Slide
Slide
Slide
previous arrow
next arrow

ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‌ಗೆ ವಿರೋಧ

300x250 AD

ಹೊನ್ನಾವರ: ಶಾಲೆಯ ಹೆಚ್ಚುವರಿ ಶಿಕ್ಷಕರಿಗೆ ವರ್ಗಾವಣೆ ನಡೆಸಲು ಕೌನ್ಸಿಲಿಂಗ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಖರ್ವಾ ಗ್ರಾಮದ ಯಲಗುಪ್ಪಾದಲ್ಲಿ ಮಂಗಳವಾರ ವಿರೋಧ ವ್ಯಕ್ತವಾಗಿದೆ.

ಯಲಗುಪ್ಪಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 72 ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯಾಗಿದ್ದು ಐದು ಶಿಕ್ಷಕರಿದ್ದು ಹೆಚ್ಚುವರಿ ಕೌನ್ಸಲಿಂಗ್ ಪ್ರಕ್ರಿಯೆ  ಹಿನ್ನಲೆ ಒರ್ವ ಶಿಕ್ಷಕಿಯನ್ನು ಹೆಚ್ಚುವರಿಯಾಗಿ ವರ್ಗಾವಣೆ ಮಾಡಲಾಗುತ್ತಿತ್ತು .ಈ ಹಿನ್ನಲೆಯಲ್ಲಿ ಬೆಳಿಗ್ಗೆ ಶಾಲೆಗೆ ಆಗಮಿಸಿದ ಮಕ್ಕಳನ್ನು 11 ಗಂಟೆಯ ಸುಮಾರಿಗೆ ಪಾಲಕರು ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳನ್ನು ವಾಪಸ್ಸು ಕರೆದೊಯ್ಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸರಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಬೇಕೆಂದು ಸರಕಾರವೇ ಹೇಳುತ್ತಿದೆ. ಆದರೆ, ಉತ್ತಮ ಶಿಕ್ಷಕರನ್ನು ಹೆಚ್ಚುವರಿ ನೆಪದಲ್ಲಿ ಬೇರೆಡೆ ವರ್ಗಾವಣೆ ಮಾಡಲಾಗುತ್ತಿದೆ. ಖಾಸಗಿ ಶಾಲೆಗಳ ಮುಂದೆ ಬಡವರ ಮಕ್ಕಳು ಬೆಳೆಯುವುದಾದರೂ ಹೇಗೆ? ಎಂಬ ಅಭಿಪ್ರಾಯ ಪಾಲಕ ವರ್ಗದಿಂದ ವ್ಯಕ್ತವಾಯಿತು.ಈಗಾಗಲೇ ಜನಪ್ರತಿನಿಧಿಗಳು, ಜಿಲ್ಲಾಡಳಿತಕ್ಕೆ ಮನವಿ ಕೂಡಾ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಈ ಶಾಲೆಯ ಶಿಕ್ಷಕರ ವರ್ಗಾವಣೆ ನಿಲ್ಲಿಸದಿದ್ರೆ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ.ಬೇಡಿಕೆ ಈಡೇರದಿದ್ದಲ್ಲಿ ಭಾರೀ ಪ್ರತಿಭಟನೆ ನಡೆಸುವುದಾಗಿ ಪೋಷಕರು ಎಚ್ಚರಿಕೆ ನೀಡದ್ದಾರೆ. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕಿ ವರ್ಗಾವಣೆಯಾಗುತ್ತಿರುವ ವಿಷಯ ತಿಳಿದು ವರ್ಗಾಯಿಸಬೇಡಿ ಎಂದು ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.

ಈ ವೇಳೆ ಮಾಧ್ಯಮದವರ ಎದುರು ಶಿಕ್ಷಕರ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿ ಅನಿಸಿಕೆ ವ್ಯಕ್ತಪಡಿಸಿದ ಪಾಲಕರಾದ ಸಂತೋಷ್ ನಾಯ್ಕ, ಇಲ್ಲಿ ಶಿಕ್ಷಕರ ಹೆಚ್ಚುವರಿ ಮೂಲಕ ಬೇರೆ ಕಡೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡಿತಾ ಇದೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ತುಂಬಾನೇ ತೊಂದರೆ ಆಗುತ್ತದೆ. ಪರೀಕ್ಷೆ ಸಮಯ ಸಮೀಪಿಸುತ್ತಿದೆ.ಈ ಸಂದರ್ಭದಲ್ಲಿ ಇಲ್ಲಿನ ಶಿಕ್ಷಕರನ್ನು ಬೇರೆ ಕಡೆ ವರ್ಗಾವಣೆ ಮಾಡುವುದರಿಂದ ನಮ್ಮ ಮಕ್ಕಳಿಗೂ ಶಿಕ್ಷಣಕ್ಕೆ ಬಾರಿ ತೊಂದರೆ ಆಗುತ್ತದೆ. ಇದನ್ನ ಸರ್ಕಾರ ಪೂರ್ಣವಾಗಿ ಮನಗೊಂಡು ವರ್ಗಾವಣೆ ಪ್ರಕ್ರಿಯೆ ನಿಲ್ಲಿಸಬೇಕು. ಈ ಬಗ್ಗೆ ಬಿಇಒ,ಡಿಸಿಯವರಿಗೆ ಈ ಹಿಂದೆಯೇ ಲಿಖಿತ ಮನವಿ ಸಲ್ಲಿಸಲಾಗಿತ್ತು.ಇದುವರೆಗು ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ.ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದರು.

300x250 AD

ಪಾಲಕರಾದ ಮಂಜುನಾಥ ಹೆಗಡೆ,ನಾರಾಯಣ ಗೌಡ,ಸವಿತಾ ಮೇಸ್ತ ಮಾತನಾಡಿ,ಜೂನ್ ನಲ್ಲಿ ಈ ಶಾಲೆಯ ಒರ್ವ ಶಿಕ್ಷಕರು ನಿವೃತ್ತಿಯಾಗುತ್ತಾರೆ.ಈಗ ವರ್ಗಾವಣೆಗೊಂಡರೆ ಮೂವರು ಶಿಕ್ಷಕರಾಗುತ್ತಾರೆ. ಆಗ ಮತ್ತೆ ಶಿಕ್ಷಕರ ಕೊರತೆಯಾಗುತ್ತದೆ.ಇಂತಹ ಸಂದರ್ಭದಲ್ಲಿ ವರ್ಗಾವಣೆಗೆ ನಮ್ಮ ವಿರೋಧವಿದೆ.ಸರ್ಕಾರಿ ಶಾಲೆ ಆದರು ಖಾಸಗಿ ಶಾಲೆಗಿಂತ ಉತ್ತಮ ಶಿಕ್ಷಣ ನೀಡುತ್ತಿದ್ದರು.ಏಕಾಎಕಿ ಹೆಚ್ಚುವರಿಯಾಗಿ ವರ್ಗಾವಣೆ ಕ್ರಮ ಸರಿಯಲ್ಲ.ಇದಕ್ಕೆ ವಿರೋಧಿಸಿ ಸರ್ಕಾರದ ಗಮನಕ್ಕೆ ಬರಲಿಬೆಂದು ನಾವು ಇಂದು ಶಾಲಾ ಮುಖ್ಯಾದ್ಯಾಪಕರ ಅನುಮತಿ ಪಡೆದು ನಮ್ಮ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪಾಲಕರಾದ ಎಮ್ ಆರ್ ಹೆಗಡೆ,ಅಶೋಕ ನಾಯ್ಕ,ಮಂಜುನಾಥ ನಾಯ್ಕ,ಪ್ರಕಾಶ ಡಯಾಸ್, ವೆಂಕಟೇಶ ಗೌಡ, ವಿಷ್ಣು ಗೌಡ, ಈರಾ ಗೌಡ, ಗಜಾನನ ನಾಯ್ಕ, ಸುಬ್ರಹ್ಮಣ್ಯ ಗೌಡ ಮತ್ತಿತರಿದ್ದರು.

Share This
300x250 AD
300x250 AD
300x250 AD
Back to top