Slide
Slide
Slide
previous arrow
next arrow

ಕುಗ್ರಾಮಗಳ ಅಭಿವೃದ್ಧಿ ಎನ್.ಎಸ್.ಎಸ್.ನ ಪ್ರಮುಖ ಕಾರ್ಯ: ಡಾ. ಎಸ್.ಎಸ್. ಭಟ್

300x250 AD

ಶಿರಸಿ: ಭಾರತ ಒಂದು ಕೃಷಿ ಪ್ರಧಾನವಾದ ದೇಶವಾಗಿದೆ, ಇಲ್ಲಿ ಸಾಮಾಜಿಕವಾಗಿ ಮತ್ತು ಬೌದ್ಧಿಕವಾಗಿ ಹಾಗೂ ಮುಂತಾದ ಕಾರಣಗಳಿಂದ ಹಿಂದುಳಿದವರು ಬಹಳ ಜನರಿದ್ದಾರೆ. ಇಂತಹ ಜನರನ್ನು ಮತ್ತು ಕುಗ್ರಾಮವನ್ನು ಹುಡುಕಿ ಅಭಿವೃದ್ಧಿ ಪಡಿಸುವುದು ಎನ್ಎಸ್ಎಸ್ ನ ಪ್ರಮುಖ ಕಾರ್ಯವಾಗಿದೆ ಎಂದು ಎಂ‌ಎಂ ಕಾಲೇಜಿನ ಐಕ್ಯುಎಸಿ ಸಂಚಾಲಕ ಡಾ.ಎಸ್.ಎಸ್. ಭಟ್ ಹೇಳಿದರು.

ಅವರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಲ್ಲಿಯಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

           ಶಾಲಾ ಕಾಲೇಜುಗಳಲ್ಲಿ ಕೇವಲ ಪಠ್ಯಗಳಲ್ಲಿರುವ ವಿಷಯವನ್ನು ಅಷ್ಟೇ ಕಲಿಯಬಹುದು ಇದೊಂದು ವ್ಯವಸ್ಥಿತ ಶಿಕ್ಷಣ ಅಷ್ಟೇ. ಆದ್ದರಿಂದ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮುಂತಾದ ವಿಷಯಗಳನ್ನು ಕಲಿಯಬಹುದು. ಶಿಕ್ಷಣ ಎಂಬುದು ನಿಂತ ನೀರು ಅಲ್ಲ. ಕೊಠಾರಿ ಕಮಿಷನ್ ರವರು 1964-1965 ರಲ್ಲಿ ಎನ್ಎಸ್ಎಸ್ ಜಾರಿಗೆ ತಂದರು. ಮನುಷ್ಯನನ್ನು ಒಬ್ಬ ವಿಸ್ಮಯಕಾರಿ ವಿಜ್ಞಾನಿ ಎನ್ನಬಹುದು. ಯುವಜನತೆ ಒಂದು ಭವ್ಯವಾದ ಸಮಾಜವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರರಾಗಿದ್ದಾರೆ. ಯುವಕರಲ್ಲಿ ವಿಚಾರ ಕ್ರಾಂತಿ ಮತ್ತು ಕನಸು ಹೆಚ್ಚಾಗಿ ಬೆಳೆಯುತ್ತಿರುತ್ತದೆ ಹಾಗೂ ಎನ್ಎಸ್ಎಸ್ ನ ಎಲ್ಲಾ ಸ್ವಯಂಸೇವಕರ ಜೀವನ ಉಜ್ವಲಗೊಳ್ಳಲಿ ಎಂದು ಹಾರೈಸಿದರು.

300x250 AD

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಲ್ಲಿಯ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಎ. ಮಾತನಾಡಿ ಎನ್ಎಸ್ಎಸ್ ಸ್ವಯಂಸೇವಕರ ಕೆಲಸ ಕಾರ್ಯಗಳ ಬಗ್ಗೆ ವರ್ಣಿಸಿದರು.ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಎನ್ಎಸ್ಎಸ್ ಸಂಚಾಲಕರಾದ ಆರ್.ಆರ್. ಹೆಗಡೆ ಉಪಸ್ಥಿತರಿದ್ದರು. ಶ್ರವ್ಯಾ ಸ್ವಾಗತಿಸಿದರು, ಶಶಾಂಕ್ ನಿರೂಪಿಸಿದರು, ಹಾಗೂ ಶ್ರವ್ಯಾ ಎಸ್ ವಂದಿಸಿದರು.

Share This
300x250 AD
300x250 AD
300x250 AD
Back to top