• Slide
  Slide
  Slide
  previous arrow
  next arrow
 • ನಿರ್ದಿಷ್ಟ ಗುರಿ ಇದ್ದರೆ ಸಾಧನೆಗೆ ವಯಸ್ಸಿನ ಮಿತಿ ಇಲ್ಲ: ಎನ್.ಎಸ್.ಭಟ್

  300x250 AD

  ಕಾರವಾರ: ನಿರ್ದಿಷ್ಟ ಗುರಿ ಮತ್ತು ಛಲವಿದ್ದರೆ ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂದು ತಮ್ಮ 71ನೇ ವಯಸ್ಸಿನಲ್ಲಿ ಡಿಪ್ಲೊಮಾ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಎನ್.ಎಸ್.ಭಟ್ ಸುಗಾವಿ ಹೇಳಿದರು.

  ಹವ್ಯಕ ಸಾಂಸ್ಕೃತಿಕ ಸಂಘದಿಂದ ನಗರದ ಶೃಂಗೇರಿ ಶಂಕರ ಮಠದದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

  ಸಂಘದ ಅಧ್ಯಕ್ಷ ಆರ್.ಜಿ.ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಸಂಘಟನೆಗಳಿಂದ ವೈಯಕ್ತಿಕ ಲಾಭ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ, ಒಗ್ಗಟ್ಟಿನಿಂದ ಇದ್ದರೆ ಒಟ್ಟಾರೆ ಸಮಾಜಕ್ಕೆ ಲಾಭವಾಗುತ್ತದೆ ಎಂದರು. ಸಂಘದ ಕಾರ್ಯದರ್ಶಿ ಎಸ್.ಆರ್.ಹೆಗಡೆ ಮತ್ತು ಖಜಾಂಚಿ ವಿನಯ ಭಟ್ ಕಾರ್ಯಕ್ರಮ ನಡೆಸಿಕೊಟ್ಟರು.

  300x250 AD

  ಎಂ.ಎನ್.ಹೆಗಡೆ ಕೈಗಾ ವಂದಿಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿಯಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

  Share This
  300x250 AD
  300x250 AD
  300x250 AD
  Leaderboard Ad
  Back to top