Slide
Slide
Slide
previous arrow
next arrow

ರೈತರು ಸರಕಾರದ ಯೋಜನೆಗಳ ಮೂಲಕ ಆದಾಯ ವೃದ್ಧಿಸಿಕೊಳ್ಳಬೇಕು: ಡಾ.B.P.ಸತೀಶ

300x250 AD

ಶಿರಸಿ: ರೈತರು ಸರಕಾರದ ವಿವಿಧ ಯೋಜನೆಗಳನ್ನು ಉಪಯೋಗಿಸಿಕೊಂಡು ತಮ್ಮ ಆದಾಯವನ್ನು ವೃದ್ಧಿಕೊಳ್ಳುವಂತೆ ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಡಾ.ಬಿ.ಪಿ.ಸತೀಶ ಕರೆನೀಡಿದರು.
ನಬಾರ್ಡ್, ಶಿರಸಿ ಬೈಪ್ ಸಂಸ್ಥೆ, ಶ್ರೀಮಹಾಗಣಪತಿ ವರ್ತೆ ಜಲಾನಯನ ಸಮಿತಿ ದೇವನಹಳ್ಳಿ/ಸರಗುಪ್ಪಾ, ತಾಲೂಕಾ ಪಂಚಾಯತಿ, ತೋಟಗಾರಿಕೆ, ಕೃಷಿ, ಮೀನುಗಾರಿಕಾ ಹಾಗೂ ಪಶುಪಾಲನಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ದೇವನಹಳ್ಳಿ ಸರಗುಪ್ಪಾ ಗ್ರಾಮದ ರೈತರು ಹಾಗೂ ರೈತ ಮಹಳೆಯರಿಗೆ ತೋಟಗಾರಿಕಾ ಕೃಷಿ ಮೀನುಗಾರಿಕಾ ಪಶು ಇಲಾಖಾ ಕಾರ‍್ಯಕ್ರಮಗಳ ಮಾಹಿತಿಗೋಷ್ಠಿ ಶಿರಸಿ ತಾಲೂಕಾ ಪಂಚಾಯತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಇಲಾಖೆ ಶಿರಸಿ ಸಹಾಯಕ ನಿರ್ದೇಶಕ ಮಧುಕರ ನಾಯ್ಕ, ರೈತರು ಯಾವುದೇ ಸಂಕೋಚ ಇಲ್ಲದೇ ಇಲಾಖೆಗಳನ್ನು ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆಗಳ ಉಪಯೋಗ ಪಡೆಯಲು ಅರ್ಜಿ ಸಲ್ಲಿಸಲು ಸಲಹೆ ನೀಡಿ, ಕೃಷಿ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಅದರಂತೆ ಸತೀಶ ಹೆಗಡೆ ಹಿರಿಯ ಸಹಾಯಕ ನಿರ್ದೇಶಕ ಹಾಗೂ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವೈಭವ ಹಾಗೂ ಹಿರಿಯ ಪಶು ಅಧಿಕಾರಿ ಡಿ.ಎಮ್.ಹೆಗಡೆ ತಮ್ಮ ಇಲಾಖೆಗಳ ಕಾರ್ಯಕ್ರಮಗಳ ಮಾಹಿತಿಯನ್ನು ಸೇರಿದ ರೈತರು ಹಾಗೂ ರೈತ ಮಹಿಳೆಯರಿಗೆ ನೀಡಿದರು.
ಮಹಾಗಣಪತಿ ವರ್ತೆ ಜಲಾನಯನ ಸಮಿತಿ ದೇವನಹಳ್ಳಿಯ ಅಧ್ಯಕ್ಷ ನಾರಾಯಣ ಮರಾಠಿ ಹಾಗೂ ಕಾರ್ಯದರ್ಶಿ ವಿಶ್ವನಾಥ ದಿವೇಕರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ದೇವನಹಳ್ಳಿ/ ಸರಗುಪ್ಪಾ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬೈಫ್ ಜಿಲ್ಲಾ ಸಂಯೋಜಕ ಎಮ್.ಎನ್.ಹೆಗಡೆ ಸ್ವಾಗತಿಸಿ/ನಿರ್ವಹಣೆ ಮಾಡಿದರು. ಬಾಬಣ್ಣ ವಂದನಾರ್ಪಣೆ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top