ನವದೆಹಲಿ: ಸಚಿವೆ ನಿರ್ಮಲಾ ಸೀತಾರಾಮನ್ 2023-24 ನೇ ಸಾಲಿನ ಬಜೆಟ್ ಮಂಡನೆ ಭಾಷಣವನ್ನು ಆರಂಭಿಸುವ ಪೂರ್ವದಲ್ಲಿ ಮಾತನಾಡಿ, ಭಾರತದ ಆರ್ಥಿಕತೆ ಸರಿಯಾದ ಹಾದಿಯಲ್ಲಿದೆ ಎಂದರು.
ಅವರ ಭಾಷಣದ ವೇಳೆ ಆಡಳಿತ ಪಕ್ಷದ ಸದಸ್ಯರು ‘ಮೋದಿ ಮೋದಿ’ ಎಂದು ಕೂಗಿದರು. ಇದನ್ನು ವಿರೋಧಿಸಿ ಪ್ರತಿಪಕ್ಷ ಸದಸ್ಯರು ಮತ್ತೊಮ್ಮೆ ‘ಭಾರತ್ ಜೋಡೋ’ ಎಂದು ತಿರುಗೇಟು ನೀಡಿವ ಮೂಲಕ ಭಾಷಣಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ.