ಅಂಕೋಲಾ: ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಬರ್ಡ್ ಕಾಲೋನಿಯಲ್ಲಿನ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಇಲ್ಲಿಯ ಜನರ ಓಡಾಟಕ್ಕೂ ಕಷÀ್ಟಕರವಾಗಿದೆ. ತಕ್ಷಣ ರಸ್ತೆ ಸರಿಪಡಿಸದಿದ್ದರೆ ಬೇಲೆಕೇರಿ ಕ್ರಾಸ್ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್ ರಾಜ್ಯ ಮಹಿಳಾ ಪ್ರಮುಖರಾದ ಮೋಹಿನಿ ನಾಯ್ಕ ಹೇಳಿದ್ದಾರೆ.
ಹಟ್ಟಿಕೇರಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಸೀಬರ್ಡ್ ಕಾಲೋನಿಯ ಬಹುತೇಕ ರಸ್ತೆ ಮತ್ತು ಅಡ್ಡರಸ್ತೆಗಳಿಗೆ ಹಾಕಿದ ಡಾಂಬರು ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಮಣ್ಣಿನಿಂದ ಕೂಡಿದೆ. ಇಲ್ಲಿ ಡಾಂಬರು ಕಾಣದೆ ವರ್ಷಗಳೇ ಕಳೆದಿವೆ. ಶಾಸಕಿ ರೂಪಾಲಿ ನಾಯ್ಕ ಎಲ್ಲೆಡೆ ರಸ್ತೆ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಈ ಭಾಗದ ರಸ್ತೆ ಅವರಿಗೆ ಕಾಣಲಿಲ್ಲವೆ. ಇಲ್ಲಿಯ ಜನರ ಗೋಳು ಅವರ ಸಮಸ್ಯೆ ಕೇಳಿಸಲಿಲ್ಲವೆ. ಇಲ್ಲಿಯ ಜನರು ಹಲವಾರು ಭಾರಿ ಶಾಸಕರ ಬಳಿ ಮನವಿ ಮಾಡಿದ್ದಾರೆ. ಇಲ್ಲಿಯ ರಸ್ತೆ ಅಭಿವೃದ್ಧಿಪಡಿಸಲು ತಿಳಿಸಿದರು. ಈ ಭಾಗಕ್ಕೆ ಮಾತ್ರ ಶಾಸಕರು ಯಾಕೆ ತಾತ್ಸಾರ ಭಾವನೆ ತೋರುತ್ತಿದ್ದಾರೆ ಎಂದರು.
ಮಳೆ ಬಂದರೆ ಇಲ್ಲಿಯ ರಸ್ತೆಗಳು ಕೆಲವೆಡೆ ಕೆಸರುಗದ್ದೆಯಂತಾಗಿ ಜನರ ಓಡಾಟಕ್ಕೆ ತೊಂದರೆಯಾಗುತ್ತಿದ್ದೆ. ಚುನಾವಣಾ ಸಂದರ್ಭದಲ್ಲಿ ಬಣ್ಣಬಣ್ಣದ ಮಾತುಗಳನ್ನು ಹೇಳಿ ಮತಗಳನ್ನು ಹಾಕಿಸಿಕೊಂಡು ಹೋಗುತ್ತಾರೆ. ಆದರೆ ಕೊಟ್ಟ ಭರವಸೆಗಳನ್ನು ಸಂಪೂರ್ಣ ನಿರ್ಲಕ್ಷಿಸುತ್ತಾರೆ. ಎಲ್ಲಡೆ ರಸ್ತೆ ಅಭಿವೃದ್ಧಿ ಪಡಿಸುವ ಶಾಸಕರಿಗೆ ಇಲ್ಲಿಯ ರಸ್ತೆ ಯಾವಾಗ ಕಾಣುತ್ತದೆ. ವರ್ಷಗಳು ಕಳೆದರೂ ಡಾಂಬರು ಕಾಣದೇ ರಸ್ತೆ ಸಂಪೂರ್ಣ ಧೂಳುಮಯವಾಗುತ್ತದೆ. ಅಲ್ಲದೇ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಓಡಾಡಲು ಆಗುವುದಿಲ್ಲ. ದೂಳಿನ ವಾತಾವರಣದಲ್ಲಿ ನಡೆಯುವುದರಿಂದ ಪರಿಸರ ಗಲೀಜಾಗುತ್ತದೆ ಅಲ್ಲದೇ ಜನರು ಅನಾರೋಗ್ಯಕ್ಕೀಡಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ದಿನಂಪ್ರತಿ ಮಣ್ಣಿನ ರಸ್ತೆಯಲ್ಲಿ ಓಡಾಡಬೇಕು. ರಸ್ತೆ ಗುಂಡಿಗಳಿoದ ಕೂಡಿದೆ. ಈ ಭಾಗಕ್ಕೆ ಈಗ ಡಾಂಬರು ಹಾಕುವ ಲಕ್ಷಣಗಳು ಸಹ ಕಾಣಸಿಗುವುದಿಲ್ಲ. ಗ್ರಾಮಸ್ಥರು ಓಡಾಡುವುದೇ ದುಸ್ತರವಾಗುತ್ತದೆ ಎಂದು ದೂರಿದ್ದಾರೆ.
ಈ ಸೀಬರ್ಡ್ ಕಾಲೋನಿ ಹಿಂದುಳಿದ ಪ್ರದೇಶವಾಗಿದ್ದು, ಎಲ್ಲ ದೃಷ್ಟಿಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗ್ರಾಮಗಳಲ್ಲಿ ಸಮರ್ಪಕವಾದ ವಸತಿ ವ್ಯವಸ್ಥೆಯಿಲ್ಲ. ಕುಡಿಯುವ ನೀರಿನ ಸಮಸ್ಯೆಯಲ್ಲದೇ ರಸ್ತೆಗಳ ಸಮಸ್ಯೆಯೂ ಗಂಭೀರವಾಗಿದೆ. ಮುಂದಿನ ಹತ್ತು ದಿನದಲ್ಲಿ ಇಲ್ಲಿಯ ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳದ್ದಿರೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸೀಬರ್ಡ್ ಕಾಲೋನಿಯ ರಸ್ತೆ ಸರಿಪಡಿಸದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ: ಎಚ್ಚರಿಕೆ
