• Slide
    Slide
    Slide
    previous arrow
    next arrow
  • ಯುವ ಸಮುದಾಯ ಸಂಘಟಿತರಾದರೆ ಎಲ್ಲಾ ಸಾಧನೆಯು ಸಾಧ್ಯ: ನಾರಾಯಣ ಹೆಗಡೆ

    300x250 AD

    ಶಿರಸಿ; ಯುವ ಸಮುದಾಯ ಸಂಘಟಿತರಾದರೆ ಯಾವ ಸಾಧನೆ ಬೇಕಾದರೂ ಮಾಡಬಹುದು ಎಂದು ರಾಜ್ಯ ಯುವ ಸಾಧಕ ಪ್ರಶಸ್ತಿ ಪುರಸ್ಕೃತ ಯುವ ಮುಖಂಡ ನಾರಾಯಣ ಹೆಗಡೆ ಶಿರಸಗಾಂವ್ ಅಭಿಪ್ರಾಯ ವ್ಯಕ್ತಪಡಿಸಿದರು.

    ತಾಲೂಕಿನ ಶಿರಸಗಾಂವ್ ಊರಿನ ವನದೇವಿ ದೇವಸ್ಥಾನದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಭಾರತ ಹಳ್ಳಿಗಳ ದೇಶ ಹಾಗಾಗಿ ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ಯುವಕರು ತಮ್ಮ ಊರುಗಳ ಪ್ರಗತಿಗೆ, ಕಲೆ-ಸಂಸ್ಕೃತಿ ಉಳಿವಿಗೆ ಸಂಘಟಿತ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಅಲ್ಲದೆ ಪ್ರತಿ ಊರಿಗೂ ಕೂಡ ತನ್ನದೇ ಆದ ವೈಶಿಷ್ಟ್ಯತೆ, ಇತಿಹಾಸ ಇರುತ್ತದೆ ಅದನ್ನ ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನವಾಗಬೇಕು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ದತ್ತಾತ್ರೇಯ ವೈದ್ಯ, ಊರಿನ ಮುಖಂಡರಾದ ಎನ್. ಕೆ ಹೆಗಡೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಮೂರ್ತಿ ಕಮಲಾಕರ ಭಟ್ ಅವರು ವಹಿಸಿದ್ದರು, ಗ್ರಾಮ ಪಂಚಾಯತಿ ಸದಸ್ಯೆ ಶ್ರೀಮತಿ ಗೀತಾ ಸಿದ್ದಿ ವೇದಿಕೆಯಲ್ಲಿದ್ದರು.

    300x250 AD

    ಕಾರ್ಯಕ್ರಮದಲ್ಲಿ ಹೆಸರಾಂತ ಯಕ್ಷಗಾನ ಕಲಾವಿದ ವಿದ್ಯಾಧರ ಜಲವಳ್ಳಿ, ಖ್ಯಾತ ಭಾಗವತ ರಾಘವೇಂದ್ರ ಜನ್ಸಾಲೆ ಹಾಗೂ ಯಕ್ಷಗಾನ ತರಬೇತುದಾರರಾದ ಗಜಾನನ ಭಟ್ ತುಳಗೇರಿ ಇವರಿಗೆ ಸನ್ಮಾನ ಮಾಡಲಾಯಿತು.

    ಸಭಾ ಕಾರ್ಯಕ್ರಮದ ನಂತರ ಶ್ರೀ ವನದೇವಿ ಗೆಳೆಯರ ಬಳಗ ಶಿರಸಗಾಂವ್ ಇವರ ನೇತೃತ್ವದಲ್ಲಿ ಪೆರಡೂರು ಹಾಗೂ ಜಲವಳ್ಳಿ ಮೇಳದ ನುರಿತ ಕಲಾವಿದರಿಂದ ದುಷ್ಟ ಬುದ್ದಿ ಮಹಾಮಂತ್ರಿ ಎಂಬ ಪೌರಾಣಿಕ ಯಕ್ಷಗಾನ ಕಾರ್ಯಕ್ರಮ ಪ್ರದರ್ಶನವಾಯಿತು. ಯಕ್ಷಗಾನವನ್ನ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಸಂಘಟಕರಾದ ಶೇಖರ್ ಗೌಡ, ರಾಮ ಗೌಡ, ಶ್ರೀನಿವಾಸ್, ಗಣಪತಿ, ವೆಂಕಟೇಶ್, ರಾಘವೇಂದ್ರ, ಪ್ರಕಾಶ್, ಮಹಾಬಲೇಶ್ವರ, ಈಶ್ವರ, ಸುಬ್ರಾಯ, ಗಣಪತಿ ಗೌಡ ಮುಂತಾದವರು ಹಾಜರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top