• Slide
    Slide
    Slide
    previous arrow
    next arrow
  • ಗಣರಾಜ್ಯೋತ್ಸವ ಸ್ತಬ್ಧಚಿತ್ರ ಪ್ರದರ್ಶನ: ಸತತ 14ವರ್ಷ ಭಾಗವಹಿಸಿ ದಾಖಲೆ ಬರೆದ ಕರ್ನಾಟಕ

    300x250 AD

    ನವದೆಹಲಿ: ಗಣರಾಜ್ಯೋತ್ಸವದ ವೇಳೆ ನಡೆಯುವ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಸತತ 14 ವರ್ಷ ಪಾಲ್ಗೊಳ್ಳುವ ಮೂಲಕ ಕರ್ನಾಟಕ ಹೊಸ ದಾಖಲೆಯನ್ನು ಬರೆದಿದೆ.

    2009ರಿಂದ 2023ರವರೆಗೂ ನಿರಂತರವಾಗಿ ಸ್ತಬ್ಧ ಚಿತ್ರದಲ್ಲಿ ಭಾಗಿಯಾಗುವ ಅವಕಾಶವನ್ನು ಉಳಿಸಿಕೊಂಡಿರುವ ಏಕೈಕ ರಾಜ್ಯ ಕರ್ನಾಟಕವಾಗಿದ್ದು, ಉಳಿದ ಇನ್ಯಾವುದೇ ರಾಜ್ಯ ಇಷ್ಟು ವರ್ಷಗಳ ಕಾಲ ಸತತವಾಗಿ 14 ವರ್ಷ ಭಾಗಿಯಾಗಿರುವ ನಿದರ್ಶನಗಳು ಇಲ್ಲ.

    ಅತ್ಯುತ್ತಮ ಸ್ತಬ್ಧ ಚಿತ್ರ ಪ್ರದರ್ಶನಕ್ಕಾಗಿ ಕೆಲವು ಬಾರಿ ರಾಜ್ಯಕ್ಕೆ ಪ್ರಥಮ ಪ್ರಶಸ್ತಿ ಬಂದಿದ್ದರೆ, ಉಳಿದ ಸಂದರ್ಭದಲ್ಲಿ ದ್ವಿತೀಯ ಪ್ರಶಸ್ತಿಯೂ ದಕ್ಕಿದೆ.

    300x250 AD

    ಈ ವರ್ಷ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಪಾಲ್ಗೊಳ್ಳುವ ಅಕವಾಶ ಕೈ ತಪ್ಪಿತ್ತು. ಬೇರೆ ರಾಜ್ಯಗಳಿಗೆ ಅವಕಾಶ ನೀಡುವ ಕಾರಣಕ್ಕಾಗಿ ಮೊದಲು ನಿರಾಕರಿಸಲಾಗಿತ್ತು. ನಂತರ ತೀವ್ರ ವಿವಾದ ಸೃಷ್ಟಿಯಾಗಿ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೊನೆ ಕ್ಷಣದಲ್ಲಿ ಅವಕಾಶ ನೀಡಿತ್ತು.

    ಪ್ರಸಕ್ತ ವರ್ಷ ಕರ್ನಾಟಕ ನಾರಿಶಕ್ತಿ ಸ್ತಬ್ಧ ಚಿತ್ರ ಪ್ರದರ್ಶಿಸಿದ್ದು, ಮಾದರಿ ಮಹಿಳೆಯರಾದ ಸೂಲಗಿತ್ತಿ ನರಸಮ್ಮ, ತುಳಸಿಗೌಡ, ಸಾಲುಮರದ ತಿಮ್ಮಕ್ಕ ಅವರ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top