Slide
Slide
Slide
previous arrow
next arrow

ಹೋರಾಟಕ್ಕೆ 32 ನೇ ವರ್ಷ: ಬೆಂಗಳೂರಿನಲ್ಲಿ ಮೊಳಗಲಿದೆ ಅರಣ್ಯವಾಸಿಗಳ ಹೋರಾಟದ ಧ್ವನಿ

300x250 AD

ಶಿರಸಿ: ಅರಣ್ಯ ಭೂಮಿಯನ್ನೇ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅವಲಂಬಿತವಾಗಿರುವ  ಅರಣ್ಯವಾಸಿಗಳ ಕಳೆದ ೩೨ ವರ್ಷದ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟದ ಮಜಲುಗಳು ಹೋರಾಟದ ಇತಿಹಾಸದ ಪುಟಗಳಿಗೆ ಸೇರಲ್ಪಟ್ಟಿದ್ದೆ. ಸುಫ್ರೀಂ ಕೋರ್ಟಿನ ಇತ್ತೀಚಿನ ಅನಧೀಕೃತ ಒತ್ತುದಾರರನ್ನು ಒಕ್ಕಲೆಬ್ಬಿಸುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು ಆತಂಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಭೂಮಿ ಹಕ್ಕಿಗಾಗಿ ಫೆ.10ರಂದು ಅರಣ್ಯವಾಸಿಗಳು ಬೆಂಗಳೂರಿನಲ್ಲಿ ಹೋರಾಟದ ಧ್ವನಿಯನ್ನು ಮೊಳಗಿಸಲಿದ್ದಾರೆ.

  ಅರಣ್ಯವಾಸಿಗಳು ದಿನನಿತ್ಯ ಒಕ್ಕಲೆಬ್ಬಿಸುವ ಆತಂಕದ ಜೊತೆಯಲ್ಲಿ, ಅರಣ್ಯ ಸಿಬ್ಬಂದಿಗಳ ದೌರ್ಜನ್ಯ, ಕಿರುಕುಳ ಎದುರಿಸುತ್ತಿದ್ದಾರೆ. ಅರಣ್ಯ ಭೂಮಿ ಹಕ್ಕಿಗಾಗಿ ಕಾನೂನಾತ್ಮಕ ತೊಡಕಿನಿಂದ ಕಾನೂನಿನ ಸಂಕೋಲೆಯಲ್ಲಿ ಸಿಲುಕಿ, ಭೂಮಿ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಕಳೆದ 3. ದಶಕಗಳಿಂದ ಹೋರಾಟದ ಮಜಲುಗಳು ಗಟ್ಟಿತನ ತೋರಿಸಿದರೂ ಭೂಮಿ ಹಕ್ಕಿನಿಂದ ವಂಚಿತರಾಗುತ್ತಿರುವುದು ವಿಷಾದಕರ.

 ಕರ್ನಾಟಕ ರಾಜ್ಯದಲ್ಲಿ 295048 ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ 15798ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದ್ದು, ದೇಶದಲ್ಲಿ ಅರಣ್ಯ ಪ್ರದೇಶ ಮತ್ತು ಅರಣ್ಯವಾಸಿಗಳ ಅವಲಂಭಿತ ಸಂಖ್ಯೆಯಲ್ಲಿ 5 ನೇ ಸ್ಥಾನದಲ್ಲಿದ್ದರೂ, ಹಕ್ಕು ಪತ್ರ ಪಡೆಯುವಲ್ಲಿ ಕರ್ನಾಟಕ 16 ನೇ ಸ್ಥಾನದಲ್ಲಿ ಇರುವುದಲ್ಲದೇ ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ವಿಫಲವಾಗಿ, ತಿರಸ್ಕಾರಗೊಂಡ ಅರಣ್ಯವಾಸಿಗಳು ನಿರಾಶ್ರಿತರಾಗುವ ಭೀತಿಯಲ್ಲಿ 5000ಕ್ಕೂ ಮಿಕ್ಕಿ ಅರಣ್ಯವಾಸಿಗಳು ಫೇಬ್ರವರಿ 10ರ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ ಎಂದು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ವಿಶ್ಲೇಷಿಸಿದ್ದಾರೆ.

300x250 AD

ಸೌಲಭ್ಯ ಉಂಟು, ಮಂಜೂರಿ ಇಲ್ಲ:
   ವಾಸ್ತವ್ಯದ ಕಟ್ಟಡಕ್ಕೆ ಸ್ಥಳೀಯ ಸಂಸ್ಥೆಯಿಂದ ಇಮಾರತ್ತಿನ ಕಟ್ಟಡ ನಂಬರ್ ದಾಖಲಿಸಿದ್ದು ಅರಣ್ಯವಾಸಿಗಳಿಗೆ ನೀರು, ರಸ್ತೆ, ವಿದ್ಯುತ್, ರೇಷನ್ ಕಾರ್ಡ, ಮತದಾರರ ಚೀಟಿ, ಶಿಕ್ಷಣ ಕೇಂದ್ರ ಎಲ್ಲವನ್ನೂ ನೀಡಿದಾಗಿಯೂ ಅನಧೀಕೃತ ಒತ್ತುದಾರರಿದ್ದು ಒಕ್ಕಲೆಬ್ಬಿಸುವ ಭೀತಿಯಲ್ಲಿ ಸಿಲುಕಿದ್ದಾರೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

Share This
300x250 AD
300x250 AD
300x250 AD
Back to top