ಕಾರವಾರ: ಮಹಿಳೆ ಸ್ವಾವಲಂಬಿಯಾಗಲು, ಸಮಾಜದಲ್ಲಿ ಅವರ ಸ್ವಾಭಿಮಾನಕ್ಕೆ ಯಾವುದೇ ರೀತಿ ಧಕ್ಕೆ ಬಾರದಿರುವ ಹಾಗೆ ನೀವು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ ಆಡಳಿತ ವಿಭಾಗದ ಉಪಕಾರ್ಯದರ್ಶಿ ಕೆ.ಜಯಲಕ್ಷ್ಮಿ ಹೇಳಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಾಂತ್ವನ ಘಟಕದ ಪಗ್ರತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಬ್ಬ ದಬ್ಬಾಳಿಕೆಗೆ ಒಳಗಾದ ಅಥವಾ ಬೇರೊಬ್ಬರಿಂದ ಮೋಸಹೊದ ಮಹಿಳೆಗೆ ಕಷ್ಟ ಅಂತ ಬಂದಾಗ ನಮ್ಮ ಸಹಕಾರ, ಬೆಂಬಲ ,ಸಹಾಯ ನೀಡುವುದು ನಮ್ಮ,ನಿಮ್ಮ ಕರ್ತವ್ಯವಾಗಿರುತ್ತದೆ. ಈ ಕಾರ್ಯವನ್ನು ನೀವು ನಿಭಾಯಿಸಿಕೊಂಡು ಬಂದಿದ್ದು ಶ್ಲಾಘನೀಯ, ನಿಮ್ಮ ಪರಿಹಾರ ಹಾಗೂ ಅವರ ಸಹಕಾರ ಕೂಡಾ ಮುಖ್ಯವಾಗಿರುತ್ತದೆ. ಅದೇ ರೀತಿ ಮನೆಗೆ ಭೇಟಿ ನೀಡಿ ಪರಿಹಾರಕ್ಕೆ ಒಪ್ಪದಿದ್ದಲ್ಲಿ ಆದಷ್ಟು ದೂರವಾಣಿ ಮೂಲಕ ಸಂಪರ್ಕಿಸಿ ಪರಿಹಾರ ನೀಡಲು ಪ್ರಯತ್ನ ಮಾಡಿ ಎಂದು ಸಾಂತ್ವನ ಘಟಕದವರಿಗೆ ಹೇಳಿದರು.
ಸಭೆಯಲ್ಲಿ ಡಿವೈಎಸ್‌ಪಿ ವೆಲಂಟೈನ್ ಡಿಸೋಜಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಶ್ಯಾಮಲಾ, ಸಾಂತ್ವನ ಘಟಕದ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.