• Slide
    Slide
    Slide
    previous arrow
    next arrow
  • ಲಯನ್ಸ್ ಮಾಜಿ ಗವರ್ನರ್ ದಂಪತಿಗಳಿಂದ ವೃಕ್ಷಮಾತೆ ತುಳಸಿ ಗೌಡರಿಗೆ ಸನ್ಮಾನ

    300x250 AD

    ಅಂಕೋಲಾ: ಲಯನ್ಸ್ ಮಾಜಿ ಗವರ್ನರ್ ಶ್ರೀಕಾಂತ ಮೊರೆ ಮತ್ತು ಅವರ ಪತ್ನಿ ಉಜ್ವಲಾ ಮೊರೆ ತಾಲೂಕಿನ ಹೊನ್ನಳ್ಳಿಯ ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಅವರ ನಿವಾಸಕ್ಕೆ ತೆರಳಿ, ಶಾಲು ಹೊದಿಸಿ ಸನ್ಮಾನ ಮಾಡಿದರು.

    ಶ್ರೀಕಾಂತ ಮೊರೆ ತುಳಸಿ ಗೌಡ ಅವರ ಆರೋಗ್ಯ ವಿಚಾರಿಸಿ ದೀರ್ಘಾಯುಷ್ಯ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಉತ್ತರ ಕನ್ನಡಕ್ಕೆ ಪದ್ಮಶ್ರೀ ದೊರೆತಿದ್ದು ಬಹಳ ಸಂತೋಷವಾಯಿತು ಎಂದರು. ಮನೆಗೆ ಬಂದ ಶ್ರೀಕಾಂತ ಮೊರೆ ಮತ್ತು ಉಜ್ವಲಾ ಮೊರೆ ದಂಪತಿಗಳಿಗೆ ತುಳಸಿ ಗೌಡ ಅವರು ಶಾಲೂ ಹೊದಿಸಿ ಬರಮಾಡಿಕೊಂಡರು.

    300x250 AD

    ಈ ಸಂದರ್ಭದಲ್ಲಿ ಕಲ್ಲೂರು ಟ್ರಸ್ಟ್ ಅಧ್ಯಕ್ಷ  ಇಬ್ರಾಹಿಂ ಕಲ್ಲೂರು, ಜೋನ್ ಚೇರ್‌ಪರ್ಸ್ನ್ ಐಶ್ವರ್ಯಾ ಮಾಸೂರಕರ, ಶಶಿನಂದನ ಮಾಸೂರಕರ, ಸಂಜಯ ಅರುಡೆಕರ, ಮಹಾಂತೇಶ ರೇವಡಿ, ಎಸ್.ಆರ್.ಉಡುಪಿ, ಗಣಪತಿ ನಾಯಕ, ಸಂದೀಪ ಗೋಕರ್ಣಕರ್, ಮೊಹಮ್ಮದ್ ಶಫಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಎಲ್ಲರೂ ತುಳಸಿ ಗೌಡರ ಆರ್ಶಿವಾದ ಪಡೆದರು. 

    Share This
    300x250 AD
    300x250 AD
    300x250 AD
    Leaderboard Ad
    Back to top