• Slide
    Slide
    Slide
    previous arrow
    next arrow
  • PLI ಯೋಜನೆಯಿಂದ 45,000 ಕೋಟಿ ರೂ. ಹೂಡಿಕೆ, 3 ಲಕ್ಷ ಉದ್ಯೋಗ ಸೃಷ್ಟಿ

    300x250 AD

    ನವದೆಹಲಿ: ದೇಶೀಯ ಉತ್ಪಾದನೆಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸುವ ಗುರಿಯನ್ನು ಹೊಂದಿರುವ ಭಾರತದ ಉತ್ಪಾದನಾ ಆಧಾರಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯು 45,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹೂಡಿಕೆಯನ್ನು ಆಕರ್ಷಿಸಿದೆ ಮತ್ತು 3 ಲಕ್ಷ ಉದ್ಯೋಗಗಳನ್ನು ಸಹ ಸೃಷ್ಟಿಸಿದೆ ಎಂದು ನೀತಿ ಆಯೋಗದ ಸಿಇಒ ಪರಮೇಶ್ವರನ್ ಅಯ್ಯರ್ ಸೋಮವಾರ ಹೇಳಿದ್ದಾರೆ.

    ಆಟೋಮೊಬೈಲ್ ಮತ್ತು ಆಟೋ ಘಟಕಗಳು, ವೈಟ್ ಗೂಡ್ಸ್, ಫಾರ್ಮಾ, ಜವಳಿ, ಆಹಾರ ಉತ್ಪನ್ನಗಳು, ಹೆಚ್ಚಿನ ದಕ್ಷತೆಯ ಸೋಲಾರ್ ಪಿವಿ ಮಾಡ್ಯೂಲ್‌ಗಳು, ಸುಧಾರಿತ ಕೆಮೆಸ್ಟ್ರಿ ಸೆಲ್, ಉಕ್ಕು ಸೇರಿದಂತೆ 14 ವಲಯಗಳಿಗೆ ಸುಮಾರು 2 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರ ಈ ಯೋಜನೆಯನ್ನು ಹೊರತಂದಿದೆ.

    “ಪಿಎಲ್‌ಐ ಕಾರ್ಯಕ್ರಮವು ಈಗಾಗಲೇ ಫಲಿತಾಂಶಗಳನ್ನು ತೋರಿಸಲು ಪ್ರಾರಂಭಿಸಿದೆ. ಸುಮಾರು ರೂ. 800 ಕೋಟಿಗಳನ್ನು ಈಗಾಗಲೇ ಪ್ರೋತ್ಸಾಹಕಗಳ ರೂಪದಲ್ಲಿ ಪಾವತಿಸಲಾಗಿದೆ. ಮಾರ್ಚ್‌ ವೇಳೆಗೆ ಪ್ರೋತ್ಸಾಹಕ ರೂ. 3,000 ಕೋಟಿಯಿಂದ ರೂ. 4,000 ಕೋಟಿಗೆ ಹತ್ತಿರವಾಗುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ” ಎಂದು ಅಯ್ಯರ್ ತಿಳಿಸಿದ್ದಾರೆ.

    300x250 AD

    ಪಿಎಲ್‌ಐ ಯೋಜನೆಯು ದೇಶೀಯ ಉತ್ಪಾದನೆಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು ಮತ್ತು ಉತ್ಪಾದನೆಯಲ್ಲಿ ಜಾಗತಿಕ ಚಾಂಪಿಯನ್‌ಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಮತ್ತು ಇದು  ಫಲಿತಾಂಶಗಳನ್ನು ನೀಡುತ್ತಿದೆ. ಈಗಾಗಲೇ ಸುಮಾರು 45,000 ಕೋಟಿ ಹೂಡಿಕೆ ಬಂದಿದೆ, ಮೂರು ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಮತ್ತು 2 ಲಕ್ಷ ಕೋಟಿ ಮೌಲ್ಯದ ಉತ್ಪಾದನೆ ಈಗಾಗಲೇ ನಡೆದಿದೆ ಎಂದು ಅವರು ಹೇಳಿದ್ದಾರೆ.

    ಕೃಪೆ: http://news13.in

    Share This
    300x250 AD
    300x250 AD
    300x250 AD
    Leaderboard Ad
    Back to top