Slide
Slide
Slide
previous arrow
next arrow

ಗಾಯಗೊಂಡಿದ್ದ ಯುವಕನಿಗೆ ಜನಪರ ವೇದಿಕೆಯ ನೆರವು

300x250 AD

ಹೊನ್ನಾವರ: ತಾಲೂಕಿನ ಅರೇಅಂಗಡಿಯ ಗುರು ಜೋಗಿ ಇವರಿಗೆ ರಸ್ತೆ ಅಪಘಾತದಲ್ಲಿ ಕೈ ಭಾಗಕ್ಕೆ ಗಂಭೀರ ಗಾಯಗಳಾಗಿತ್ತು. ಅವರ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿರುವುದನ್ನು ಮನಗಂಡು ಜನಪರ ವೇದಿಕೆಯ ವತಿಯಿಂದ ಆರ್ಥಿಕವಾಗಿ ನೆರವು ನೀಡಿದ್ದಾರೆ.
ಈ ವೇಳೆ ಜನಪರ ವೇದಿಕೆಯ ಸಂಘಟಕ ಎಂ.ಜಿ.ಭಟ್ ಮಾತನಾಡಿ, ಆಸ್ಪತ್ರೆಯ ಚಿಕಿತ್ಸೆಗೆ ನೆರವಾಗಲು ಜನಪರ ವೇದಿಕೆಯು ನೆರವಾಗಿದೆ. ಮೈಸೂರಿನಲ್ಲಿ ಆಪರೇಷನ್ ನಡೆಯಬೇಕಿದ್ದು, ಒಂದು ಲಕ್ಷದಷ್ಟು ಹಣದ ಅವಶ್ಯವಿದೆ. ಸಹೃದಯಿ ದಾನಿಗಳು ಆರ್ಥಿಕವಾಗಿ ನೆರವಾಗುವಂತೆ ಮನವಿ ಮಾಡಿದರು. ಧನಸಹಾಯ ಮಾಡುವವರು ಖಾತೆ ಸಂಖ್ಯೆ 3232500101071201 ಕರ್ನಾಟಕ ಬ್ಯಾಂಕ್ ಹೊಸಾಕುಳಿ ಶಾಖೆ ಐ.ಎಫ್.ಎಸ್.ಸಿ ಸಂಖ್ಯೆ KARB0000323 ಖಾತೆಗೆ ಹಣ ಕಳುಹಿಸಬಹುದು.
ಈ ವೇಳೆ ಗ್ರಾ.ಪಂ. ಸದಸ್ಯ ಗಣಪತಿ ಭಟ್, ಶ್ರೀಧರ ಹೆಗಡೆ, ರವಿ ನಾಯ್ಕ, ದಿನೇಶ ಹೆಗಡೆ, ಮಣಿಕಂಠ ಶೆಟ್ಟಿ, ನಾರಾಯಣ ಹೆಗಡೆ, ವಿ.ಪ್ರಸನ್ನ, ಸಂಜೀವ ಶೆಟ್ಟಿ, ಉದಯ ಭಟ್ ಮತ್ತಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top