• Slide
    Slide
    Slide
    previous arrow
    next arrow
  • ಸಮಾಜದಲ್ಲಿ ಹೆಸರು ಗಳಿಸಿದರೆ ಬದುಕು ಸಾರ್ಥಕ: ವಿಶ್ವೇಶ್ವರ ಭಟ್ಟ

    300x250 AD

    ಕುಮಟಾ: ಜೀವನದಲ್ಲಿ ಹಣ ಗಳಿಸುವ ಜತೆಗೆ ಸಮಾಜದಲ್ಲಿ ಹೆಸರು ಗಳಿಸಿದಾಗ ಮಾತ್ರ ಬದಕು ಸಾರ್ಥಕವಾಗುತ್ತದೆ ಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ಟ ಹೇಳಿದರು.
    ಪಟ್ಟಣದ ಹವ್ಯಕ ಸಭಾಭವನದಲ್ಲಿ ಸಾರ್ಥ ಪ್ರತಿಷ್ಠಾನದ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಪರದೇಶವಾಸ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ಇತ್ತೀಚಿನ ಕೆಲ ವರ್ಷಗಳಿಂದ ಮತದಾನ ಚಲಾಯಿಸಲು ಯುವಕರು ಹಿಂದೇಟು ಹಾಕುತ್ತಿದ್ದು, ಮತ ಚಲಾವಣೆ ನಮ್ಮ ಹಕ್ಕು ಎಂದು ಭಾವಿಸಿ, ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕು. ಲೇಖಕ ಕಿರಣ ಉಪಾಧ್ಯಾಯ ವಿದೇಶದಲ್ಲಿದ್ದರೂ ಕನ್ನಡದ ಮೇಲೆ ಅತಿಯಾದ ಪ್ರೀತಿ ತೋರಿಸುತ್ತಿದ್ದಾರೆ. ಹೊರ ದೇಶದಲ್ಲಿ ಕನ್ನಡ ಮರೆತರೆ ಹೆಚ್ಚು ಡಾಲರ್ ಪಡೆಯಬಹುದು ಎಂದು ಹಲವರ ಅಭಿಪ್ರಾಯವಾಗಿದೆ. ಆದರೆ ಕಿರಣ ಉಪಾಧ್ಯಾಯ ಕನ್ನಡವನ್ನು ಬೆಳೆಸುತ್ತಿದ್ದಾರಲ್ಲದೇ, ಯಕ್ಷಗಾನದ ಹಿರಿಯ ಕಲಾವಿದರನ್ನು ಸೌದಿ ಅರೆಬಿಯಾಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ಪ್ರಸಿದ್ಧ ತಾಣಗಳನ್ನು ಪರಿಚಯಿಸುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
    ಪರದೇಶವಾಸಿ ಪುಸಕ್ತ ಲೋಕಾರ್ಪಣೆಗೊಳಿಸಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಪ್ರತಿಭೆ ಎನ್ನುವುದು ಪ್ರಕಾಶ. ನಾಲ್ಕಾರು ಜನರಿಗೆ ಪ್ರಕಾಶವಾಗುವಂತೆ ನಮ್ಮ ಬದುಕು ಇರಬೇಕು. ಶಿಕ್ಷಣ ಎನ್ನುವುದು ಪರಿಪೂರ್ಣ ಬೆಳವಣಿಗೆ. ಶಿಕ್ಷಣ ಪಡೆದರೆ ಬದುಕು ಸುಲಭವಾಗುತ್ತದೆ ಎಂದು ನಾವೆಲ್ಲರೂ ಭಾವಿಸಿಕೊಂಡಿದ್ದೇವೆ. ಸಮಾಜಕ್ಕೆ ಒಳಿತಾಗುವಂತಹ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದರು.
    ಸಾರ್ಥ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಉಗ್ರು ಅಧ್ಯಕ್ಷತೆ ವಹಿಸಿದ್ದರು. ಲೇಖಕ ಕಿರಣ ಉಪಾಧ್ಯಾಯ ಪರದೇಶವಾಸಿ ಪುಸಕ್ತದ ಕುರಿತು ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಸ್.ಎನ್.ಭಟ್ಟ ವೇದಿಕೆಯಲ್ಲಿದ್ದರು. ನಾಗಶ್ರೀ ಪ್ರಾರ್ಥಿಸಿದರು. ನಂತರ ಉತ್ತರಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top