Slide
Slide
Slide
previous arrow
next arrow

ಚುನಾವಣಾ ಆಮಿಷ ನಿಯಂತ್ರಿಸಲು ಕೆಆರ್‌ಎಸ್ ಆಗ್ರಹ

300x250 AD

ಕಾರವಾರ: ಚುನಾವಣೆಯಲ್ಲಿ ಮತದಾರರಿಗೆ ಒಡ್ಡುವ ಆಮಿಷಗಳ ನಿಯಂತ್ರಣಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಕೆಆರ್‌ಎಸ್ ಪಕ್ಷವು ರಾಜ್ಯದಾದ್ಯಂತ ಕರ್ನಾಟಕ ಜನಚೈತನ್ಯ ಯಾತ್ರೆಯ ವಾಹನದಲ್ಲಿ ತೆರಳಿ ಚುನಾವಣಾ ಜಾಗೃತಿ ಕೈಗೊಳ್ಳುತ್ತಿದ್ದು, ಇದುವರೆಗೆ 11 ಜಿಲ್ಲೆಗಳಿಗೆ ಭೇಟಿ ನೀಡಿ ಆಮಿಷ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವ ಕುರಿತು ಜಾಗೃತಿ ಮೂಡಿಸಿದೆ. ಅದರಂತೆ ನಗರಕ್ಕೆ ಆಗಮಿಸಿದ ಪಕ್ಷದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿ ಚುನಾವಣಾ ಅಕ್ರಮಗಳ ವಿರುದ್ಧ ಘೋಷಣೆ ಕೂಗಿದರು. ವಿವಿಧ ಫಲಕಗಳನ್ನು ಹಿಡಿದು, ಚುನಾವಣೆಯಲ್ಲಿ ಕುಕ್ಕರ್, ಲಿಕ್ಕರ್, ಮಿಕ್ಸರ್ ಹಂಚುವವರ ಬಂಧನಕ್ಕೆ ಆಗ್ರಹಿಸಿದರು. ನ್ಯಾಯಯುತ ಚುನಾವಣೆ ನಡೆಸುವಂತೆ ಒತ್ತಾಯಿಸಿದರು.

300x250 AD

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಚುನಾವಣೆಗಳಲ್ಲಿ ಮತದಾರರಿಗೆ ಆಮಿಷ ಒಡ್ಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡಬಾರದು. ಆಮಿಷಗಳಿಂದ ಮತ ಚಲಾಯಿಸಿದರೆ ಅದಕ್ಕೆ ನೇರವಾಗಿ ಜಿಲ್ಲಾಡಳಿತವೇ ಕಾರಣವಾಗುತ್ತದೆ. ಅಂತಹ ಘಟನೆಗಳು ಕಂಡುಬಂದರೆ ಕೂಡಲೇ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

Share This
300x250 AD
300x250 AD
300x250 AD
Back to top