Slide
Slide
Slide
previous arrow
next arrow

ದೂರದೃಷ್ಟಿ ನಾಯಕರಿಂದಾಗಿ ಉತ್ಕೃಷ್ಟ ಸಂವಿಧಾನ ನಮ್ಮದಾಗಿದೆ: ಎಸಿ ಆರ್.ದೇವರಾಜ್

300x250 AD

ಶಿರಸಿ: ರಾಜಕೀಯ, ಆರ್ಥಿಕ ಹಾಗೂ ಸಮಾನತೆಯ ಚಿಂತನೆ, ಸಾಮಾಜಿಕ ನ್ಯಾಯ ನೀಡಿದಂಥ ಸಂವಿಧಾನವನ್ನು ಗೌರವಿಸುವ ಕೆಲಸ ಪ್ರತಿಯೊಬ್ಬ ಪ್ರಜೆಯಿಂದಲೂ ಆಗಬೇಕು ಎಂದು ಉಪ ವಿಭಾಗಾಧಿಕಾರಿ ದೇವರಾಜ ಹೇಳಿದರು.

ನಗರದ ಶ್ರೀ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು, ಜನರಿಂದ ಜನರಿಗಾಗಿಯೇ ನಿರ್ಮಾಣಗೊಂಡ ವಿಶ್ವದ ಅತ್ಯುತ್ತಮ ಪುಸ್ತಕವೆಂದರೆ ಅದು ಸಂವಿಧಾನದ ಪುಸ್ತಕವಾಗಿದೆ. ಜ. 26ರಂದು ನಮ್ಮ ಸಂವಿಧಾನ ದಿನವನ್ನು ಆಚರಣೆ ಮಾಡಿಕೊಳ್ಳುತ್ತಿದ್ದೇವೆ. ರಾಜಕೀಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನ್ಯಾಯದ ಮೂಲಕ ಸಮಾನತೆ ನಮಗೆ ಸಿಕ್ಕಿದೆ. ದೂರದೃಷ್ಟಿ ನಾಯಕರಿಂದಾಗಿ ಉತ್ಕೃಷ್ಟ ಸಂವಿಧಾನ ನಮ್ಮದಾಗಿದೆ ಎಂದರು.

12ನೇ ಶತಮಾನದಲ್ಲಿ ವಿಶ್ವವೇ ಅಚ್ಚರಿ ಪಡುವ ಅನುಭವ ಮಂಟಪ ನಾವು ಹೊಂದಿದವರು. ವಸುದೈವ ಕುಟುಂಬಕಂ ಅಳವಡಿಸಿಕೊಂಡ ನಾವು ಈಗ ಜಗತ್ತಿನ ನಾಯಕತ್ವ ಹಿಡಿಯುವ ಮುಂಚೂಣಿಯಲ್ಲಿದ್ದೇವೆ. ಭಾರತವು ಅಭಿವೃದ್ಧಿ ಕಡೆ ವೇಗದ ಪಥ ಸಂಚಲನ ಮಾಡುತ್ತಿದೆ. ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ದೇಶಕ್ಕೆ ಕೊಡುಗೆ ನೀಡಬೇಕು ಎಂದರು.

300x250 AD

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರೋತ್ಥಾನ ಮಂಡಳಿ ಅಧ್ಯಕ್ಷ ನಂದನ ಸಾಗರ, ಪ್ರಮುಖರಾದ ಪಿ. ಬಸವರಾಜ, ಉಷಾ ಹೆಗಡೆ, ತಹಸೀಲ್ದಾರ್ ಶ್ರೀಧರ ಮಂದಲಮನಿ ಇದ್ದರು.

Share This
300x250 AD
300x250 AD
300x250 AD
Back to top