• Slide
    Slide
    Slide
    previous arrow
    next arrow
  • ಯಶಸ್ವಿಯಾಗಿ ಸಂಪನ್ನವಾದ ʼಬಿಜಿಎಸ್ ಕಲಾರತಿʼ ವಾರ್ಷಿಕ ಸ್ನೇಹ ಸಮ್ಮೇಳನ

    300x250 AD

    ಕುಮಟಾ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಉತ್ತರ ಕನ್ನಡ ಶಾಖಾಮಠದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ಮಿರ್ಜಾನ್‌ ಶಾಖಾಮಠದ ಪೂಜ್ಯರಾದ ಬ್ರಹ್ಮಚಾರಿ ನಿಶ್ಚಲಾನಂದನಾಥಜೀಯವರ ಉಪಸ್ಥಿತಿಯಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್(ರಿ )ನ ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಮಿರ್ಜಾನಿನಲ್ಲಿ 2022-23ನೇ ಸಾಲಿನ ʼಬಿಜಿಎಸ್ ಕಲಾರತಿʼ ವಾರ್ಷಿಕ ಸ್ನೇಹ ಸಮ್ಮೇಳನ ಅತ್ಯಂತ ವೈಭವ, ಸಡಗರ ಮತ್ತು ಸಂಭ್ರಮದಿಂದ ನಡೆಯಿತು.


    ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ʼಬಿಜಿಎಸ್ ಕಲಾರತಿʼ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರ ಇರಬೇಕು, ಮೊಬೈಲ್ ಗೀಳಿನಿಂದ ಹೊರಬಂದು, ಅಧ್ಯಯನ, ಕ್ರೀಡೆ, ಕಲೆ, ಸಂಗೀತ, ನೃತ್ಯ, ವಿಜ್ಞಾನಕ್ಕೆ ಸಂಬಂಧಿಸಿದ ಪರಿಕರಗಳ ತಯಾರಿಕೆ ಇತ್ಯಾದಿ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದಾ ಕ್ರಿಯಾಶೀಲರಾಗಿರಬೇಕು. ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ವಿವಿಧ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅಲ್ಲದೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠ ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ಕಲೋತ್ಸವ, ಕ್ರೀಡೋತ್ಸವ ಮತ್ತು ವಿಜ್ಞಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿಕೊಡುತ್ತಿದೆ ಎಂದರು. ಅಲ್ಲದೇ ಇಂದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಸ್ಕೃತ, ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ನಿರೂಪಣೆ ಮಾಡುತ್ತಿರುವುದು ತುಂಬಾ ಸಂತೋಷದ ಸಂಗತಿ ಎಂದು ಸರ್ವರಿಗೂ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಪೂಜ್ಯರು ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಮಿರ್ಜಾನಿನಲ್ಲಿಓದಿ ವೈದ್ಯಕೀಯ ಪದವಿ ಹೊಂದಿದ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ಹಾಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವ ಸ್ಮರಣಿಕೆ ನೀಡಿ ಆಶೀರ್ವದಿಸಿದರು. ಅಲ್ಲದೇ 2019-20, 2020-21 ಮತ್ತು 2021-2022ನೇ ಸಾಲಿನ 10ನೇ ತರಗತಿಯಲ್ಲಿ ಉನ್ನತ ಶ್ರೇಣಿ ಪಡೆದ, ಹಾಗೂ ಕ್ರೀಡೆ, ಕಲೆ, ಸಂಗೀತ, ನೃತ್ಯ, ಭಗವದ್ಗೀತೆ ಶ್ಲೋಕ ಪಠಣ, ಒಲಿಂಪಿಯಾಡ್, ನೆಲ್ಟಾಸ್, ಬೆಬ್ರಾಸ್ ವಿವಿಧ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೇ ತೋರಿ ವಿಜೇತರಾದ ಬಿಜಿಎಸ್ ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಬಿಜಿಎಸ್ ಸಂಸ್ಥೆಯಲ್ಲಿ ಓದಿ, ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿನಿ ಸಪ್ನಾ ಪೈ ತಮಗೆ ಉತ್ತಮ ಸಂಸ್ಕಾರ ಶಿಕ್ಷಣ ಬೋಧಿಸಿದ ತಮ್ಮ ತಾಯಿ ಹಾಗೂ ಬಿಜಿಎಸ್ ನ ಎಲ್ಲಾ ಶಿಕ್ಷಕ ವೃಂದವನ್ನು ಸ್ಮರಿಸಿ, ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡರು.


    ಕುಮಟಾ ಡಯೆಟ್ ಪ್ರಾಂಶುಪಾಲರಾದ ಎನ್. ಜಿ. ನಾಯ್ಕ ಮಾತನಾಡಿ ಬಿಜಿಎಸ್ ಸಂಸ್ಥೆಯಲ್ಲಿ ಓದಿ, ವೈದ್ಯಕೀಯ ಪದವಿ ಪಡೆದ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ಹಾಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಇಂದು ಸನ್ಮಾನ ಮಾಡಿರುವುದು ಶ್ಲಾಘನೀಯ, ಇದು ಎಲ್ಲ ಮಕ್ಕಳಿಗೂ ಒಂದು ಪ್ರೇರಣೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಎಲ್. ಭಟ್ ಮಾತನಾಡಿ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಪಠ್ಯದ ಜೊತೆ ಜೊತೆಗೆ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ನಡೆಸಿ, ಉತ್ತಮ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು. ಕುಮಟಾ ತಾಲೂಕಿನ ಸಿಪಿಆಯ್ ತಿಮ್ಮಪ್ಪ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಮೌಲ್ಯವನ್ನು ಬೆಳೆಸಿಕೊಂಡು, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಎಲ್ಲರಿಗೂ ಮಾದರಿಯಾಗಬೇಕು. ಇದರಿಂದ ಸಮಾಜದಲ್ಲಿ ಅಪರಾಧಗಳ ಪ್ರಮಾಣ ಕಡಿಮೆಯಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಲೀನಾ ಎಂ. ಗೊನೇಹಳ್ಲಿಯವರು ಶಾಲಾ ವಾರ್ಷಿಕ ವರದಿ ವಾಚಿಸಿದರು.

    300x250 AD

    ಭದ್ರಾವತಿ ಎಓ ಜಗದೀಶ, ಆದಿಚುಂಚನಗಿರಿ ಕಂಪೋಸಿಟ್ ಪಿಯು ಕಾಲೇಜಿನ್ ಪ್ರಾಂಶುಪಾಲೆ ಶ್ರೀಮತಿ ಡಾ|| ಹರಿಣಾಕ್ಷಿ, ಆದಿಚುಂಚನಗಿರಿ ಇಂಗ್ಲೀಷ್ ಮಿಡೀಯಮ್ ಮತ್ತು ಬಿಜಿಎಸ್ ರೆಸಿಡೆನ್ಸಿಯಲ್ ಸ್ಕೂಲ್, ಶಿವಮೊಗ್ಗ ಪ್ರಾಂಶುಪಾಲೆ ಶ್ರೀಮತಿ ಹೇಮಾ, ಉದ್ಯಮಿ ಗೋವಿಂದ ಗೌಡ, ಬಸವರಾಜ, ಅಭಿಯಂತರರು, ಶಿವಮೊಗ್ಗ, ಗುರುಪ್ರಸಾದ ಪ್ರೌಢಶಾಲೆ, ಮಲ್ಲಾಪುರ ಮುಖ್ಯಾಧ್ಯಾಪಕರು ಎಮ್. ಟಿ. ಗೌಡ,ನಿವೃತ್ತ ಮುಖ್ಯಾಧ್ಯಾಪಕ ಎಸ್.ಎನ್. ಭಟ್, ಉದ್ಯಮಿ ಮಂಜು ಪಟಗಾರ, ವೆಂಕಟೇಶ ಶಿವಮೊಗ್ಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪೂಜ್ಯರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯಾತಿಗಣ್ಯರನ್ನು ಸನ್ಮಾನಿಸಿದರು.


    ಶುಭಾಂಗಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಮೃದ್ಧಿ ಮತು ಸಂಗಡಿಗರ ಜೊತೆ ಸರ್ವರು ನಾಡಗೀತೆ ಹಾಡಿದರು. ಆರವ್ ಮತ್ತು ಸಂಗಡಿಗರು ವೇದಘೋಷ ಮೊಳಗಿಸಿದರು. ಶುಮೈಲಾ ಆಂಗ್ಲ ಭಾಷೆಯಲ್ಲಿ ಸ್ವಾಗತಿಸಿದರೆ, ಸಿರಿ ಸಂಸ್ಕೃತ ಭಾಷೆಯಲ್ಲಿ ಸ್ವಾಗತಿಸಿದಳು. ಪೃಥ್ವಿ ಪ್ರಭು ಸಂಸ್ಕೃತದಲ್ಲಿ, ನಿಸರ್ಗ ಪಟಗಾರ ಮತ್ತು ತನುಶ್ರೀ ನಾಯ್ಕ ಕನ್ನಡದಲ್ಲಿ, ನಿಶಾಂತ್ ಗೌಡ ಆಂಗ್ಲ ಭಾಷೆಯಲ್ಲಿ, ಶುಮೈಲಾ ಹಿಂದಿಯಲ್ಲಿ ಕಾರ್ಯಕ್ರಮ ನಿರೂಪಿಸಿ ಭಾಷಾ ವೈಶಿಷ್ಟದ ಮಹತ್ವವನ್ನು ಎಲ್ಲೆಡೆ ಪಸರಿಸಿದರು. ಶಾಲಾ ವಿದ್ಯಾರ್ಥಿಗಳ ವೈವಿಧ್ಯಮಯ ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮ ಜನಮನಸೂರೆಗೊಂಡಿತು. ಪಾಲಕರು, ಸಮಸ್ತ ನಾಗರಿಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ಸಮಸ್ತ ವಿದ್ಯಾರ್ಥಿಗಳು, ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಅದ್ಭುತ ಯಶಸ್ಸಿಗೆ ಕಾರಣೀಭೂತರಾದರು.

    Share This
    300x250 AD
    300x250 AD
    300x250 AD
    Leaderboard Ad
    Back to top