ಉಪ್ಪುಂದ: ಮನುವಿಕಾಸ ಸಂಸ್ಥೆ ಶಿರಸಿ ಇವರು ಆಯೋಜಿಸಿದ ವಲಯ ಮಟ್ಟದ ಸ್ವಸಹಾಯ ಸಂಘದ ಸಭೆಯು ಉಪ್ಪುಂದದ ಮಾತೃಶ್ರೀ ಸಭಾಭವನದಲ್ಲಿ ಜರುಗಿತು.
45 ಸ್ವಸಹಾಯ ಸಂಘದಿಂದ 96 ಜನ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಕಾರ್ಯಕ್ರಮವು ಶ್ರೀ ಗುರು ಸಂಘದ ಮಹಿಳೆಯರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು.ಈ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯರಿಗೆ ಮನುವಿಕಾಸ ಸಿಬ್ಬಂದಿ ಚಂದನಾ ನಾಯ್ಕ್ ಅವರು ಸ್ವಾಗತ ಕೋರಿದರು.
ಈ ಕಾರ್ಯಕ್ರಮಕ್ಕೆ ಬೈಂದೂರು ಪಿಎಸ್ಐ ನಿರಂಜನ್ ಗೌಡ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಮನುವಿಕಾಸ ಸಂಸ್ಥೆಯ ಬಗ್ಗೆ ಕಿರು ಪರಿಚಯ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ಪವನ್ ಬೊಮ್ಮನಹಳ್ಳಿ ನಡೆಸಿಕೊಟ್ಟರು. ನಂತರ ಕಾರ್ಯಕ್ರಮದ ಉದ್ಘಾಟಕರಾದ ನಿರಂಜನ್ ಗೌಡ ಮಾತನಾಡಿ, ಮನುವಿಕಾಸ ಸಂಸ್ಥೆಯು ಜನರಿಗೆ ಒಂದು ಉತ್ತಮ ಮಾರ್ಗದರ್ಶನ ಹಾಗೂ ಅಭಿವೃದ್ಧಿ ಹೊಂದುವ ಅವಕಾಶಗಳನ್ನು ನೀಡುತ್ತಿದೆ ಸಂಸ್ಥೆಯ ಜೊತೆಗೂಡಿ ಒಂದು ಸಂಘ ಮಾಡಲು ಹತ್ತು ಜನರ ಗುಂಪು ಬೇಕು ಅದೇ ಆ ಸಂಘ ನಡೆಸಿಕೊಂಡು ಹೋಗಲು ಒಂದು ಸಂಸ್ಥೆ ಜೊತೆಗಿದ್ದರೆ ಸಾಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ನಾಡದೋಣಿ ಭವನದ ಅಧ್ಯಕ್ಷ ಆನಂದ್ ಖಾರ್ವಿ ಮಾತನಾಡಿ ರೈತ ಉತ್ಪಾದಕ ಕಂಪನಿಯಿಂದ ಆಗುವ ಲಾಭಗಳು ಅದರ ಅನುಕೂಲತೆಗಳು ಹಾಗೂ ಇದುವರೆಗೆ ಮನುವಿಕಾಸ ಸಂಸ್ಥೆಯು ಕುಂದಾಪುರ ತಾಲೂಕಿನ ಮೀನುಗಾರ ಸಮುದಾಯದವರಿಗೆ ಮಾಡಿದಂತಹ ಅನುಕೂಲತೆಗಳನ್ನು ವಿಶ್ಲೇಷಿಸಿದರು.
ಹಾಗೆಯೇ ಉಪ್ಪುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಖಾರ್ವಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಶ್ರೀಮತಿ ಸುಶೀಲ ಖಾರ್ವಿ ಅವರು ಈ ಸಭೆಯಲ್ಲಿ ಹಾಜರಿದ್ದರು.
ಮನುವಿಕಾಸ ಸಂಸ್ಥೆಯ ಬಿಡಿಓ ಪವನ್ ಬೊಮ್ಮನಹಳ್ಳಿ ಸಂಘದ ಮಹಿಳೆಯರಿಗೆ ರೈತ ಉತ್ಪಾದಕ ಕಂಪನಿ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿಸಿದರು,
ಕಾರ್ಯಕ್ರಮದ ನಿರೂಪಣೆಯನ್ನು ಮಿಥುನ್ ನಾಯ್ಕ ಹಾಗೂ ಕಾರ್ಯಕ್ರಮದ ವಂದನಾರ್ಪಣೆಯನ್ನು ಕುಮಾರ್ ನಾಯ್ಕ್ ಅವರು ನೆರವೇರಿಸಿದರು, ನವೀನ್ ನಾಯ್ಕ್ ಹಾಗೂ ಸುನಿತಾ F ಇವರು ಸಭೆಯಲ್ಲಿ ಹಾಜರಿದ್ದರು.