• Slide
  Slide
  Slide
  previous arrow
  next arrow
 • ಜನಮನ ರಂಜಿಸಿದ ಪಂ.ಕೃಷ್ಣೇoದ್ರ ವಾಡೇಕರ ಹಿಂದೂಸ್ಥಾನಿ ಸಂಗೀತ

  300x250 AD

  ಭಟ್ಕಳ: ಶ್ರೀ ಗಜಾನನ ಕೊಲ್ಲೆ ಫೌಂಡೇಶನ್ ಮತ್ತು ಕಲಾ ಸೌರಭ ಜಂಟಿಯಾಗಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಸಹಭಾಗಿತ್ವದಲ್ಲಿ ಸಂಗೀತ ವಿದ್ವಾಂಸ ಪಂ.ಕೃಷ್ಣೇoದ್ರ ವಾಡೇಕರರವರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮವು ಇತ್ತೀಚಿಗೆ ಜರುಗಿತು.
  ಕಲಾ ಸೌರಭದ ಅಧ್ಯಕ್ಷ ಕೇದಾರ ನಾರಾಯಣ ಕೊಲ್ಲೆ ಸ್ವಾಗತಿಸಿ, ಕಲಾಸೌರಭ ನಡೆದು ಬಂದ ಹಾದಿ ಹಾಗೂ ಮುನ್ನೋಟದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದರಾದ ಪಂ.ಕೃಷ್ಣೇoದ್ರ ವಾಡೇಕರ, ತಬಲಾ ಸಂವಾದಿನಿ ಪ್ರೊ.ಗೋಪಾಲಕೃಷ್ಣ ಹೆಗಡೆ ಕಲಭಾಗ, ಹಾರ್ಮೋನಿಯಂ ಸಂವಾದಿನಿ ಸತೀಶ ಭಟ್ಟ ಹೆಗ್ಗಾರ ಹಾಗೂ ಇತರ ಕಲಾವಿದರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ರವೀಂದ್ರ ಜಿ.ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ್ ನಾಯಕ, ಕಲಾ ಸೌರಭ ಹಾಗೂ ಶ್ರೀ ಗಜಾನನ ಕೊಲ್ಲೆ ಫೌಂಡೇಶನ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
  ಅಪಾರ ಸಂಖ್ಯೆಯಲ್ಲಿ ಸಂಗೀತಾಸಕ್ತರು ಉಪಸ್ಥಿತರಿದ್ದು, ಎಲ್ಲರ ಅಪಾರ ಪ್ರಶಂಸೆಗೆ ಒಳಗಾಗುವ ಮೂಲಕ ಈ ಸಂಗೀತ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊoಡಿತು. ನ್ಯೂ ಇಂಗ್ಲೀಷ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ಶಿರೂರ ವಂದಿಸಿದರು. ಶ್ರೀಗುರು ಸುಧೀಂದ್ರ ಕಾಲೇಜಿನ ಬಿ.ಕಾಂ ವಿಭಾಗದ ಉಪಪ್ರಾಂಶುಪಾಲ ಫಣಿಯಪ್ಪಯ್ಯ ಹೆಬ್ಬಾರ್ ನಿರೂಪಿಸಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top