ಕಾರವಾರ: ಗಣರಾಜ್ಯೋತ್ಸವ ಅಂಗವಾಗಿ ತಾಲ್ಲೂಕಿನ ಚೆಂಡಿಯಾದಲ್ಲಿ ಶ್ರೀ ನವಚಂಡಿಕಾ ಕ್ರೀಡಾ, ಸಾಂಸ್ಕೃತಿಕ ಹಾಗೂ ಕಲಾ ಸಂಘ ಚೆಂಡಿಯಾದ ವತಿಯಿಂದ ಜನವರಿ 26 ರಂದು ಒಂದು ದಿನದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ.
ಚೆಂಡಿಯಾದ ನಿರಾಕಾರವಾಡದಲ್ಲಿ ನಡೆಯಲಿರುವ ಈ ಪಂದ್ಯಾವಳಿಯು ಬೃಹತ್ ಟ್ರೋಪಿಯೊಂದಿಗೆ ಪ್ರಥಮ ಬಹುಮಾನ ರೂ. 51,000, ದ್ವಿತೀಯ ಬಹುಮಾನ ಟ್ರೋಫಿಯೊಂದಿಗೆ 25,000 ಹಾಗೂ ಇತರೇ ವೈಯಕ್ತಿಕ ಬಹುಮಾನಗಳನ್ನು ಹೊಂದಿರಲಿದೆ. ಪಂದ್ಯಾವಳಿಗೆ ಪ್ರವೇಶ ಬಯಸುವ ತಂಡಗಳು 1000 ರೂ.ಶುಲ್ಕ ನೀಡಬೇಕಾಗಲಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲ ಆಟಗಾರರಿಗೆ ಊಟ-ತಿಂಡಿಯ ವ್ಯವಸ್ಥೆ ಮಾಡಲಾಗುವುದು. ಹೆಸರು ನೋಂದಾಯಿಸಿಕೊಂಡ ತಂಡದ ಎಲ್ಲಾ ಆಟಗಾರರು ಆಟ ನಡೆಯುವ ದಿನ ಬೆಳಿಗ್ಗೆ 9 ಗಂಟೆಗೆ ಕಡ್ಡಾಯವಾಗಿ ಮೈದಾನದಲ್ಲಿ ಹಾಜರಿರತಕ್ಕದ್ದು.
ಈ ಪಂದ್ಯಾವಳಿಯ ಜೊತೆಗೆ ಚೆಂಡಿಯಾ ಗ್ರಾಮ ಪಂಚಾಯತ್ ಮಟ್ಟದ ಮಕ್ಕಳು ಹಾಗೂ ಮಹಿಳೆಯರಿಗಾಗಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.
ವಾಲಿಬಾಲ್ ಪಂದ್ಯಾಟಕ್ಕೆ ಹೆಸರು ನೊಂದಾಯಿಸಿಕೊಳ್ಳವವರು ಈ ಕೆಳಗಿನ ನಂಬರುಗಳಿಗೆ ದಿನಾಂಕ 25 ಜನವರಿ ರಾತ್ರಿ 8 ಗಂಟೆಯ ಒಳಗೆ ಸಂಪರ್ಕಿಬೇಕಾಗಿ ವಿನಂತಿ.
ಪ್ರಸಾದ ವಿ ನಾಯ್ಕ- 9591516394, ಸನ್ನಿ ನಾಯ್ಕ- 9740973296, ನಾಗೇಂದ್ರ ಬಾಂದೇಕರ-9740650822, ವಿಶಾಲ ವಿ. ಗುನಗಿ- 9632982410 ಮೋಹನ ಗೌಡ- 9845105178, ಈ ದೂರವಾಣಿ ಸಂಖ್ಯೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.
ಈ ಪಂದ್ಯಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸಿ ಪ್ರೋತ್ಸಾಹಿಸಬೇಕೆಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಾಲಿಬಾಲ್ ಕ್ರೀಡೆ, ಕ್ರೀಡಾಪಟುಗಳು ಹಾಗೂ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಗ್ರಾಮೀಣ ಪ್ರದೇಶವಾದ ಚೆಂಡಿಯಾದಲ್ಲಿ ಈ ಪಂದ್ಯಾವಳಿ ಆಯೋಜಿಸಲಾಗಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಪಂದ್ಯಾವಳಿ ಸಂಘಟಿಸಿರುವುದು ವಿಶೇಷವಾಗಿದೆ.