• Slide
    Slide
    Slide
    previous arrow
    next arrow
  • ‘ಶಿಕ್ಷಣಕ್ಕಾಗಿ ಬೆಳಕು’ ಯೋಜನೆ ಮಕ್ಕಳ ಶೈಕ್ಷಣಿಕ ದೃಷ್ಟಿಯಲ್ಲಿ ಚರಿತ್ರಾರ್ಹ ಹೆಜ್ಜೆ: ಶಿವರಾಮ್ ಹೆಬ್ಬಾರ್

    300x250 AD

    ಶಿರಸಿ: ಲಾಭದಲ್ಲಿ ಸಮಾಜಕ್ಕೆ ಒಂದಂಶ ಅರ್ಪಿಸಬೇಕು ಎಂದು ಕರ್ಣಾಟಕ ಬ್ಯಾಂಕ್ ಸೇವೆ ಸಲ್ಲಿಸುತ್ತಿದ್ದು, ಅದರ ಭಾಗವಾಗಿ ಶಿಕ್ಷಣಕ್ಕಾಗಿ ಬೆಳಕು ಯೋಜನೆ ಸೆಲ್ಕೋದ ಜೊತೆಗೆ ಅನುಷ್ಠಾನವಾಗುತ್ತಿದೆ. ಇದು ಅಕ್ಷರಶಃ ಮಕ್ಕಳ ಓದಿಗೆ, ಶೈಕ್ಷಣಿಕ ಬೆಳವಣಿಗೆಗೆ ನೆರವಾಗಿದೆ ಎಂಬ ಸಮಾಧಾನವಿದೆ. ಬ್ಯಾಂಕ್‌ನ ದೃಷ್ಟಿಯಲ್ಲಿ ಇದು ಖರ್ಚಲ್ಲ, ಸಮಾಜದ ಬದ್ಧತೆಯ ದೃಷ್ಟಿಯಲ್ಲಿ ವಿನಿಯೋಗ ಮಾಡಲಾಗುತ್ತಿದೆ ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ
    ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಬಣ್ಣಿಸಿದರು.
    ಅವರು ಬುಧವಾರ ಕರ್ಣಾಟಕ ಬ್ಯಾಂಕ್ ಶಿಕ್ಷಣಕ್ಕಾಗಿ ಬೆಳಕು ಯೋಜನೆಗೆ ಸೆಲ್ಕೋ ಸೋಲಾರ್ ಸಂಸ್ಥೆ, ಭಾರತೀಯ ವಿಕಾಸ ಟ್ರಸ್ಟ್, ವಿಶ್ವಶಾಂತಿ ಸೇವಾ ಟ್ರಸ್ಟ್ ಜಂಟಿಯಾಗಿ ಹಮ್ಮಿಕೊಂಡ ಕೃತಜ್ಞತಾ ಸಮಾರಂಭದಲ್ಲಿ ಫಲಾನುಭವಿ ವಿದ್ಯಾರ್ಥಿಗಳಿಗೆ ಸೋಲಾರ್ ಬೆಳಕಿನ ಘಟಕದ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
    ಕರ್ಣಾಟಕ ಬ್ಯಾಂಕ್ ಎಂದೂ ಲಾಭದ ಹಿಂದೆ ಹೋಗಿಲ್ಲ. ಲಾಭ ಕರ್ಣಾಟಕ ಬ್ಯಾಂಕ್ ಹಿಂದೆ ಬಂದಿದೆ. ಗ್ರಾಮೀಣ ಭಾಗದಲ್ಲೇ ಹೆಚ್ಚು ಶಾಖೆಗಳನ್ನೂ ತೆರೆಯಲಾಗಿದೆ. 1924ರಿಂದ ಆರಂಭಗೊಂಡ ಬ್ಯಾಂಕ್ ಅಂದಿನಿಂದ ಇಂದಿನ ತನಕವೂ ಜನರ ಅಗತ್ಯತೆಗಳಿಗೆ ಸ್ಪಂದಿಸುತ್ತ ಲಾಭದಲ್ಲೇ ಮುನ್ನಡೆದ ದೇಶದ ಏಕ ಮೇವ ಬ್ಯಾಂಕ್ ಆಗಿದೆ ಎಂದರು.
    ಉತ್ತರ ಕನ್ನಡ ಜಿಲ್ಲೆ ಪ್ರಜ್ಞಾವಂತರ ಜಿಲ್ಲೆ. ಇಡೀ ರಾಜ್ಯದಲ್ಲಿ ಎರಡು ಜಿಲ್ಲೆ ಸಾರ್ವಭೌಮ ಭಾಷೆ ಕನ್ನಡದ ಹೆಸರು ಇಟ್ಟುಕೊಂಡಿವೆ. ಅದರೊಳಗೆ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಎಂದೂ ಹೇಳಿದ ಅವರು,
    ಉತ್ತರ ಕನ್ನಡದಲ್ಲಿ ನಡೆಯುತ್ತಿರುವ ಸಹಕಾರ ಚಳುವಳಿಯಲ್ಲಿ ಕೃಷಿಕರ ನೇತೃತ್ವವಿದೆ. ಉತ್ತರ ಕನ್ನಡದ ಕ್ಷೇತ್ರದ ಸಾಮಾನ್ಯ ವ್ಯಕ್ತಿಗಳೂ ಅಸಮಾನ್ಯ ಸಾಧನೆ ಮಾಡಿದ್ದಾರೆ ಎಂದರು.
    ಉತ್ತರ ಕನ್ನಡ ಕ್ಷೇತ್ರದ ಮಾಧ್ಯಮ ಕೆಲಸ ದೊಡ್ಡದು. ಇಲ್ಲಿನ ಮಾಧ್ಯಮ ಕ್ಷೇತ್ರವು ಮೌಲಿಕ ವಿಚಾರ ಎತ್ತಿಕೊಂಡು ಸಮಾಜಕ್ಕೆ ಬೆಳಕು ತೋರುವ ಕೆಲಸ ಮಾಡುತ್ತಿದೆ ಎಂದೂ ಹೇಳಿದರು.
    ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಬದುಕಿಗೇ ಬೆಳಕು ಕೊಡುವ ಯೋಜನೆ ರೂಪಿಸಿದ್ದಕ್ಕೆ ಅಭಿನಂದನೆಗಳು. ವಿದ್ಯಾಭ್ಯಾಸದ ದೃಷ್ಟಿಯಲ್ಲಿ ಇದು ಮಾಡುತ್ತಿರುವದು ಶ್ರೇಷ್ಠ ಕೆಲಸವಾಗಿದೆ. ಮಗುವಿನ ಮೂಲಭೂತಕ್ಕೇ ಯೋಜಿಸಿ ಯೋಜನೆ ರೂಪಿಸಿದ್ದು ಅಭಿನಂದನೀಯ. ಮಕ್ಕಳ ಶೈಕ್ಷಣಿಕ ದೃಷ್ಟಿಯಲ್ಲಿ ಚರಿತ್ರಾರ್ಹ ಹೆಜ್ಜೆ ಶಿಕ್ಷಣಕ್ಕಾಗಿ ಬೆಳಕು ಯೋಜನೆಯಾಗಿದೆ. ಸೆಲ್ಕೋ ಸಂಸ್ಥೆ ಒಳ್ಳೆ ಕೆಲಸ ಮಾಡುತ್ತಿದೆ. ಕರ್ಣಾಟಕ ಬ್ಯಾಂಕ್‌ಗೂ ನಮಗೂ ವೈಯಕ್ತಿಕ ಒಳ್ಳೆಯ ಸಂಬಂಧವಿದೆ ಎಂದು ಹೇಳಿದರು.
    ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಮುಗ್ದ ಮಕ್ಕಳು ಸೌಲಭ್ಯ ಪಡೆಯಲು ಹಿಂದುಳಿಯಲು ಕಾರಣವಾಗಿದೆ. ಅದಕ್ಕಾಗಿ ಕರ್ಣಾಟಕ ಬ್ಯಾಂಕ್ ಹಾಗೂ ಸೆಲ್ಕೋ ಜೊತೆಯಾಗಿ ಬೆಳಕು ನೀಡಲಾಗಿದೆ. ಇದು ಬ್ಯಾಂಕ್‌ನ ಮಹಾಬಲೇಶ್ವರ ಎಂ.ಎಸ್.ಅವರ ಕನಸಿನಿಂದ ಇದು ಆಗಿದೆ. ಈವರೆಗೆ ಈ ಯೋಜನೆಯಲ್ಲಿ 754 ಮನೆಗಳಿಗೆ ಸೌರ ಬೆಳಕು ನೀಡಲಾಗಿದೆ.
    ಶೇ.50ರಷ್ಟು ಅಂದರೆ 38.50ಲಕ್ಷ ರೂ. ಕರ್ಣಾಟಕ ಬ್ಯಾಂಕ್ ನೆರವು ನೀಡಿದೆ. ಸೀಮಿತವಾಗಿದ್ದ ಯೋಜನೆಯನ್ನು ಬ್ಯಾಂಕ್ ಇಡೀ ಕರ್ಣಾಟಕ ರಾಜ್ಯಕ್ಕೆ ವಿಸ್ತರಿಸಿದೆ. ಜೋಯಿಡಾದಲ್ಲಿ 1200ಕ್ಕೂ ಮನೆಗಳಲ್ಲಿ ಬೆಳಕಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದು ನೋಡಿರುವೆ ಇಲ್ಲೂ ಸ್ಪಂದಿಸಬೇಕು ಎಂಬ ಆಶಯವಿದೆ ಎಂದರು.
    ಕರ್ಣಾಟಕ ಬ್ಯಾಂಕ್ ಉಡುಪಿ ಎಜಿಎಂ ರಾಜಗೋಪಾಲ, ಶಿವಮೊಗ್ಗ ಎಜಿಎಂ ಹಯವದನ ಉಪಾಧ್ಯಾಯ, ಬಿವಿಟಿಯ ಮನೋಹರ ಕಟಗೇರಿ, ಡಿಡಿಪಿಐ ಕಚೇರಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ನಾಯ್ಕ, ವಿಶ್ವಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಇತರರು
    ವೇದಿಕೆಯಲ್ಲಿ ಇದ್ದರು. ಮಾರಿಕಾಂಬಾ ಪ್ರೌಢ ಶಾಲಾ ವಿದ್ಯಾರ್ಥಿನೀಯರು
    ಪ್ರಾರ್ಥಿಸಿದರು. ರಾಘವೇಂದ್ರ ಹೆಗಡೆ ಸ್ವಾಗತಿಸಿದರು. ಸೆಲ್ಕೋ ಎಜಿಎಂ ಪ್ರಸನ್ನ ಹೆಗಡೆ ವಂದಿಸಿದರು. ಕ್ಷೇತ್ರೀಯ ವ್ಯವಸ್ಥಾಪಕ ಮಂಜುನಾಥ ಭಾಗವತ್ ನಿರ್ವಹಿಸಿದರು.
    ಸೌರ ಬೆಳಕು ಕೊಟ್ಟು ಓದಲು ನೆರವಾದ ಕಾರಣಕ್ಕೆ ಸಭೆಯಲ್ಲಿ ಪಾಲ್ಗೊಂಡ ಮಕ್ಕಳೇ ಕರ್ಣಾಟಕ ಬ್ಯಾಂಕ್‌ನ ಮಹಾಬಲೇಶ್ವರ ಎಂ.ಎಸ್., ಸೆಲ್ಕೋ ಸಿಇಓ ಮೋಹನ ಭಾಸ್ಕರ ಹೆಗಡೆ ಹಾಗೂ ಸಚಿವ ಶಿವರಾಮ ಹೆಬ್ಬಾರ್ ಅವರು ಅಭಿನಂದಿಸಿದ್ದು ಅರ್ಥಪೂರ್ಣವಾಗಿತ್ತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top