ಕುಮಟಾ: ತಾಲೂಕಿನ ದೇವಗಿರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದಿನಕರ ಶೆಟ್ಟಿ ಭೂಮಿಪೂಜೆ ನೆರವೇರಿಸಿದರು.
ಮೊದಲು ಧಾರೇಶ್ವರದ ಧಾರನಾಥ ದೇವಸ್ಥಾನಕ್ಕೆ ತೆರಳಿದ ಶಾಸಕರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಗೋರೆಯ ಗೋಪಾಲಕೃಷ್ಣ ರಸ್ತೆ, 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಗೋರೆ ಮುಖ್ಯ ರಸ್ತೆ ಉದ್ಘಾಟನೆ, ಮಠ ಗ್ರಾಮದ ಸ್ಮಶಾನ ರಸ್ತೆಗೆ 7 ಲಕ್ಷ ರೂ., ಮಠ ಗ್ರಾಮದ ಕೃಷ್ಣ ಶೆಟ್ಟಿ ಮನೆಯಿಂದ ರಾಮಚಂದ್ರ ಶೆಟ್ಟಿ ಮನೆವರೆ ರಸ್ತೆ ನಿಮಾಣಕ್ಕೆ ಮಂಜೂರಾದ 7 ಲಕ್ಷ, ಆಚಾರಿಕೇರಿ ಮನೆಯಿಂದ ಮಾಸ್ತಿಮನೆ ಹೋಗುವ ರಸ್ತೆಗೆ 22.23 ಲಕ್ಷ, ಗಾಣಿಗರಕೇರಿ ರಸ್ತೆ ಕಾಮಗಾರಿಗೆ 7 ಲಕ್ಷ ರೂ, ಮಠ ಗ್ರಾಮದ ಅಂಬಿಗರ ಸಭಾಭವನದ ಹತ್ತಿರ ರಸ್ತೆ ಸುಧಾರಣೆಗೆ 22.23, 20 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬೆತ್ತಗೇರಿ ರಸ್ತೆ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ಕ್ಷೇತ್ರದಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೂ ಕೋಟ್ಯಾಂತರ ರೂ. ಅನುದಾನ ನೀಡಿ, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕ್ಷೀಪ್ರಗತಿಯಲ್ಲಿ ಸಾಗುತ್ತಿದ್ದು, ಪ್ರತಿ ಗ್ರಾಮದಲ್ಲಿಯೂ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಪ್ರತಿ ಮನೆಯಲ್ಲಿಯೂ ನಮ್ಮ ಸರ್ಕಾರದ ಯೋಜನೆ ಫಲಾನುಭವಿಗಳು ಸಿಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಮ್ಮ ದೇಶದಲ್ಲಿ ಕೊರೊನಾ ರೋಗವನ್ನು ಸಮರ್ಥವಾಗಿ ಎದುರಿಸಿ, ಪ್ರತಿಯೊಬ್ಬರಿಗೂ 2 ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ. ನಮ್ಮ ಸರ್ಕಾರದ ಸಾಧನೆಗಳನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಗಿರಿ ಗ್ರಾ.ಪಂ ಅಧ್ಯಕ್ಷೆ ರತ್ನಾ ಹರಿಕಂತ್ರ ಮಾತನಾಡಿ, ದಿನಕರ ಶೆಟ್ಟಿ ಶಾಸಕರಾಗಿ ಆಯ್ಕೆಯಾದ ನಂತರ ಕ್ಷೇತ್ರವು ಸಾಕಷ್ಟು ಅಭಿವೃದ್ಧಿ ಕಂಡಿದೆ. ಪ್ರತಿ ಗ್ರಾ.ಪಂಗೂ ಕೋಟಿ ಕೋಟಿ ಅನುದಾನ ನೀಡಿ, ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿದ್ದಾರೆ. ನೆರೆಹಾವಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ ಸಂದರ್ಭದಲ್ಲಿ ಅವರ ಖಾತೆಗೆ ಇತಿಹಾಸಲ್ಲಿಯೇ ಮೊದಲ ಬಾರಿಗೆ 10 ಸಾವಿರ ಜಮಾ ಮಾಡಿರುವುದು ಇತರರಿಗೆ ಮಾದರಿ ಎಂದರು.
ಈ ಸಂದರ್ಭದಲ್ಲಿ ದೇವಗಿರಿ ಗ್ರಾ.ಪಂ ಉಪಾಧ್ಯಕ್ಷ ಎಸ್.ಟಿ.ನಾಯ್ಕ, ಸದಸ್ಯರಾದ ನಾಗೇಶ ನಾಯ್ಕ, ಪಾಂಡು ಪಟಗಾರ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿನಯಕುಮಾರ, ಪಕ್ಷದ ಹಿರಿಯ ಮುಖಂಡ ವಿನೋದ ಪ್ರಭು, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಮಾರ ಭಟ್ಟ, ಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣ ನಾಯ್ಕ, ಧಾರನಾಥ ದೇವಲಯದ ಮೊಕ್ತೇಸರ ಲಕ್ಷö್ಮಣ ಪ್ರಭು, ಬೂತ್ ಅಧ್ಯಕ್ಷ ರಾಮು ಅಡಿ, ಪ್ರಮುಖರಾದ ಡಾ.ಜಿ.ಜಿ.ಹೆಗಡೆ, ಕೇಶವ ಮಡಿವಾಳ, ಕೇಶವ ಅಂಬಿಗ, ಅನಿಲ ರೇವಣಕರ ಸೇರಿದಂತೆ ಮತ್ತಿತರರು ಇದ್ದರು.