• Slide
    Slide
    Slide
    previous arrow
    next arrow
  • ಸಿದ್ದಾಪುರ ಉತ್ಸವ ಲಾಂಛನ ತಾಲೂಕಿನ ಸಮಗ್ರತೆಯನ್ನು ಒಳಗೊಂಡಿದೆ: ಗಂಗಾಧರ ಕೊಳಗಿ

    300x250 AD

    ಸಿದ್ದಾಪುರ: ತಾಲೂಕು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕ ಮತ್ತು ರಾಜಕೀಯವಾಗಿ ಸಮೃದ್ಧತೆಯ ಜೊತೆಗೆ ಬಹಳಷ್ಟು ಕೊಡುಗೆಯನ್ನು ನೀಡುತ್ತ ಬಂದಿದೆ. ಇಂಥ ಮಹತ್ವದ ನೆಲದಲ್ಲಿ ಮೂರು ದಿನಗಳ ಸಿದ್ದಾಪುರ ಉತ್ಸವವನ್ನು ಆಯೋಜಿಸಿರುವದು ಶಾಘ್ಲನೀಯ ಕಾರ್ಯ. ಲಾಂಛನವು ಧಾರ್ಮಿಕತೆ, ಕಲೆ, ಸಂಗೀತ, ಯಕ್ಷಗಾನ, ಹಸೆ ಚಿತ್ತಾರ ಮುಂತಾದವುಗಳ ಜೊತೆ ತಾಲೂಕಿನ ಮುಖ್ಯ ಕೃಷಿ ಬೆಳೆಗಳಾದ ಭತ್ತ ಮತ್ತು ಅಡಕೆ, ಜಲಪಾತಗಳು ಹೀಗೆ ಎಲ್ಲವನ್ನೂ ಒಳಗೊಂಡ ಲಾಂಛನವು ತಾಲೂಕಿನ ಸಮಗ್ರತೆಯನ್ನು ಒಳಗೊಂಡಿದೆ ಎಂದು ಬರಹಗಾರ ಗಂಗಾಧರ ಕೊಳಗಿ ಹೇಳಿದರು.

    ಅವರು ‘ಸಿದ್ದಾಪುರ ಉತ್ಸವ’ದ ಲಾಂಚನ ಬಿಡುಗಡೆಗೊಳಿಸಿ ಮಾತನಾಡಿ, ಉತ್ಸವದ ಕುರಿತಂತೆ ಈ ಹಿಂದೆಯೇ ಉತ್ಸವ ಸಮಿತಿ ಅಧ್ಯಕ್ಷರಾದ ಕೆ.ಜಿ.ನಾಯ್ಕ ಅವರು ಎಲ್ಲ ವಿವರಗಳನ್ನು ನೀಡಿದ್ದಾರೆ. ಅವರನ್ನು ಒಳಗೊಂಡಂತೆ ಎಲ್ಲ ಪದಾಧಿಕಾರಿಗಳು ಉತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಸಿದ್ದಾಪುರ ಉತ್ಸವದ ಲಾಂಛನ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದ್ದು ಸ್ವಾಗತ ಸಮಿತಿ ಅಧ್ಯಕ್ಷರಾದ ನಾಗರಾಜ ನಾಯ್ಕ ಮಾಳ್ಕೋಡ ಅವರು ಲಾಂಛನ ಬಿಡುಗಡೆಗೆ ನನ್ನನ್ನು ಕೋರಿಕೊಂಡಾಗ ತುಂಬು ಸಂತೋಷದಿಂದ ಪಾಲ್ಗೊಳ್ಳುತ್ತಿದ್ದೇನೆ. ಲಾಂಛನವನ್ನು ಪ್ರಸಿದ್ಧ ಕಲಾವಿದ ರಂಗನಾಥ ಶೇಟ್ ರೂಪಿಸಿದ್ದು, ಅವರನ್ನು ಅಭಿನಂದಿಸಲೇಬೇಕಿದೆ ಎಂದರು.

    ಸಿದ್ದಾಪುರ ಉತ್ಸವ ಸಮಿತಿಯ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ಅಧ್ಯಕ್ಷತೆಯ ವಹಿಸಿದ್ದರು. ವೇದಿಕೆಯಲ್ಲಿ ಸಿದ್ದಾಪುರ ಉತ್ಸವ ಸಮಿತಿ ಗೌರವಾಧ್ಯಕ್ಷ ಉಪೇಂದ್ರ ಪೈ ಬಾಳೂರು, ಕಲಾವಿದ ರಂಗನಾಥ ಶೇಟ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಆಕಾಶ ಎಸ್.ಕೊಂಡ್ಲಿ, ಹರೀಶ ಎಸ್.ಗೌಡರ್ ಹರಳಿಕೊಪ್ಪ, ಕೋಶಾಧ್ಯಕ್ಷ ವಿನಯ ಎಸ್.ಹೊನ್ನೆಗುಂಡಿ, ಸ್ವಾಗತ ಸಮಿತಿ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ, ಕಾರ್ಯದರ್ಶಿ ಪ್ರವೀಣ ಎನ್.ನಾಯ್ಕ ವಾಟಗಾರ, ಪ್ರಚಾರ ಸಮಿತಿಯ ಉಪಾಧ್ಯಕ್ಷ ಶ್ರವಣಕುಮಾರ ಹೊಸೂರು, ಸುರೇಶ ನಾಯ್ಕ ಮೊದಲಾದವರು ಇದ್ದರು.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top