• Slide
    Slide
    Slide
    previous arrow
    next arrow
  • ಗ್ರಾಮ‌ ಸಂಸ್ಕೃತಿ ಪುನರುತ್ಥಾನಕ್ಕೆ ದೇಶೀಯ ಕ್ರೀಡೆಗಳು ಅವಶ್ಯಕ: ಉಪೇಂದ್ರ ಪೈ

    300x250 AD

    ಸಿದ್ದಾಪುರ : ಗ್ರಾಮೀಣ ಕ್ರೀಡೆಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿವೆ. ಗ್ರಾಮ ಸಂಸ್ಕೃತಿ ಪುನರುತ್ಥಾನಕ್ಕೆ ಇಂಥ ಪರಂಪರಾಗತ ದೇಶಿಯ ಕ್ರೀಡೆಗಳು ಅವಶ್ಯಕವಾಗಿದ್ದು ಅವುಗಳನ್ನು ಯುವ ಜನತೆ ಅಳವಡಿಸಿಕೊಳ್ಳಬೇಕು ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.

    ಅವರು ಸಿದ್ದಾಪುರ ತಾಲ್ಲೂಕಿನ ದೊಡ್ಡಮನೆಯ ಹಸುವೆಗುಳಿ ಯುವಕರ ಸಂಘದ ವತಿಯಿಂದ ಆಯೋಜಿಸಲಾದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಚಾಲನೆ ನೀಡಿ ಮಾತನಾಡಿದರು. ಜನಸಾಮಾನ್ಯರಲ್ಲಿ ಉತ್ತಮ ಪ್ರೀತಿ, ವಿಶ್ವಾಸ, ಬಾಂಧವ್ಯ ಉಂಟಾಗಲು ಇಂತಹ ಕ್ರೀಡೆಗಳು ಗ್ರಾಮೀಣ ಭಾಗದಲ್ಲಿ ಆಗಾಗ ನಡೆಯಬೇಕು. ಹಳ್ಳಿ ಜನರಲ್ಲಿ ಸಹೋದರತ್ವ ವಾತಾವರಣ ನಿರ್ಮಿಸಲು ಇಂತಹ ಕ್ರಿಯಾತ್ಮಕ ಕ್ರೀಡೆಗಳು ಗ್ರಾಮೀಣ ಭಾಗದಲ್ಲಿ ಅಗತ್ಯವಾಗಿದೆ. ಹಸುವೆಗುಳಿಯಂತಹ ಪುಟ್ಟ ಗ್ರಾಮದಲ್ಲಿ ಕಬಡ್ಡಿ ಕ್ರೀಡೆಯನ್ನು ಸಂಘಟಿಸುತ್ತಿರುವುದಕ್ಕೆ ಶ್ಲಾಸಿದರು.
    ವಸಂತ ನಾಯ್ಕ ಮನ್ಮನೆ ಅವರು ಮಾತನಾಡಿ ‘ಸಂಸ್ಕೃತಿ, ಸಂಸ್ಕಾರ ಯುವಕರಿಂದಲೇ ಉಳಿದು ಬೆಳೆಯಲು ಸಾಧ್ಯ. ಕಬಡ್ಡಿ ಕ್ರೀಡೆ ಮಾನಸಿಕ, ದೈಹಿಕ, ಬೌದ್ದಿಕ ಬೆಳವಣಿಗೆಗೆ ಅತ್ಯಂತ ಸಹಕಾರಿ, ಯುವಕರು ಇಂತಹ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಕಲೆ ಉಳಿಸಲು ಮುಂದಾಗಬೇಕು. ಕ್ರೀಡೆಯನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಿ ಗೆದ್ದವರು ಇನ್ನು ಮೇಲ್ಮಟ್ಟಕ್ಕೆ ಹೋಗಿ ಸೋತವರು ಮುಂದೆ ಗೆಲ್ಲುವ ಪ್ರಯತ್ನ ಮಾಡಿ ಎಂದು ಕಬಡ್ಡಿ ಪಟುಗಳಿಗೆ ಕಿವಿಮಾತು ಹೇಳಿದರು.

    300x250 AD

    ಶಾಂತ ಕುಮಾರ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ವಿವೇಕ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿ.ಎನ್. ನಾಯ್ಕ ಬೇಡ್ಕಣಿ, ಸಿ.ಆರ್. ನಾಯ್ಕ ಲಂಬಾಪುರ, ಊರಿನ ಹಿರಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಕ್ರೀಡಾ ಅಭಿಮಾನಿಗಳು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top