ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಶಾಲಾ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಂ ಅವರು ಸತತ ಎರಡನೇ ವರ್ಷ ವಿಶ್ವದ ಅತ್ಯಂತ ಮೇಧಾವಿ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಯುಎಸ್ ಮೂಲದ ಜಾನ್ಸ್ ಹಾಪ್ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ ಸಂಸ್ಥೆಯು 76 ದೇಶಗಳ 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ನಡೆಸಿದ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ “ವಿಶ್ವದ ಮೇಧಾವಿ” ವಿದ್ಯಾರ್ಥಿಗಳ ಪಟ್ಟಿಯಲ್ಲಿ ನತಾಶಾ ಸ್ಥಾನ ಪಡೆದುಕೊಂಡಿದ್ದಾಳೆ.
13 ವರ್ಷದ ನತಾಶಾ ನ್ಯೂಜೆರ್ಸಿಯ ಫ್ಲಾರೆನ್ಸ್ ಎಂ ಗೌಡಿನೀರ್ ಮಿಡಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಳೆ. ಗ್ರೇಡ್ 5 ವಿದ್ಯಾರ್ಥಿಯಾಗಿದ್ದಾಗ 2021 ರಲ್ಲಿ ಆಕೆ ಜಾನ್ಸ್ ಹಾಪ್ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ (CTY) ಪರೀಕ್ಷೆಯನ್ನು ಬರೆದಿದ್ದಳು. ಆಕೆ ಎಲ್ಲಾ ಅಭ್ಯರ್ಥಿಗಳ ಪೈಕಿ ಅತ್ಯಧಿಕ ಶ್ರೇಣಿ ಗಳಿಸಿದ್ದಾಳೆ.
ಪೆರಿಯನಾಯಗಂ ಅವರ ಪೋಷಕರು ಚೆನ್ನೈ ಮೂಲದವರು.
ಕೃಪೆ: http://news13.in