Slide
Slide
Slide
previous arrow
next arrow

ಫೆ.5ಕ್ಕೆ ಸಹೇಲಿ ಟ್ರಸ್ಟಿನ ಜಾನಪದ ವೈಭವ

300x250 AD

ದಾಂಡೇಲಿ: ನಗರದ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಭಿನ್ನ ರೀತಿಯ ಕೊಡುಗೆಯನ್ನು ನೀಡುತ್ತಾ ಬಂದಿರುವ ಸಹೇಲಿ ಟ್ರಸ್ಟ್ ಆಶ್ರಯದಲ್ಲಿ ಫೆಬ್ರವರಿ ತಿಂಗಳಲ್ಲಿ ಆಯೋಜಿಸಲಾಗಿರುವ ‘ಜಾನಪದ ವೈಭವ’ ಸ್ಪರ್ಧಾ ಕಾರ್ಯಕ್ರಮಗಳ ಆಯ್ಕೆ ಪ್ರಕ್ರಿಯೆಗೆ ಫೆ.5ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎನ್.ರಸ್ತೆಯಲ್ಲಿರುವ ಯುನೈಟೆಡ್ ಬಿಲ್ಡಿಂಗ್‌ನಲ್ಲಿ ಚಾಲನೆ ನೀಡಲಾಗುವುದೆಂದು ಸಹೇಲಿ ಟ್ರಸ್ಟಿನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿಯವರು ಹೇಳಿದರು.
ಇಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ಜಾನಪದ ಕಲೆಯನ್ನು ಉಳಿಸಿ, ಬೆಳೆಸುವುದರ ಜೊತೆಗೆ ಸ್ಥಳೀಯ ಕಲಾಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಫೆಬ್ರುವರಿ ತಿಂಗಳಲ್ಲಿ ಜಾನಪದ ವೈಭವ ಕರ‍್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಈ ಕಾರ‍್ಯಕ್ರಮದಲ್ಲಿ ಹಾಡು, ನೃತ್ಯ, ಸಮೂಹ ನೃತ್ಯಗಳ ಸ್ಪರ್ಧಾ ಕಾರ್ಯಕ್ರಮ ಜರಗಲಿದೆ. 3ರಿಂದ 10 ವರ್ಷ ವಯಸ್ಸಿನವರಿಗೆ ಜಾನಪದ ಸೊಲೊ ಹಾಡು, 11ರಿಂದ 18 ವರ್ಷ ವಯಸ್ಸಿನವರಿಗೆ ಜಾನಪದ ಸೊಲೊ ನೃತ್ಯ ಮತ್ತು 18 ವರ್ಷ ಮೇಲ್ಟಟ್ಟವರಿಗೆ ಜಾನಪದ ಗುಂಪು ನೃತ್ಯ ಕರ‍್ಯಕ್ರಮವನ್ನು ಆಯೋಜಿಸಲಾಗಿದ್ದು, ಹಾಡು, ನೃತ್ಯಗಳು ಕನ್ನಡದಲ್ಲೆ ಇದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರಿಗೆ ಮತ್ತು ತಂಡಕ್ಕೆ ಫೆ:05 ರಂದು ಬೆಳಿಗ್ಗೆ 10 ಗಂಟೆಯಿಂದ ಯುನೈಟೆಡ್ ಬಿಲ್ಟಿಂಗ್‌ನಲ್ಲಿ ಅರ್ಹತಾ ಸುತ್ತು ನಡೆಯಲಿದೆ. ಈ ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದವರಿಗೆ ಮುಂದಿನ ಹಂತಕ್ಕೆ ಅವಕಾಶವನ್ನು ನೀಡಲಾಗುತ್ತದೆ ಎಂದರು.
ಮಹಿಳೆಯರೆ ಸೇರಿ ಮಹಿಳೆಯರಿಂದ ಆರಂಭಗೊಂಡು, ಮಹಿಳೆಯರಿಂದಲೆ ಮುನ್ನಡೆಯುತ್ತಿರುವ ಸಹೇಲಿ ಟ್ರಸ್ಟ್ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಕಾರ‍್ಯಚಟುವಟಿಕೆಗಳನ್ನು ಸರ್ವರ ಸಹಕಾರದಲ್ಲಿ ಹಮ್ಮಿಕೊಂಡು ಬರುತ್ತಿದ್ದು, ಮುಂದಿನ ದಿನದಿಗಳಲ್ಲಿಯೂ ಸರ್ವರ ಸಹಕಾರ ಇದೇ ರೀತಿಯಲ್ಲಿ ಇರಲೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಹೇಟಿ ಟ್ರಸ್ಟಿನ ಪದಾಧಿಕಾರಿಗಳಾದ ನೀಲಾಂಬಿಕಾ ಕಣಿವೆಹಳ್ಳಿ, ರಮ್ಯಾ ಪಾಟನಕರ, ಜ್ಯೋತಿ ಕಲ್ಲಣ್ಣವರ, ಶಾರದಾ ಗುಂಡುಪ್ಕರ್, ಜಯ ನಾಯ್ಕ, ಗಾಯತ್ರಿ ಬಾನವಳಿಕರ್, ಶಶಿಕಲಾ ನಾಯ್ಕ, ತ್ರಿವೇಣಿ ಸೋನಾರ್, ನೇಹ ನರೇಂದ್ರ ಚೌವ್ಹಾಣ್, ತೇಜಶ್ರೀ ದೊಡ್ಮಣಿ, ಲಕ್ಷ್ಮಿ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top