ಶಿರಸಿ: ಶಿರಸಿ ಲಯನ್ಸ್ ಕ್ಲಬ್’ನಿಂದ ನಿರುಪಯುಕ್ತ ವಿದ್ಯುತ್ ಉಪಕರಣಗಳ ಸಂಗ್ರಹ ಕಾರ್ಯ ಶಿರಸಿಯ ವಿವಿಧ ಭಾಗಗಳಲ್ಲಿ ನಡೆಯಿತು. ಆತ್ರೆಯ ಮೆಡಿಕಲ್ಸನಿಂದ ಆರಂಭವಾದ ಸಂಗ್ರಹ ಕಾರ್ಯಕ್ಕೆ ಡಾ.ಉಲ್ಲಾಸ ಜನ್ನು, ವಿವೇಕಾನಂದ ವೈದ್ಯ, ಡಾ. ಆಶಾ ಪ್ರಭು ಹಾಗೂ ಅನೇಕರು e-ತ್ಯಾಜ್ಯವನ್ನು ಲಯನ್ಸ ಕ್ಲಬ್ ಸದಸ್ಯರುಗಳಿಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಲಯನ್ಸ ಕ್ಲಬ್ ಸಿರಸಿ ಅಧ್ಯಕ್ಷ ಲ. ತ್ರಿವಿಕ್ರಮ ಪಟವರ್ಧನ, ಜನರಲ್ಲಿ ಈ ತ್ಯಾಜ್ಯವನ್ನು ಫೆ.12 ರವರೆಗೆ ಗೌರಿ ಫುಯೆಲ್ಸ ಬಳಿ ತಂದುಕೊಡಬಹುದು ಎಂದರು. e-ತ್ಯಾಜ್ಯ ಕೊಆರ್ಡಿನೇಟರ (ಉತ್ತರ ಕನ್ನಡ ಜಿಲ್ಲೆ) ಲಯನ್ ಅಶೋಕ ಹೆಗಡೆ, ಲಯನ್ಸ ಕಾರ್ಯಕ್ರಮ ಜಿಲ್ಲೆಯಾದ್ಯಂತ ಜನರ ಅತ್ಯುತ್ತಮ ಪ್ರೋತ್ಸಾಹ ಪಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯದರ್ಶಿ ಲ. ರಮಾ ಪಟವರ್ಧನ, ರೀಜನ್ ಚೇರಪರ್ಸನ್ ಲ. ಜ್ಯೋತಿ ಭಟ್, ಲ. ಶ್ರೀಕಾಂತ್ ಹೆಗಡೆ, ಲ. ಅಶ್ವಥ್ ಹೆಗಡೆ, ಲ. ವಿನಾಯಕ ಭಾಗ್ವತ, ಲ. ಶರಾವತಿ ಭಟ್, ಲ. ಗುರುರಾಜ ಹೊನ್ನಾವರ e-ತ್ಯಾಜ್ಯ ಸಂಗ್ರಹಕ್ಕೆ ಸಹಕರಿಸಿದರು.