• Slide
    Slide
    Slide
    previous arrow
    next arrow
  • ಅನಧಿಕೃತ ತಂಬಾಕು‌ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ: ದಂಡ ವಿಧಿಸಿದ ಅಧಿಕಾರಿಗಳು

    300x250 AD

    ಶಿರಸಿ:ತಾಲೂಕಿನ ಚಿಪಗಿ, ಗೌಡಳ್ಳಿ, ಬಿಸಲಕೊಪ್ಪದಲ್ಲಿರುವ ಅಂಗಡಿಗಳ ಮೇಲೆ ಕೊಟ್ಪಾ 2003 ಕಾಯಿದೆ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಜ.31ರಂದು ದಾಳಿ ನಡೆಸಲಾಗಿದೆ.

    ಆರೋಗ್ಯ,ಕಂದಾಯ, ICDS, ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಅನಧಿಕೃತವಾಗಿ ತಂಬಾಕು ಮಾರಾಟ ಮಾಡುತ್ತಿದ್ದ 20ಕ್ಕೂ ಹೆಚ್ಚು ಅಂಗಡಿಕಾರರಿಗೆ ನೋಟಿಸ್ ಜಾರಿ ಮಾಡಿ ದಂಡ ವಿಧಿಸಿದ್ದಾರೆ.

    300x250 AD

    ಯಾವುದೇ ಮುನ್ನೆಚ್ಚರಿಕೆ ಫಲಕ ಅಳವಡಿಸದೆ ತಂಬಾಕು ಮಾರಾಟ  ಹಾಗೂ ತಂಬಾಕು ಸೇವನೆ  ಅಪರಾಧ ಆಗಿರುತ್ತಿದ್ದು ಈ ಬಗ್ಗೆ ಮಾಹಿತಿ ನೀಡಿ ಒಟ್ಟೂ ₹ 5600/ ದಂಡ ವಿಧಿಸಿ, ಕರಪತ್ರ ನೀಡಿದ್ದಾರೆ.

    ಈ ವೇಳೆ ತಹಶಿಲ್ದಾರ್ ಶ್ರೀಧರ ಮುಂದಲಮನಿ, ಟಿಎಚ್ಒ ಡಾ.ವಿನಾಯಕ ಭಟ್,‌CDPO ದತ್ತಾತ್ರೇಯ ಭಟ್‌, ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು, ಆಹಾರ ಸುರಕ್ಷತಾಧಿಕಾರಿಗಳು, ಹಿರಿಯ ಆರೋಗ್ಯ ನಿರೀಕ್ಷಕಣಾಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ  ಹಾಜರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top