• Slide
    Slide
    Slide
    previous arrow
    next arrow
  • ಕಾರವಾರ ಬಿಜೆಪಿ ಯುವಮೋರ್ಚಾದಿಂದ ಸದಸ್ಯತ್ವ ಅಭಿಯಾನ

    300x250 AD

    ಕಾರವಾರ: ಬಿಜೆಪಿ ನಗರ ಯುವಮೋರ್ಚಾ ತಂಡದ ವತಿಯಿಂದ ವಿಜಯ ಸಂಕಲ್ಪ ಅಭಿಯಾನದ ಅಡಿಯಲ್ಲಿ ನಗರ ಪ್ರದೇಶದಲ್ಲಿ ಮಿಸ್ಡ್ ಕಾಲ್ ನೀಡಿ ಬಿಜೆಪಿ ಸದಸ್ಯತ್ವ ಪಡೆಯುವ ಅಭಿಯಾನ ನಡೆಯಿತು.
    ಯುವಮೋರ್ಚಾ ನಗರ ಅಧ್ಯಕ್ಷ ಶುಭಂ ಕಳಸ ನೇತೃತ್ವದಲ್ಲಿ ನಡೆದ ಅಭಿಯಾನಕ್ಕೆ ಯುವಕರು, ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸೇರಿದಂತೆ ಅನೇಕರು ಬಿಜೆಪಿಯ ವಿಶೇಷ ಟೋಲ್ ಫ್ರೀ ನಂಬರ್ 8000090009 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬಿಜೆಪಿ ಸದಸ್ಯತ್ವ ಪಡೆದುಕೊಂಡರು.
    ಅಭಿಯಾನದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ನಾಗೇಶ್ ಕುರುಡೇಕರ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಮಿತ್ ನಾಯ್ಕ್, ನಾಗರಾಜ್ ದುರ್ಗೇಕರ್, ಉಪಾಧ್ಯಕ್ಷ ಅವಿನಾಶ್ ಉಳ್ವೇಕರ್, ಕಾರ್ಯದರ್ಶಿ ಪ್ರಸಾದ್ ಪಡುವಳಕರ, ಸಂಕೇತ್ ನಾಯ್ಕ್, ಗುರುಪ್ರಸಾದ ನಾಯ್ಕ್, ಸಾಯಿನಾಥ್ ಬಾಡಕರ್, ಸದಸ್ಯರಾದ ಸಂದೇಶ ಬಾಡಕರ, ಅಜಯ್ ಜೋಶಿ, ಅನೀಶ್ ಉಳ್ವೇಕರ್, ಕಮಲೇಶ್ ಗೌಡ, ಮಹಾದೇವ ಉಳ್ವೇಕರ್, ಗೌರೀಶ್ ಕಲ್ಗುಟಕರ, ಸಂದೇಶ ಶೆಟ್ಟಿ, ಅಭಿಷೇಕ್ ಹಲಕರ ಸೇರಿದಂತೆ ಬಿಜೆಪಿ ಯುವಮೋರ್ಚಾ ತಂಡದ ಕಾರ್ಯಕರ್ತರು ಭಾಗಿಯಾಗಿದ್ದರು.


    ಸಂಘಟನೆಯಲ್ಲಿ ಶುಭಂ ಕಳಸ ಮುಂಚೂಣಿ…
    ಪಕ್ಷದ ಸಂಘಟನೆಗೆ ಈಗಾಗಲೇ ಯುವಮೋರ್ಚಾ ಅಧ್ಯಕ್ಷ ಶುಭಂ ಕಳಸ ಪಕ್ಷ ನೀಡಿದ ಅಭಿಯಾನಗಳ ಜೊತೆಗೆ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ 52 ಬೂತ್‌ನ ಯುವ ಕಾರ್ಯಕರ್ತರನ್ನು ಸಂಘಟಿಸಲು ತಮ್ಮದೇ ಶೈಲಿಯಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ತಮ್ಮ ತಂಡದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೂತ್ ಮಟ್ಟದಲ್ಲಿ ಒಂದು ಸುತ್ತಿನ ಕಾರ್ಯ ಮುಗಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂಡ ಶುಭಂ ಕಳಸ ಅವರು ಬಿಜೆಪಿ ಪರ ಯುವಕರನ್ನು ಸಂಘಟಿಸಲು, ಮುಂಚೂಣಿಯಲ್ಲಿದ್ದು ಪಕ್ಷದ ವಿವಿಧ ಸ್ತರದ ಪ್ರಚಾರ, ಬೈಕ್ ಜಾಥಾ, ಬೃಹತ್ ಪಾದಯಾತ್ರೆ ಕೈಗೊಳ್ಳುವುದರ ಮೂಲಕ ಪಕ್ಷದ ಗೆಲುವಿಗೆ ದುಡಿದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top