ಹೊನ್ನಾವರ: ಕಾರ್ಮಿಕರಿಗೆ ಸರ್ಕಾರ ಹಲವು ಸೌಲಭ್ಯ ನೀಡುತ್ತಿದ್ದು, ಅದನ್ನು ಗ್ಯಾರೇಜ್ ವೃತ್ತಿಯಲ್ಲಿ ತೊಡಗಿರವರಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಪಟ್ಟಣದ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಆಯೋಜಿಸಿದ ಹೊನ್ನಾವರ ತಾಲೂಕು ಆಟೋಮೊಬೈಲ್ ಮತ್ತು ಗ್ಯಾರೇಜ್ ಮಾಲೀಕರ ಮತ್ತು ಕಾರ್ಮಿಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಮಿಕರಿದ್ದರೆ ನಾವು. ಕಾರ್ಮಿಕರು ನಮ್ಮ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಶ್ರಮಿಜೀವಿಗಳಾದ ಕಾರ್ಮಿಕರಿಗೆ ಸರ್ಕಾರದಿಂದ ಸೂಕ್ತ ನೆರವು ನೀಡಲು ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆ. ಸರ್ಕಾರದ ಮಟ್ಟದಲ್ಲಿ ನಿಮ್ಮ ಕುಂದುಕೊರತೆ ಬಗೆಹರಿಸುವತ್ತ ಪ್ರಾಮಾಣಿಕವಾಗಿ ಪ್ರಯತ್ನ ನಡೆಸುದಾಗಿ ಭರವಸೆ ನೀಡಿದರು.
ಪಟ್ಟಣ ಪಂಚಾಯತಿ ಸದಸ್ಯ ಶಿವರಾಜ ಮೇಸ್ತ ಮಾತನಾಡಿ ನಮ್ಮ ವಾಹನ ದುರಸ್ತಿಗೆ ಬಂದಾಗ ನೆನಪಾಗುವ ಕಾರ್ಮಿಕರ ಸನಸ್ಯೆಯನ್ನು ನಾವೆಲ್ಲರು ಆಲಿಸಬೇಕಿದೆ. ಸಂಘಟನಾತ್ಮಕ ಬಲಗೊಂಡಾಗ ಸಮಸ್ಯೆ ಬಗೆಹರಿಸಲು ಸಾಧ್ಯವಿದ್ದು, ಆ ನಿಟ್ಟಿನಲ್ಲಿ ಹೊನ್ನಾವರ ಸಂಘಟನೆ ಮುಂದಾಗಿದೆ ಎಂದರು. ತಾಲೂಕಿನಲ್ಲಿ ಗ್ಯಾರೇಜ್ ವೃತ್ತಿ ನಡೆಸುತ್ತಿರುವವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸೆಂಥ್ ಇಗ್ನೇಷಿಯಸ್ ಆಸ್ಪತ್ರೆಯ ಮಾನವ ಸಂಪನ್ಮೂಲ ಅಧಿಕಾರಿ ಹೆರಿಕ್ ಫರ್ನಾಂಡೀಸ್, ಹಳದೀಪುರ ಗ್ರಾ.ಪಂ. ಅಧ್ಯಕ್ಷ ಅಜಿತ್ ನಾಯ್ಕ, ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ಬರ್ ಹಬಿಬ್ ಸಾಬ್ ಮುಲ್ಲಾ, ದಕ್ಷಿಣ ಕನ್ನಡ ಆಟೊಮೊಬೈಲ್ ಸಂಘದ ಅಧ್ಯಕ್ಷ ದಿನೇಶ ಕುಮಾರ, ಬೋಟ್ ಯುನಿಯನ್ ಅಧ್ಯಕ್ಷ ಹಮ್ಜಾ ಪಾಟೀಲ್,ಗುರುರಾಜ ನಾಯಕ, ಸದಾಶಿವ ಜಿ.ಕಾರಡಗಿ, ಕಾನೂನು ಸಲಹೆಗಾರರಾದ ವಿಕ್ರಂ ನಾಯ್ಕ, ಸಂಘಟನೆಯ ಅಧ್ಯಕ್ಷ ಅಶೋಕ ಶಾಸ್ತ್ರಿ, ಉಪಾಧ್ಯಕ್ಷ ಎಂ.ಆರ್.ಹೆಗಡೆ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಸುರೇಶ ನಾಯ್ಕ ಸ್ವಾಗತಿಸಿ, ಗಣಪತಿ ಹೊನ್ನಾವರ ವಂದಿಸಿದರು.