದ್ವಿತೀಯ ಬಹುಮಾನ ಗಳಿಸಿದ್ದು, 4000 ರೂ. ಬಹುಮಾನ ಮತ್ತು ಪ್ರಶಸ್ತಿ ಫಲಕವಿರುತ್ತದೆ. ಅನಿತಾ ಶೆಟ್ಟಿಯವರ ‘ಕುಡಾರಿ’ ತೃತೀಯ ಬಹುಮಾನಕ್ಕೆ 2000ರೂ. ಮತ್ತು ಪ್ರಶಸ್ತಿಗಳು ಘೋಷಿಸಲಾಗಿದೆ.
    ಗೌರಿ ಚಂದ್ರ ಕೇಸರಿಯವರ ಕತೆ, ಕಮಲಕ್ಕಿಲ್ಲ ಕೆಸರ ಕಳಂಕ ಸಮಾಧಾನಕರ ಪ್ರಶಸ್ತಿ 1000 ಸಾವಿರ ನಗದು ಮತ್ತು ನೆನಪಿನ ಕಾಣಿಕೆಗೆಗೆ ಪಾತ್ರವಾಗಿದೆ ಎಂದು ವಿಕ್ರಮ ಪ್ರಕಾಶನದ ಹರಿಪ್ರಸಾದ ಮೋದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಎಮ್.ಎಲ್.ಆರ್ ಮಧುರ ಸಾಹಿತ್ಯ ಪ್ರಶಸ್ತಿ-2022 ಪ್ರದಾನವನ್ನು ಫೆ.26 ರಂದು ಬೆಂಗಳೂರಿನ ಕ.ಸಾ.ಪ. ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಕಥಾ ಸ್ಪರ್ಧೆಗೆ ಕತೆಗಾರ, ಅಂಕಣಗಾರ ಪ್ರಾಂಶುಪಾಲರಾಗಿರುವ ಆರ್.ಜಿ.ಹೆಗಡೆ ಮತ್ತು ಕತೆಗಾರರ ಮತ್ತು ಅಂಕಣಗಾರ ಸಂತೋಷಕುಮಾರ ಮೆಹೆಂದಳೆ ನಿರ್ಣಾಯಕರಾಗಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top