• Slide
    Slide
    Slide
    previous arrow
    next arrow
  • ಫೆ.11ಕ್ಕೆ ಸಂಪಖಂಡ ಗ್ರೂಪ್ ಸೇವಾ ಸಹಕಾರಿ ಸಂಘದ ಶತಮಾನ ಸಂಭ್ರಮ

    300x250 AD

    ಶಿರಸಿ: ಗ್ರಾಮೀಣ ಪ್ರದೇಶದ ರೈತರ, ಜನಸಾಮಾನ್ಯರ ಜೀವನಾಡಿಯಾಗಿ ಜಾನ್ಮನೆಯ ಸಂಪಖಂಡ ಗ್ರೂಪ್ ಸೇವಾ ಸಹಕಾರಿ ಸಂಘ ಶತಮಾನ ಸಂದಿದೆ. ಈ ಸಂಭ್ರಮವನ್ನು ಫೆ.11 ರಂದು ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಎಸ್. ಹೆಗಡೆ ಜಾನ್ಮನೆ ಹೇಳಿದರು.
    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪಖಂಡ ಗ್ರೂಪ್ ಶೇತಕಿ ಸಹಕಾರಿ ಸಂಘ 10-01-1923ರಂದು ಮುಂಬೈ ಕೋ-ಆಪರೇಟಿವ್ ಆಕ್ಟ್ ಪ್ರಕಾರ ನೊಂದಣಿಗೊಂಡು ಶಿರಸಿ ತಾಲೂಕಿನ ಜಾನ್ಮನೆ ಮಜರೆಯನ್ನು ಮಧ್ಯವರ್ತಿ ಸ್ಥಳವನ್ನಾಗಿಸಿಕೊಂಡು ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗುವಂತೆ ದಿನಾಂಕ 25-02-1923 ರಿಂದ ಕೆಲಸ ಪ್ರಾರಂಭಿಸಿದೆ. ರೂಪಾಯಿಗಳಲ್ಲಿ ವ್ಯವಹಾರ ಪ್ರಾರಂಭಿಸಿ ಇಂದು ಕೋಟಿಗೂ ಮೀರಿ ವ್ಯವಹಾರ ಮಾಡಿ ಆರಂಭಿಕ ಎಡರುತೊಡರು, ಸಾಕಷ್ಟು ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿನಿಂತು ನೂರು ವರ್ಷಗಳನ್ನು ಪೂರೈಸಿ “ಶತಮಾನೋತ್ಸವ” ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ ಎಂದರು.
    ದಿ. ತಿಮ್ಮಯ್ಯ ಸೀತಾರಾಮ ಹೆಗಡೆ ಜಾನ್ಮನೆ ಮೊದಲ ಅಧ್ಯಕ್ಷತೆಯಲ್ಲಿ, ಶ್ರೀನಿವಾಸ ಭಕ್ತ ಸ್ಕೂಲ್ ಮಾಸ್ತರ್ ಮೊದಲ ಕಾರ್ಯದರ್ಶಿಯಾಗಿ ದಿ. ಎನ್.ಎನ್ ಕೇಶವೈನ್ ಹಾಗೂ ದಿ. ಸುಂದರರಾವ್ ಪಿ. ಪಂಡಿತ್‌ರವರ ಮಾರ್ಗದರ್ಶನದಲ್ಲಿ 27 ಸದಸ್ಯರನ್ನೊಳಗೊಂಡು 3,000/- ರೂಪಾಯಿ
    ಬಂಡವಾಳ ಸಂಗ್ರಹಿಸುವ ಗುರಿಯೊಂದಿಗೆ ಕಾರ್ಯಚಟುವಟಿಕೆ ಆರಂಭಿಸಿತು. ಮೂಲಸೌಕರ್ಯದ ಕೊರತೆ, ಬಡತನ, ಅನಕ್ಷರತೆ, ಪರರ ಆಳ್ವಿಕೆ, ಅಸಮರ್ಪಕ ಸಾಗಾಟ ಸಂಪರ್ಕ, ಕಳ್ಳಕಾಕರ ಭಯ, ವಖಾರಿ ಅಥವಾ ಸ್ಥಳೀಯ ಲೇವಾದೇವಿಗಾರರ ಬಳಿ ಕೈಸಾಲ, ಹೀಗೆ ಎಲ್ಲಾ ರೀತಿಯಿಂದಲೂ ರೈತ ಶೋಷಣೆಗೆ ಒಳಗಾಗಿದ್ದ ಕಾಲದಲ್ಲಿಯೂ ಸದರಿ ರೈತನ ವಿಶ್ವಾಸಗಳಿಸಿ, ಜನಪರ ಕಾಳಜಿವಹಿಸಿ ಶೇರು ಹಾಗೂ ಠೇವು ಸಂಗ್ರಹಿಸಿ ಸಾಲ ಹಂಚಲು ದುಡ್ಡಿನ ಹೊಂದಾಣಿಕೆ ಮಾಡಿ ಕಟ್ಟಿದ ಸಂಘವನ್ನು ಉಳಿಸಿಕೊಂಡು ಜವಾಬ್ದಾರಿಯಿಂದ ಬೆಳೆಸಿ ಇಂದು ಶಾಶ್ವತ ನೆಲೆಯನ್ನು ನೀಡಿ ಸಶಕ್ತಗೊಳಿಸಲಾಗಿದೆ.

    1962ರಂದು ಸಂಘದ ಹೆಸರು ಈಗಿರುವ “ಸಂಪಖಂಡ ಗ್ರೂಪ್ ಸೇವಾ ಸಹಕಾರಿ ಸಂಘ ನಿಯಮಿತ ಜಾನ್ಮನೆ” ಎಂದು ಪರಿವರ್ತಿತಗೊಂಡಿತು ಎಂದರು.
    ಶತಮಾನೋತ್ಸವ ಕಾರ್ಯಕ್ರಮವನ್ನು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದು, ಸಚಿವ ಶಿವರಾಮ ಹೆಬ್ಬಾರ್ ಇತರ ಗಣ್ಯರು ಭಾಗಿಯಾಗಲಿದ್ದಾರೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎನ್. ಎನ್. ಭಟ್, ಮುಖ್ಯ ಕಾರ್ಯನಿರ್ವಾಹಕ ರಾಘವೇಂದ್ರ ಹೆಗಡೆ, ನಿರ್ದೇಶಕರಾದ ವಸಂತ ಹೆಗಡೆ ಶಿರಿಕುಳಿ, ರತ್ನಾಕರ ಭಟ್, ರವೀಂದ್ರ ಹೆಗಡೆ, ಕುಸುಮಾ ಹೆಗಡೆ, ರಾಘವೇಂದ್ರ ಕೂಗ್ತೆಮನೆ ಇತರರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top