Slide
Slide
Slide
previous arrow
next arrow

ವಾಣಿಜ್ಯ ಸಂಕೀರ್ಣಕ್ಕೆ ದಿ. ಎಸ್.ಬಂಗಾರಪ್ಪನವರ ಹೆಸರಿಡಲು ಪ.ಪಂ ನಿರ್ಣಯ

300x250 AD

ಸಿದ್ದಾಪುರ: ಪಟ್ಟಣದ ಅಜಂತ ಸರ್ಕಲ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣಕ್ಕೆ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಹೆಸರಿಡುವಂತೆ ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಪಟ್ಟಣ ಪಂಚಾಯತ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕ ನಾಮಧಾರಿ ಅಭಿವೃದ್ಧಿ ಸಂಘ ಸಲ್ಲಿಸಿರುವ ಅರ್ಜಿ ಪರಿಶೀಲಿಸಿ ಚರ್ಚಿಸಿ ಸಂಕಿರಣಕ್ಕೆ ಬಂಗಾರಪ್ಪನವರ ಹೆಸರನ್ನು ಇಡಲು ನಿರ್ಣಯ ಮಾಡಲಾಯಿತು.
ಫಾರ್ಮ್ ನಂಬರ್ ತ್ರಿ ನೀಡಿದರೆ ಪಟ್ಟಣ ಪಂಚಾಯಿತಿಗೆ ಹೆಚ್ಚಿಗೆ ಆದಾಯ ಸಿಗುತ್ತದೆ. ಒಬ್ಬ ಸಿಬ್ಬಂದಿಯನ್ನು ಇದಕ್ಕೆ ನೇಮಿಸಿದರೆ ಫಾರಂ ನಂಬರ್ ತ್ರಿ ಯನ್ನು ಹೆಚ್ಚಿಗೆ ನೀಡಬಹುದು ಈ ಬಗ್ಗೆ ಯೋಚಿಸಬೇಕು ಎಂದು ಇಂದು ಮಂಗಳವಾರ ಪಟ್ಟಣ ಪಂಚಾಯತದಲ್ಲಿ ನಡೆದ ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.ಈ ಬಗ್ಗೆ ಪಟ್ಟಣ ಪಂಚಾಯತಿ ಸದಸ್ಯ ಗುರುರಾಜ್ ಶಾನಭಾಗ ಈ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯರು ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಬಗ್ಗೆ ಪಟ್ಟಣ ಪಂಚಾಯತಿ ಸದಸ್ಯ ಗುರುರಾಜ್ ಶಾನಭಾಗ ಈ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯರು ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರಿಗೆ ತೊಂದರೆಯಾಗದoತೆ ತಳ್ಳುಗಾಡಿ ವ್ಯಾಪಾರಸ್ಥರು ಅಂಗಡಿ ಇಟ್ಟುಕೊಳ್ಳಬೇಕು. ಒಬ್ಬರಿಗೆ ಅಂಗಡಿ ಇಟ್ಟುಕೊಳ್ಳಲು ಅವಕಾಶ ಕೊಟ್ಟರೆ ಮುಂದೆ ತೊಂದರೆಯಾಗುತ್ತದೆ. ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಪಟ್ಟಣ ಪಂಚಾಯತ್ ಹಿರಿಯ ಸದಸ್ಯ ಕೆ.ಜಿ. ನಾಯ್ಕ ಎಚ್ಚರ ವಹಿಸುವಂತೆ ಸೂಚಿಸಿದ್ದು,ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
2023- 2024ನೇ ಸಾಲಿನ ಅಂದಾಜು 6,82, 62,133 ಆದಾಯದ, 6,79,20,592 ವೆಚ್ಚದ, 3,41,541 ನಿಕ್ಕಿ ಉಳಿತಾಯದ ಅಂದಾಜು ಅಯವ್ಯಯ ಪತ್ರಿಕೆಯನ್ನು ಮಂಡಿಸಿ ಮಂಜೂರಿ ಪಡೆಯಲಾಯಿತು. ಪಟ್ಟಣದ ವ್ಯಾಪ್ತಿಯಲ್ಲಿರುವ 935 ಅಂಗಡಿಗಳ ವ್ಯಾಪಾರ ಪರವಾನಿಗಿ ಫೀ ಯನ್ನು ಅಂಗಡಿಗಳ ಗ್ರೇಡ್ ಗೆ ಅನುಗುಣವಾಗಿ 100 ರಿಂದ1000 ರೂಗಳ ವರೆಗೆ ಹೆಚ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೆಗುಂಡಿ, ಹಿರಿಯ ಸದಸ್ಯ ಕೆ.ಜಿ ನಾಯ್ಕ ಹಣಜಿಬೈಲ್, ಮಾರುತಿ ನಾಯ್ಕ್, ಗುರುರಾಜ್ ಶಾನಭಾಗ, ಸುಧೀರ್ ನಾಯ್ಕ, ವಿಜಯೇಂದ್ರ ಗೌಡ, ವೆಂಕೋಬ, ಮಂಜುಳಾ ನಾಯ್ಕ, ಕವಿತಾ ಹೆಗಡೆ, ನಾಮ ನಿರ್ದೇಶಕ ಸದಸ್ಯರಾದ ರಾಜೇಂದ್ರ ಕೇಂದ್ರಿ, ಸುರೇಶ ನಾಯ್ಕ. ಮುಖ್ಯಾಧಿಕಾರಿ ಕುಮಾರ ಡಿ.ನಾಯ್ಕ ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top