• Slide
    Slide
    Slide
    previous arrow
    next arrow
  • ಸುಸ್ವರ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮ ಯಶಸ್ವಿ

    300x250 AD

    ದಾಂಡೇಲಿ: ನಗರದ ಭಾವಸಾರ ನಾಮದೇವ ಸಿಂಪಿ ಸಮಾಜದ ಸಭಾಭವನದಲ್ಲಿ ಕಲಾವಿದೆ ಶಶಿಕಲಾ ಭಟ್ಟ ಗೋಪಿಯವರ ನೇತೃತ್ವದ ಸುಸ್ವರ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವನವಾಸಿ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಎಲ್.ಲಕ್ಷ್ಮೇಶ್ವರ ಅವರು ಸುಸ್ವರ ಸಂಗೀತ ವಿದ್ಯಾಲಯದ ಸಂಗೀತ ಸೇವೆ ಸದಾ ಸ್ಮರಣೀಯ. ನಗರದಲ್ಲಿ ಸಂಗೀತ ಮೆಲೈಸುವಿಕೆಯಲ್ಲಿ ಸುಸ್ವರ ಸಂಗೀತ ವಿದ್ಯಾಲಯದ ಪಾತ್ರ ಮಹತ್ವಪೂರ್ಣವಾಗಿದೆ ಎಂದರು.
    ಪತ್ರಕರ್ತ ಸಂದೇಶ್ ಎಸ್.ಜೈನ್ ಅವರು ಶಾಸ್ತ್ರೀಯ ಸಂಗೀತ ಕಲಿತ ಮಗು ಈ ದೇಶದ ಆಸ್ತಿಯಾಗಬಲ್ಲದು. ಶಾಸ್ತ್ರೀಯ ಸಂಗೀತ ತನ್ನ ಕಲೆಯ ಜೊತೆಗೆ ಸಂಸ್ಕೃತಿ ಮತ್ತು ಆದರ್ಶ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಲು ಪ್ರೇರಣಾದಾಯಿಯಾಗಿದೆ. ಜೀವನ ವ್ಯಕ್ತಿತ್ವ ಮತ್ತು ಸನ್ನಡತೆಯನ್ನು ರೂಪಿಸಿಕೊಳ್ಳಲು ಮತ್ತು ಮೈಗೂಡಿಸಿಕೊಳ್ಳಲು ಸುಸ್ವರ ಸಂಗೀತ ವಿದ್ಯಾಲಯ ಕಲಾ ಸೇವೆ ಶ್ಲಾಘನೀಯ ಎಂದರು.
    ಇ.ಎO.ಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಯಿನಿ ಸಕ್ಕುಬಾಯಿಯವರು ಸುಸ್ವರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಸಂಗೀತದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ ಮತ್ತು ಸಂಗೀತವನ್ನು ಮೈಗೂಡಿಸಿಕೊಂಡ ಬಗೆ ಅಭಿನಂದನೀಯ ಎಂದರು.
    ಹಳೆದಾOಡೇಲಿಯ ಕೆನರಾ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರಾದ ಗಿರಿಜಾ.ಡಿ.ನಾಯ್ಕ ಅವರು ಸುಸ್ವರ ಸಂಗೀತ ವಿದ್ಯಾಲಯದ ಕಲಾ ಸೇವೆ ಮತ್ತು ಸಾಧನೆಯನ್ನು ಕೊಂಡಾಡಿದರು. ಸಂಗೀತ ಶಿಕ್ಷಕಿ ಶಶಿಕಲಾ ಭಟ್ಟ ಗೋಪಿ ಅವರ ತಂದೆ ಗಣಪತಿ ಭಟ್ ಅವರು ಮಾತನಾಡಿ, ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಶಶಿಕಲಾ ಸಂಗೀತವನ್ನು ಕಲಿತಿದ್ದಾಳೆ. ಅಂದು ಸಂಕಷ್ಟದಲ್ಲಿ ಕಲಿತ ಪರಿಣಾಮದ ಫಲಶೃತಿ ಈಗ ನಿಮ್ಮೆಲ್ಲರ ಪ್ರೀತಿ ವಾತ್ಸಲ್ಯದಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾಳೆ. ಆಕೆ ನನ್ನ ಮಗಳು ಎಂದು ಹೆಮ್ಮೆಯಿಂದ ಹೇಳಲು ಸಂತೋಷ ಎನಿಸುತ್ತದೆ ಎಂದರು.
    ಈ ಸಂದರ್ಭದಲ್ಲಿ ಸುಸ್ವರ ಸಂಗೀತ ವಿದ್ಯಾಲಯ ಬೆಳೆದು ಬಂದ ಹಾದಿಯನ್ನು ಸಂಗೀತ ಶಿಕ್ಷಕಿ ಶಶಿಕಲಾ ಭಟ್ಟ ಗೋಪಿಯವರು ಪಾಸ್ತಾವಿಕ ಮಾತುಗಳಲ್ಲಿ ವಿವರಿಸಿ, ತಾನು ಹಾಗೂ ಈ ಸಂಗೀತ ಕೇಂದ್ರ ಈವರೇಗೆ ಬೆಳೆಯಲು ತಂದೆ, ತಾಯಿ, ಅತ್ತೆ, ಮಾವನವರ ಆಶೀರ್ವಾದ, ಕೈ ಹಿಡಿದ ಪತಿಯ ಪ್ರೋತ್ಸಾಹ, ಕೇಂದ್ರದ ವಿದ್ಯಾರ್ಥಿಗಳ ಪಾಲಕರ ಸಹೋದರತ್ವದ ಸಹಕಾರವೆ ಪ್ರಮುಖ ಕಾರಣ ಎಂದ ಅವರು ಬೆಳೆಸಿ, ಪ್ರೋತ್ಸಾಹಿಸಿದ ಸರ್ವರು ನಮ್ಮ ಸುಸ್ವರ ಸಂಗೀತ ವಿದ್ಯಾಲಯದ ಮಹೋನ್ನತ ಶಕ್ತಿ ಎಂದರು.
    ವೇದಿಕೆಯಲ್ಲಿ ಸಂಗೀತ ಶಿಕ್ಷಕಿ ಶಶಿಕಲಾ ಭಟ್ಟ ಗೋಪಿ ಅವರ ತಾಯಿ ಲಲಿತಾ ಭಟ್ ಉಪಸ್ಥೀತರಿದ್ದರು. ವಿಘ್ನೇಶ್ವರ ಗುಮ್ಮನಿಯವರು ಸ್ವಾಗತಿಸಿದ ಕಾರ‍್ಯಕ್ರಮಕ್ಕೆ ವಾಣಿಶ್ರೀ ಲಕ್ಷ್ಮಿಶ್ವರ ಅವರು ವಂದಿಸಿದರು. ಅಮೃತಾ ಉಪಾಧ್ಯಯ ಮತ್ತು ಕವಿತಾ ಕಾಮತ್ ಅವರು ಕಾರ‍್ಯಕ್ರಮ ನಿರೂಪಿಸಿದರು. ಚಂದ್ರಕಾOತ್ ಭಟ್ ಗೋಪಿ ಹಾಗೂ ಕೇಂದ್ರದ ವಿದ್ಯಾರ್ಥಿಗಳ ಪಾಲಕರು ಸಹಕರಿಸಿದರು.
    ಸಭಾ ಕರ‍್ಯಕ್ರಮದ ಬಳಿಕ ಕೇಂದ್ರದ ವಿದ್ಯಾರ್ಥಿಗಳಿಂದ ಮತ್ತು ಕೇಂದ್ರದ ಶಿಕ್ಷಕಿ ಶಶಿಕಲಾ ಭಟ್ಟ್ ಗೋಪಿಯವರಿಂದ ರಾಜೇಂದ್ರ ಭಾಗ್ವತ್ ಹೆಗ್ಗಾರ್ ಅವರ ತಬಲಾ, ಕನಕನಹಳ್ಳಿಯ ಶಿವರಾಮ ಭಾಗ್ವತ್ ಅವರ ಸಂವಾದಿನಿ ಹಾಗೂ ಅನ್ನಮ್ಮಾ ಸೌಂಡ್ಸ್ ಸಿಸ್ಟಂ ಅವರ ಧ್ವನಿ ಸಂಯೋಜನೆಯೊOದಿಗೆ ನಡೆದ ಸಂಗೀತ ಕಾರ‍್ಯಕ್ರಮ ನಡೆದು ಎಲ್ಲರ ಗಮನ ಸೆಳೆಯಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top