• Slide
    Slide
    Slide
    previous arrow
    next arrow
  • ಗಣರಾಜ್ಯೋತ್ಸವ ನಿಮಿತ್ತ ರಕ್ತದಾನ ಶಿಬಿರ ಯಶಸ್ವಿ

    300x250 AD

    ಶಿರಸಿ: ಗಣರಾಜ್ಯೋತ್ಸವದ ಪ್ರಯುಕ್ತ  ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.), ಇಕೋ ಕೇರ್ (ರಿ.), ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ (ರಿ.), ಗ್ರೀನ್ ಕೇರ್ (ರಿ.)  ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ.) ಶಿರಸಿ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

    ಕಾರ್ಯಕ್ರಮದ ಉದ್ಘಾಟನೆಯನ್ನು  ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಜಾನನ ಭಟ್ ದೀಪ ಬೆಳಗಿಸಿ ನೆರವೇರಿಸಿದರು. ನಂತರ ಅವರು ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿ, ಎಲ್ಲಾ ಸಂಘ-ಸಂಸ್ಥೆಯವರು ಹೆಚ್ಚು ಹೆಚ್ಚು ರಕ್ತದಾನ ಮಾಡಿಸುವಂತೆ ಯುವಕರನ್ನು  ಪ್ರೇರೇಪಿಸಬೇಕೆಂದು ತಿಳಿಸಿದರು.

    300x250 AD

    ಮುಖ್ಯ ಅತಿಥಿಗಳಾಗಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ರಕ್ತ‌ನಿಧಿ ಕೇಂದ್ರದ ಪೆಥೋಲಜಿಸ್ಟ್ ಡಾ.ಮಮತಾ ಹೆಗಡೆ ಇವರು ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.) ಜಿಲ್ಲಾ ಶಾಖೆಯ ಅಧ್ಯಕ್ಷ ಮಹೇಶ್ ಡಿ. ನಾಯ್ಕ್ ವಹಿಸಿದ್ದರು. ಕಾರ್ಯಕ್ರಮದ ಅತಿಥಿಗಳಾಗಿ  ಅಮಿತ್ ಅಮಠೆ,  ಪ್ರವೀಣ್ ಫುಳ್ಕರ್, ಜಿತೇಂದ್ರ ಕುಮಾರ್ ತೋನ್ಸೆ, ಗಣೇಶ್ ಹೆಗಡೆ, ಮತ್ತು  ರವಿ ಪೂಜಾರಿ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top