Slide
Slide
Slide
previous arrow
next arrow

ವನವಾಸಿಗಳಿಂದ ಎಲ್ಲ ರಂಗಗಳಲ್ಲೂ ದೇಶದ ಅಭಿವೃದ್ಧಿಗೆ ಕೊಡುಗೆ: MLC ಶಾಂತಾರಾಮ ಸಿದ್ದಿ

300x250 AD

ಹುಬ್ಬಳ್ಳಿ: ಈ ದೇಶದ ವನವಾಸಿಗಳು ಕೇವಲ ಸ್ವಾತಂತ್ರ್ಯ ಹೋರಾಟಕ್ಕೆ ಮಾತ್ರವಲ್ಲ ಬದಲಾಗಿ ಎಲ್ಲ ರಂಗಗಳಲ್ಲೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

ನಗರದ ಹೆಗ್ಗೇರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವನವಾಸಿ ಕಲ್ಯಾಣ ಸಂಸ್ಥೆಯಿಂದ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ವನವಾಸಿಗಳ ಪಾತ್ರ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಬಿರ್ಸಾ ಮುಂಡಾ, ರಾಣಿಮಾ ಗಾಯಡಿನ್ ಲ್ಯೂ, ಅಲ್ಲೂರಿ ಸೀತಾರಾಮ ಹೀಗೆ ಅಸಂಖ್ಯ ವನವಾಸಿ ಹೋರಾಟಗಾರರು ಬ್ರಿಟಿಷರ ಒಡೆದು ಆಳುವ ನೀತಿ ವಿರೋಧಿಸಿದರು. ಶಿವಾಜಿ ಸೈನ್ಯದಲ್ಲಿನ ಮಾವಳಿಗಳು, ಕರ್ನಾಟಕದಲ್ಲಿ ರಾಜಾ ವೆಂಕಟಪ್ಪ ನಾಯಕ, ಹಲಗಲಿ ಬೇಡರು, ಕುಮಾರ ರಾಮ ನಾಯಕ, ಜೊತೆಗೆ ಕಿತ್ತೂರ ರಾಣಿ ಚನ್ನಮ್ಮನ ಸೈನ್ಯದಲ್ಲೂ ಸಿದ್ದಿ ಜನಾಂಗದ ವನವಾಸಿಗಳು ಹೋರಾಡಿ ಪ್ರಮುಖ ಪಾತ್ರವಹಿಸಿದ್ದಾರೆ. ಬ್ರಿಟಿಷರು ಶಸ್ತ್ರಾಸ್ತ್ರಗಳ ಮೇಲೆ ನಿರ್ಬಂಧ ಹೇರಿದ ಕಾರಣ, ಯಾವುದೇ ಯುದ್ಧೋಪಕರಣ ಬಳಸದೆ ಕಲ್ಲು, ಮರದ ಆಯುಧಗಳನ್ನು ಬಳಸಿ ವನವಾಸಿಗಳು ಹೋರಾಡಿದ್ದಾರೆ ಎಂದರು.

300x250 AD

ನಾಡಿಗಾಗಿ ಶ್ರಮಿಸಿದ ವನವಾಸಿ ಹೋರಾಟಗಾರರ ಜೀವನ- ಸಾಧನೆ, ಪರಿಚಯ ಇಂದಿನ ಯುವ ಪೀಳಿಗೆಗೆ ಆಗಬೇಕು. ಯುವ ಸಮುದಾಯ ಸಮಾಜದ ಪ್ರಗತಿಗೆ ಸಮಯ ನೀಡಬೇಕು ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ವಿಷಯಗಳನ್ನು ಪ್ರಸ್ತುತಪಡಿಸುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

Share This
300x250 AD
300x250 AD
300x250 AD
Back to top