• Slide
    Slide
    Slide
    previous arrow
    next arrow
  • ಸಂತ ರವಿದಾಸರ 646ನೇ ಜಯಂತಿ ಕಾರ್ಯಕ್ರಮ

    300x250 AD

    ದಾಂಡೇಲಿ: ಶ್ರೀಶಿವಶರಣ ಹರಳಯ್ಯ ಸಮಾಜ ಹಾಗೂ ಸಂತ ರವಿದಾಸ ಮಹಾಸಭಾದ ಆಶ್ರಯದಲ್ಲಿ ಸಂತ ರವಿದಾಸರ 646ನೇ ಜಯಂತಿ ಕಾರ್ಯಕ್ರಮ ನಡೆಯಿತು.
    ಕಾರ್ಯಕ್ರಮದ ಆರಂಭದಲ್ಲಿ ಸಂತ ರವಿದಾಸರ ಭಾವಚಿತ್ರಕ್ಕೆ ಆರತಿ ಬೆಳಗಿ ಪುಷ್ಪಗೌರವ ಸಲ್ಲಿಸಲಾಯಿತು. ಆನಂತರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಸಂಚಾಲಕರಾದ ಸುಭಾಷ್ ಕಾನಡೆ, ಸಂತ ರವಿದಾಸ ಅವರು ಒಬ್ಬ ಭಾರತೀಯ ಅತೀಂದ್ರಿಯ ಕವಿ. ಸಮಾಜ ಸುಧಾರಕ ಮತ್ತು ಆಧ್ಯಾತ್ಮಿಕ ಗುರುವಾಗಿದ್ದರು. ಅವರ ಭಕ್ತಿಗೀತೆಗಳು, ಪದ್ಯಗಳು, ಭಕ್ತಿ ಚಳುವಳಿಯ ಸಮಯದಲ್ಲಿ ಆಧ್ಯಾತ್ಮಿಕ ಬೋಧನೆಗಳ ರೂಪದಲ್ಲಿ ಮಹತ್ವದ ಕೊಡುಗೆಯನ್ನು ನೀಡಿವೆ. ಸಂತ ರವಿದಾಸರ ತತ್ವಾದರ್ಶಗಳು ಸದಾ ಸ್ಮರಣೀಯ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರದ ಶ್ರೀಶಿವಶರಣ ಹರಳಯ್ಯ ಸಮಾಜದ ಅಧ್ಯಕ್ಷ ಸತೀಶ ನಾಯ್ಕ, ಪೌರಾಣಿಕ ಕವಿ ಮತ್ತು ಸುಧಾರಕರಾಗಿದ್ದ ಸಂತ ರವಿದಾಸರಿಗೆ ದೇಶದಾದ್ಯಂತ ಅವರ ಅನುಯಾಯಿಗಳಿದ್ದಾರೆ. ವಿಶೇಷವಾಗಿ ದಲಿತ ಸಮುದಾಯದ ದೊಡ್ಡ ವರ್ಗ ಸಂತ ರವಿದಾಸರನ್ನು ಸದಾ ಆರಾಧಿಸುತ್ತದೆ. ಸರ್ವ ಸಮನ್ವಯತೆಯ ಸಮಾಜ ನಿರ್ಮಾಣಕ್ಕಾಗಿ ತಮ್ಮನ್ನು ತಾವು ಸಂತ ರವಿದಾಸರು ಸಮರ್ಪಿಸಿಕೊಂಡಿದ್ದರು ಎಂದರು.
    ಪ್ರಮುಖರುಗಳಾದ ರಮೇಶ್ ಚಂದಾವರ, ಸುರೇಂದ್ರ ನೇತ್ರೇಕರ, ಪ್ರಮೋದ್ ರೇವಣಕರ, ನಾಗರಾಜ ತೇರದಾಳ, ಸುಜೀತ್ ಕುಮಾರ್ ಸವದತ್ತಿ ಮೊದಲಾದವರು ಭಾಗವಹಿಸಿ ಸಂದಭೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ತಾರಾನಾಥ ಪಾಟನಕರ, ಪೊಮಣ್ಣ ಸವದತ್ತಿ, ರೇಷ್ಮಾ ರೇವಣಕರ, ಮಂಜುಳಾ ನಾಯ್ಕ, ಸಂತೋಷ್ ಕೇರಕರ, ರಾಜೇಶ ರೇವಣಕರ, ಗಜಾನನ ಪಾಟನಕರ, ರಾಜಶೇಖರ ನಿಂಬಾಳಕರ ಮೊದಲಾದವರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top