ನವದೆಹಲಿ: ಈ ವರ್ಷದ ಬೇಸಿಗೆಯ ಪ್ರವಾಸಕ್ಕೆ . Indian Railway Catering and Tourism Corporation ಹೊಸ ಯೋಜನೆಯನ್ನು ಜಾರಿಗೊಳಿಸಿದೆ.
ಈ ಬಾರಿ ಲೇಹ್- ಲಡಾಖ್ ಭಾಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ IRCTC (Indian Railway Catering and Tourism Corporation) ಹೊಸ ಟೂರ್ ಪ್ಯಾಕೇಜ್ ಸಿದ್ಧಪಡಿಸಿದೆ.
ಈ ಟೂರ್ ಪ್ಯಾಕೇಜ್ ಜೂನ್ 6, 20, 27 ಹಾಗೂ ಜುಲೈ 3, 10, 17ಕ್ಕೆ ನಿರ್ಧಾರಗೊಂಡಿದೆ. ಕೊನೆಯ ಪ್ಯಾಕೇಜ್ ಜುಲೈ 24ಕ್ಕೆ ಅಂತ್ಯವಾಗುತ್ತದೆ.
ಏಳು ದಿನಗಳ ಅವಧಿಯ ಪ್ಯಾಕೇಜ್ ನಲ್ಲಿ ಮುಂಬೈನಿಂದ ಪ್ರವಾಸ ಆರಂಭಗೊಳ್ಳುತ್ತದೆ. ಅಲ್ಲಿಂದ ಲೇಹ್ ಗೆ ವಿಮಾನದಲ್ಲಿ ಕರೆದೊಯ್ಯಲಾಗುತ್ತದೆ. ಅಲ್ಲಿಂದ ಶಾಮ್ ವ್ಯಾಲಿ, ನುಬ್ರಾ, ಟರ್ಟುಕ್ ಮತ್ತು ಪ್ಯಾಂಗಾಂಗ್ ಸೇರಿದಂತೆ ಹತ್ತು ಹಲವು ಆಕರ್ಷಣೀಯ ಸ್ಥಳಗಳನ್ನು ಪ್ರವಾಸಿಗರು ವೀಕ್ಷಿಸಬಹುದು. ಪ್ರವಾಸ ಕಾಲದಲ್ಲಿ ರಾತ್ರಿ ತಂಗಲು ಹೋಟೆಲ್, ಎರಡೂ ಹೊತ್ತಿನ ಊಟೋಪಾಹಾರಗಳನ್ನು ಪೂರೈಸಲಾಗುತ್ತದೆ.
ಇದಕ್ಕೆ ತಗಲುವ ವೆಚ್ಚ 57,900 ರೂ. ಇಬ್ಬರು ಪ್ರಯಾಣಿಸುತ್ತಿದ್ದರೆ 52,800 ರೂ. ಈ ಮೂವರಿದ್ದರೆ 50,900 ರೂ. ಆಗುತ್ತದೆ ಎಂದು ತಿಳಿಸಲಾಗಿದೆ.