Slide
Slide
Slide
previous arrow
next arrow

ಗ್ಲೋವರ್ಸ್ ಕ್ಲಬ್‌ನಿಂದ ಶರತ್ ಗಾಂವಕರಗೆ ಸನ್ಮಾನ

300x250 AD

ಕಾರವಾರ: ಸದಾಶಿವಗಡದ ಗ್ರೋವರ್ಸ್ ಕ್ಲಬ್‌ನಿಂದ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದ ಹಿರಿಯ ದೈಹಿಕ ಶಿಕ್ಷಕ ಶರತ ಗಾಂವಕರವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಗ್ರೋವರ್ಸ್ ಕ್ಲಬ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಗಂಗಾಧರ ಭಟ್ ಸನ್ಮಾನ ಮಾಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕರು ಶ್ರೇಷ್ಠರಿದ್ದಾರೆ. ಇಂತಹ ಗುರುಗಳನ್ನು ಪಡೆದ ಶಾಲೆಯಲ್ಲಿ ಸೇವೆ ನೀಡುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕ ಶರತ ಗಾಂವಕರವರಿಗೆ ನಮ್ಮ ಕ್ಲಬ್‌ನಿಂದ ಸನ್ಮಾನ ಮಾಡುತ್ತಿರುವದಕ್ಕೆ ಹೆಮ್ಮೆ ಅನಿಸುತ್ತದೆ ಎಂದರು.
ಗ್ರೋವರ್ಸ್ ಕ್ಲಬ್ ಕಾರ್ಯದರ್ಶಿ ಸುದೇಶ ಮರಾಠೆ ವಿದ್ಯಾರ್ಥಿಗಳಿಗೆ ಪ್ರೇರಕ ನುಡಿಗಳನ್ನು ಹೇಳಿದರು. ಅಧ್ಯಕ್ಷತೆಯನ್ನು ಮುಖ್ಯಾಧ್ಯಾಪಕ ದಿನೇಶ ಗಾಂವಕರ ವಹಿಸಿದ್ದರು. ಪ್ರತೀಕ್ಷಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭಗೊoಡ ಕಾರ್ಯಕ್ರಮದಲ್ಲಿ ಶಿಕ್ಷಕ ಗಣೇಶ ಎನ್. ಭೀಷ್ಮಣ್ಣನವರ್ ಸ್ವಾಗತಿಸಿ, ನಿರೂಪಿಸಿದರು. ವೇದಿಕೆಯ ಮೇಲೆ ಶಿಕ್ಷಕ ಸಂತೋಷ ಕಾಂಬಳೆ, ಜೆ.ಬಿ.ತಿಪ್ಪೇಸ್ವಾಮಿ, ಪಾಲಕ ಶ್ರೀಕಾಂತ ಆವಳಕರ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top