• Slide
    Slide
    Slide
    previous arrow
    next arrow
  • ನೆಹರು‌ ಸರ್ ನೇಮ್ ಯಾಕೆ ಇಟ್ಟುಕೊಂಡಿಲ್ಲ: ಗಾಂಧಿ ಕುಟುಂಬಕ್ಕೆ ಮೋದಿ‌ ಪ್ರಶ್ನೆ

    300x250 AD

    ನವದೆಹಲಿ: ರಾಜ್ಯಸಭೆಯಲ್ಲಿ ಇಂದು ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

    ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಿ ಹೆಚ್ಚಿನ ಎಲ್ಲಾ ಯೋಜನೆಗಳಿಗೆ ನೆಹರು, ಗಾಂಧಿ ಹೆಸರನ್ನು ಇಟ್ಟಿದೆ ಎನ್ನುವುದನ್ನು ಪತ್ರಿಕೆಯಲ್ಲಿ ನೋಡಿದ್ದೇನೆ. ನೆಹರು ಅಷ್ಟು ಗ್ರೇಟ್ ಎಂದಾದಲ್ಲಿ ಅವರ ಕುಟುಂಬದವರೇಕೆ ನೆಹರು ಸರ್ ನೇಮ್ ಇರಿಸಿಕೊಂಡಿಲ್ಲ ಎಂದು ಪ್ರಶ್ನೆ ಮಾಡಿದರು.

    ಕಾಂಗ್ರೆಸ್ ಪಕ್ಷದ ತಪ್ಪುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರಧಾನಿ ಮೋದಿ, ಸಾಮಾನ್ಯವಾಗಿ ನಮ್ಮ ಪಕ್ಷದ ಮೇಲೆ ಆರೋಪಗಳನ್ನು ವಿರೋಧ ಪಕ್ಷಗಳು ಮಾಡುತ್ತಲೇ ಇರುತ್ತವೆ. ದೇಶದ ಯಾವುದೇ ಕಾರ್ಯಕ್ರಮಗಳಾದರೂ ಅಲ್ಲಿ ನೆಹರು ಅವರ ಹೆಸರು ಹೇಳಲೇಬೇಕು ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತವೆ. ಅವರು ದೇಶದ ಮೊದಲ ಪ್ರಧಾನಿ, ಅವರ ಹೆಸರನ್ನು ನಾವು ಹೇಳುತ್ತೇವೆ. ಕೆಲವೊಮ್ಮೆ ನಮ್ಮಿಂದಲೂ ಅಚಾತುರ್ಯಗಳಾಗುತ್ತವೆ. ಅವರ ಹೆಸರು ಹೇಳದೇ ಬಿಟ್ಟಿರುತ್ತೇವೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷ ಯಾವ ರೀತಿ ವರ್ತಿಸುತ್ತದೆ ಎನ್ನುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಅಗತ್ಯವಿದಲ್ಲಿ ಅವರ ಹೆಸರು ಹೇಳಿದ್ದೇವೆ. ತಪ್ಪಾದಲ್ಲಿ ಸರಿ ಪಡಿಸಿಕೊಂಡಿದ್ದೇವೆ. ವಿರೋಧ ಪಕ್ಷ ಅಧಿಕಾರದಲ್ಲಿದ್ದಾಗ ಕನಿಷ್ಠ 600 ಯೋಜನೆಗಳಿಗೆ ನೆಹರು ಹಾಗೂ ಗಾಂಧಿ ಹೆಸರು ನೀಡಿದೆ. ಪ್ರತಿ ಬಾರಿಯೂ ನೆಹರು ಹೆಸರು ಹೇಳಿಲ್ಲ ಎಂದಾದರೆ ಅವರು ಅದನ್ನು ದೊಡ್ಡ ತಪ್ಪು ಎನ್ನುವಂತೆ ಬಿಂಬಿಸುತ್ತಾರೆ ಎಂದು ಹೇಳಿದ್ದಾರೆ.

    300x250 AD

    ಆದ್ರೆ ನಾನು ಇಲ್ಲಿ ಎಲ್ಲರಿಗೂ ಒಂದು ಮಾತು ಹೇಳಲು ಬಯಸುತ್ತೇನೆ. ಈ ದೇಶ ಯಾವುದೇ ಕುಟುಂಬದ ರಿಯಲ್ ಎಸ್ಟೇಟ್ ಆಸ್ತಿಯಲ್ಲ. ನೆಹರು ಹೆಸರು ಹೇಳಿಲ್ಲ ಎಂದಾಗ ತಲೆಕೆಡಿಸಿಕೊಳ್ಳುವ ಇವರಿಗೆ ನಾನು ಒಂದೇ ಪ್ರಶ್ನೆ ಕೇಳಲು ಬಯಸುತ್ತೇನೆ.ನೀವು ನಿಮ್ಮ ಸರ್‌ನೇಮ್‌ನಲ್ಲಿ ಯಾಕೆ ಅವರ ಹೆಸರು ಇಟ್ಟುಕೊಂಡಿಲ್ಲ ಎಂದು ಪ್ರಶ್ನೆ ಮಾಡಿದರು.

    ಅವರ ತಲೆಮಾರಿನ ವ್ಯಕ್ತಿ ನೆಹರೂ ಸರ್‌ನೇಮ್ ಅನ್ನು ಹೊಂದಲು ಏಕೆ ನಾಚಿಕೆ ಪಟ್ಟುಕೊಳ್ಳುತ್ತಾರೆ ಅನ್ನೋದೆ ನನಗೆ ಅರ್ಥವಾಗಿಲ್ಲ ಎಂದು ಹೇಳುವ ಮೂಲಕ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top