• Slide
    Slide
    Slide
    previous arrow
    next arrow
  • ಭಾರತೀಯರ‌ ಮೇಲೆ ದಾಳಿಯಾಗಿದ್ದು ಸಂಪತ್ತಿಗಾಗಲ್ಲ, ಜ್ಞಾನದ ಮೇಲೆ: ವಿನಾಯಕ ಭಟ್‌ ಮೂರೂರು

    300x250 AD

    ಕುಮಟಾ : ಉತ್ತರಕನ್ನಡ ಜಿಲ್ಲೆ ಜ್ಞಾನದಲ್ಲಿ ಸಮೃದ್ಧವಾಗಿದೆ. ಇಲ್ಲಿಯ ವಾತಾವರಣ ಸಾಹಿತ್ಯಕ್ಕೆ ಅನುಕೂಲಕರವಾಗಿದ್ದು, ನಮಗೆಲ್ಲರಿಗೂ ಅದು ಬರವಣಿಗೆ ಹಾಗೂ ಸಾಹಿತ್ಯಕ್ಕೆ ಬಲ‌ ನೀಡಿದೆ. ನಾಡು ನುಡಿಯ ಪ್ರಭಾವ ನಮ್ಮ ಸಾಹಿತ್ಯದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೊಸದಿಗಂತ ಪತ್ರಿಕೆಯ ಸಂಪಾದಕ ವಿನಾಯಕ ಭಟ್ಟ ಮೂರೂರು ಹೇಳಿದರು. ಅವರು ತಾಲೂಕಿನ ನಾದಶ್ರೀ ಕಲಾ ಕೇಂದ್ರದ ಸಭಾಭವನದಲ್ಲಿ ನಡೆದ ಸ್ವಸ್ತಿ ಪ್ರಕಾಶನದ “ದಶಮಾನೋತ್ಸವ ಸಂಭ್ರಮ” ಕಾರ್ಯಕ್ರಮದಲ್ಲಿ ಡಾ. ನವೀನ್ ಗಂಗೋತ್ರಿಯವರ ‘ ಕಥಾಗತ’ ಹಾಗೂ ಶ್ರೀಮತಿ ಸುಧಾ ಎಂ ಅವರ ‘ಅಪೂರ್ಣವಲ್ಲ’ ಇವೆರಡೂ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.

    ನಮಗೆ ಇತಿಹಾಸವನ್ನು ಯಾರೂ ಕಲಿಸಿಲ್ಲ. ನಾವು ಕಲಿತ ಇತಿಹಾಸ ಸರಿಯಾದ್ದಲ್ಲ ಎಂಬುದು ನಮಗೆ ಈಗ ಅರಿವಾಗುತ್ತಿದೆ. ಇತಿಹಾಸ ಬದಲಿಸಬೇಕು ಎಂಬ ಮಾತು ಬಂದಾಗ ಗದ್ದಲಗಳಾದವು ಆದರೆ ಸರಿಯಾದ ಇತಿಹಾಸ ಕಲಿಸುವ ಅಗತ್ಯತೆ ಇದೆ ಎಂದು ಅವರು ತಿಳಿಸಿದರು. ಪೋರ್ಚುಗೀಸ್ ರಾಜ ಹಾಗೂ ನೆಹರುರವರ ವಿಚಾರಗಳನ್ನು ಉದಾಹರಣೆಯೊಂದಿಗೆ ವಿವರಸಿದರು. ಭಾರತೀಯರ ಮೇಲೆ ದಾಳಿ ನಡೆದಿದ್ದು ದೇಶಕ್ಕಾಗಲೀ ಸಂಪತ್ತಿಗಾಗಲೀ ಅಲ್ಲ. ದಾಳಿ ನಡೆದಿದ್ದು ಜ್ಞಾನದ ಮೇಲೆ ಎಂದು ಅವರು ವಿವರಿಸಿದರು.

    ಓದುಗರ ಸಂಖ್ಯೆ ಗಣನೀಯವಾಗಿದೆ. ಆದರೆ ಓದುಗರಿಗೆ ಯೋಗ್ಯವಾದ ಗುಣಮಟ್ಟದ ಕೃತಿಗಳನ್ನು ಕೊಡಬೇಕಾದ ಅನಿವಾರ್ಯತೆ ಇದೆ ಎಂದ ಅವರು, ಪುಸ್ತಕ ಬರೆಯುವುದರಲ್ಲಿ ಸ್ಪರ್ಧೆ ಏರ್ಪಡುತ್ತಿದೆ ಅದರ ಬದಲಾಗಿ ಬರಹದ ಮೌಲ್ಯಗಳು ಹೆಚ್ಚಲಿ ಎಂದು ಅವರು ಕಿವಿಮಾತು ಹೇಳಿದರು.

    ಕೆ.ಎನ್ ಗಣೇಶ ಅವರ ಸಾಹಿತ್ಯದ ಅಂಶಗಳನ್ನು ಸ್ಮರಿಸಿಕೊಂಡ ಅವರು, ತನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು. ಕುಮಟಾದಂತಹ ಊರಿನಲ್ಲಿ ಪುಸ್ತಕ ಬಿಡುಗಡೆಗೆ ಬೆಂಗಳೂರಿನಲ್ಲಿ ಸೇರುವಷ್ಟೇ ಜನರು ಸೇರಿದುದು ಸಂತಸದ ವಿಚಾರ ಎಂದರು.

    300x250 AD

    ಖ್ಯಾತ ಸಾಹಿತಿ, ವಿಮರ್ಶಕ ಡಾ. ಶ್ರೀಧರ್ ಬಳಗಾರ ಸಭಾಧ್ಯಕ್ಷತೆ ವಹಿಸಿದ್ದರು. ಸ್ವಸ್ಥಿ ಪ್ರಕಾಶನ ದಶಮಾನೋತ್ಸವದ ಕಾರ್ಯಕ್ರಮಕ್ಕೆ ಸಂಘಟಕರಿಗೆ ಇದ್ದ ಜನರ ಸೇರಿಸುವುದು ಹೇಗೆ ಎಂಬ ದುಗುಡ ಈ ಸಭೆ ನೋಡಿದಾಗ ಶಾಂತವಾಗಿದೆ. ಕುಮಟಾದವರ ಸಾಹಿತ್ಯದ ಪ್ರೀತಿ ಇಲ್ಲಿ ಅನಾವರಣಗೊಂಡಿದೆ ಎಂದರು. ನಿವೃತ್ತ ಪ್ರಾಚಾರ್ಯರಾದ ನಿತ್ಯಾನಂದ ಹೆಗಡೆ ಹಾಗೂ ಸಾಹಿತಿ ಶ್ರೀಮತಿ ಸುಧಾರಾಣಿ ನಾಯ್ಕ ಅನಾವರಣಗೊಳ್ಳಲಿರುವ ಕೃತಿಗಳ ಕುರಿತು ಪರಿಚಯಿಸುತ್ತಾ, ಕೃತಿಕಾರರ ಬರಹದ ಬಗ್ಗೆ ಹಾಗೂ ಪುಸ್ತಕ ಒಳಗೊಂಡ ಪ್ರಮುಖ ಅಂಶಗಳ ಬಗ್ಗೆ ಬೆಳಕು ಚೆಲ್ಲಿದರು.

    ಸ್ವಸ್ತಿ ಪ್ರಕಾಶನದ ಸಂಚಾಲಕರಾದ ಶ್ರೀಮತಿ ಪ್ರಿಯಾ ಎಂ. ಕಲ್ಲಬ್ಬೆ ಪ್ರಾಸ್ತಾವಿಕ ಮಾತನ್ನಾಡಿ, ಹತ್ತು ವರ್ಷಗಳಲ್ಲಿ ಏಳು ಪುಸ್ತಕಗಳನ್ನು ಹೊರತಂದಿರುವ ಪ್ರಕಾಶನದ ಧನ್ಯತೆಯ ಕ್ಷಣ ಇದೆನ್ನುತ್ತಾ ಈವರೆಗೆ ಸಹಕರಿಸಿದವರನ್ನು ಸ್ಮರಿಸಿದರು. ಸಂಜಯ ಭಟ್ಟ ಸ್ವಾಗತಿಸಿದರು. ಕೃತಿಕಾರರಾದ ಡಾ. ನವೀನ ಗಂಗೋತ್ರಿ ಹಾಗೂ ಶ್ರೀಮತಿ ಸುಧಾ ಎಂ ತಮ್ಮ ಕೃತಿಗಳ ಬಗ್ಗೆ ಮಾತನಾಡಿದರು. ಲೇಖಕರು ಹಾಗೂ ಪ್ರಕಾಶಕರಿಗೆ ಶಿಕ್ಷಣ ನೀಡಿದ ರಾಧಾಕೃಷ್ಣ ನಾಯಕ ಅವರನ್ನು ಗೌರವಿಸಲಾಯಿತು.

    ಎಂ. ಪೂರ್ವಿತಾ ಹಾಗೂ ವರ್ಣ ಕ್ಲಾಸಿಕಲ್ ಆನ್ಲೈನ್ ಭರತನಾಟ್ಯ ವಿದ್ಯಾರ್ಥಿ ಗಳಿಂದ ನೃತ್ಯಪ್ರದರ್ಶನ, ಶ್ವೇತಾ ಭಟ್ ಸಂಗಡಿಗರಿಂದ ಸುಗಮಸಂಗೀತ ಕಾರ್ಯಕ್ರಮ ನಡೆಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top