• Slide
  Slide
  Slide
  previous arrow
  next arrow
 • ಇಂದೂರ ಸಹಕಾರಿ ಅಧ್ಯಕ್ಷರಾಗಿ ಶಿವಾಜಿ, ಉಪಾಧ್ಯಕ್ಷರಾಗಿ ಯಲ್ಲಪ್ಪ ಆಯ್ಕೆ

  300x250 AD

  ಮುಂಡಗೋಡ: ತಾಲೂಕಿನ ಇಂದೂರ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನಅಧ್ಯಕ್ಷರಾಗಿ ಶಿವಾಜಿ ದೇವಿಕೋಪ್ಪ, ಉಪಾಧ್ಯಕ್ಷರಾಗಿ ಯಲ್ಲಪ್ಪ ಕದಂ ಆಯ್ಕೆಯಾಗಿದ್ದಾರೆ.

  ಸೊಸೈಟಿಯು ಒಟ್ಟು 13 ಸದಸ್ಯರನ್ನು ಹೊಂದಿದ್ದುಅದರಲ್ಲಿಓರ್ವ ಸದಸ್ಯ ಮೃತಪಟ್ಟಿದ್ದಾನೆ. ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಿತು. ಹಳೆ ಬಿಜೆಪಿ ಹಾಗೂ ಹೊಸ ಬಿಜೆಪಿಯರು ಎಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಹಳೆ ಬಿಜೆಪಿ ಗೆ ತಲಾ 3 ಮತ ಬಿದ್ದು ಸೋತಿದ್ದು ಹೊಸ ಬಿಜೆಪಿ ಗೆ ತಲಾ 9 ಮತಗಳು ಬಿದ್ದುಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ರವಿ ಗೌಡ ಪಾಟೀಲ್‌ ಮಾತನಾಡಿ ಈ ಸೊಸೈಟಿಯ ಅಧ್ಯಕ್ಷ-ಉಪಾಧ್ಯಕ್ಷರ ಎರಡನೆ ಚುನಾವಣೆ ನಡೆಸಲಾಯಿತು. ಹಿಂದಿನ ಅಧ್ಯಕ್ಷರಾದ ರವಿ ದುಗ್ಗಳಿ ಅವರು 12 ಜನ ಸದಸ್ಯರ ಮಾತಿನಂತೆ ನಡೆದುಕೊಳ್ಳದೆ ಇದ್ದರಿಂದ ಮರುಚುನಾವಣೆ ಮಾಡಿ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

  300x250 AD

  ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸಚಿವರಾದ ಶಿವರಾಮ ಹೆಬ್ಬಾರ್‌ ಸನ್ಮಾನಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ನಾಗಭೂಷಣ ಹಾವಣಗಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರವಿ ಗೌಡ ಪಾಟೀಲ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕೆಸಿ ಗಲಭಿ, ಪರಶುರಾಮ ತಹಶಿಲ್ದಾರ, ಸಂತೋಷ ಸಣ್ಣಮನಿ, ಪ್ರಮುಖರಾದ ಗುಡ್ಡಪ್ಪ ಕಾತೂರ, ಉಮೇಶ್ ಬಿಜಾಪುರ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top