ಶ್ರೀನಗರ: ಶ್ರೀನಗರದ ಲಾಲ್ ಚೌಕ್ ಬಳಿಯ ಐಕಾನಿಕ್ ಕ್ಲಾಕ್ ಟವರ್‌ನಲ್ಲಿ ಭಾನುವಾರ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಧ್ವಜ ಸಂಹಿತೆ ಉಲ್ಲಂಘಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಆಡಳಿತಾರೂಢ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ನಾಯಕ ತ್ರಿವರ್ಣ ಧ್ವಜದ ಸಮೀಪ ತನ್ನ ದೊಡ್ಡ ಕಟೌಟ್ ಹಾಕುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
“ ರಾಷ್ಟ್ರಧ್ವಜವನ್ನು ಹಾರಿಸುವಾಗಲೂ ನೀವು ಆ ಧ್ವಜವನ್ನು ಅತಿಕ್ರಮಿಸಲು ಬಯಸುತ್ತೀರಿ ಮತ್ತು ಧ್ವಜದ ಹಿಂದೆ ನಿಮ್ಮದೇ ಕಟೌಟ್ ಹಾಕುವ ಮೂಲಕ ಧ್ವಜ ಸಂಹಿತೆಯನ್ನು ಉಲ್ಲಂಘಿಸುವುದು ಕುಟುಂಬ ರಾಜಕೀಯ ಪಕ್ಷದ ಡಿಎನ್‌ಎಯಲ್ಲಿದೆ ಎಂದು ನಾನು ಭಾವಿಸುತ್ತೇನೆ” ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
“ಒಂದು ರೀತಿಯಲ್ಲಿ, ಇದು ಕುಟುಂಬ ರಾಜಕರಣದ ಮನಸ್ಥಿತಿಯ ಪ್ರದರ್ಶನವಾಗಿದೆ, ಪ್ರತಿ ಯೋಜನೆಗಳಲ್ಲಿ ಅವರ ಹೆಸರು ಅಥವಾ ತಂದೆಯ ಹೆಸರು ಅಥವಾ ಅವನ ಅಜ್ಜಿಯ ಹೆಸರು ಇಡುವುದು ಕುಟುಂಬ ರಾಜಕೀಯದಲ್ಲಿ ಸಾಮಾನ್ಯ. ವ್ಯಕ್ತಿ ತ್ರಿವರ್ಣ ಧ್ವಜಕ್ಕಿಂತಲೂ ದೊಡ್ಡವ ಎಂದು ಅವರು ಭಾವಿಸುತ್ತಾರೆ” ಎಂದಿದ್ದಾರೆ.
ಕೃಪೆ:http://news13.in