ಯಲ್ಲಾಪುರ: ಪಟ್ಟಣದ ಪೊಲೀಸ್ ಕ್ವಾರ್ಟರ್ಸ್ ಎದುರುಗಡೆ ಇರುವ ಅರವತ್ತು ಅಡಿ ಆಳದ ಬಾವಿಯಲ್ಲಿ ಬಿದ್ದ ಬೆಕ್ಕಿನ ಮರಿಯನ್ನು ಯಲ್ಲಾಪುರ ಅಗ್ನಿಶಾಮಕ ದಳದವರು ಸುರಕ್ಷಿತವಾಗಿ ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಮುದ್ದಾದ ಬೆಕ್ಕಿನ ಮರಿಯೊಂದು ಅರವತ್ತು ಅಡಿ ಆಳದ ಬಾವಿಯಲ್ಲಿ ಬಿದ್ದು ಒದ್ದಾಡುತ್ತಿತ್ತು, ಅಕ್ಕ ಪಕ್ಕದ ಮನೆಯವರು ಬೆಕ್ಕಿನ ಮರಿಯನ್ನು ರಕ್ಷಿಸುವಂತೆ ಅಗ್ನಿಶಾಮಕ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿ ಶಂಕರಪ್ಪ ಅಂಗಡಿ, ಪ್ರಧಾನ ಅಗ್ನಿಶಾಮಕ ಹನುಮಂತ ನಾಯ್ಜ, ಆಗ್ನಿ ಶಾಮಕರಾದ ಅಮಿತ ಗುನಗಿ, ಉಲ್ಲಾಸ ನಾಗೇಕರ, ನೀಲಕಂಠ ಅಗ್ನಿಶಾಮಕ ವಾಹನ ಚಾಲಕ ಗಜಾನನ ನಾಯ್ಕ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಅಗ್ನಿಶಾಮಕ ದಳದಿಂದ ಬಾವಿಗೆ ಬಿದ್ದ ಬೆಕ್ಕಿನ ಮರಿ ರಕ್ಷಣೆ
