ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ಹಾಗೂ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ, ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ 3 ತಿಂಗಳ ಉಚಿತ ಕಂಪ್ಯೂಟರ್ ಹಾಗೂ ಟೈಪ್‌ರೈಟಿಂಗ್ ತರಬೇತಿಗೆ ಚಾಲನೆಯನ್ನು ನೀಡಲಾಯಿತು. ಕುಮಾರಿ ಗಾಯತ್ರಿ ಶೆಟ್ಟಿ ಹಾಗೂ ಸಾವಿತ್ರಿ ಶೆಟ್ಟಿ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ನಿವೃತ್ತ ಪ್ರಾಚಾರ್ಯರಾದ ಡಾ. ಸುರೇಶ ವಿ. ನಾಯಕ ಮುಖ್ಯ ಅತಿಥಿಯಾಗಿ ಆಗಮಿಸಿ ಸದ್ರಿ ತರಬೇತಿಗೆ ದೀಪ ಬೆಳಗಿಸುವುದರೊಂದಿಗೆ ಚಾಲನೆಯನ್ನು ನೀಡುತ್ತ “ಇಂದಿನ ಪಾಲಕ ವರ್ಗದವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ನೇರವಾಗಿ ಸ್ಪರ್ದೆಗೆ ಇಳಿಸುತ್ತಾರೆ. ಇಂದು ಕೇವಲ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದರೂ ನಿರುದ್ಯೋಗ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ವಿದ್ಯಾಥಿಗಳಾದ ನೀವು ಕಂಪ್ಯೂಟರ್, ಟೈಪ್‌ರೈಟಿಂಗ್, ಶಾರ್ಟಹ್ಯಾಂಡ್ ಹಾಗೂ ಅನೇಕ ಸ್ವಂತ ಉದ್ಯೋಗ ಮಾಡಿ ಬದುಕುವ ವಿದ್ಯೆಗಳಿವೆ. ಇತ್ತೀಚೆಗೆ ಆನ್‌ಲೈನ್ ಮೂಲಕವೂ ತರಬೇತಿಗಳು ನಡೆಯುತ್ತಿವೆ. ಅವುಗಳಲ್ಲಿ ಕೆಲವೊಂದು ಉಚಿತವಾಗಿಯೂ ಸಿಗುತ್ತವೆ. ವಿದ್ಯಾರ್ಥಿಗಳು ಹೊರಗಿನ ಜಗತ್ತನ್ನು ಪರಿಚಯಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ರೋಟರಿ ಅಧ್ಯಕ್ಷರಾದ ರಾಘವೇಂದ್ರ ಜಿ. ಪ್ರಭು ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತ ‘ತರಬೇತಿ ಪೂರ್ಣಗೊಳಿಸಿ ಹೆಚ್ಚಿನ ಅಂಕ ಗಳಿಸಿದವರಿಗೆ ಬಹುಮಾನಗಳನ್ನು ನೀಡಲಾಗುವುದು’ ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು. ರೋಟರಿ ವೃತ್ತಿಪರ ನಿರ್ದೇಶಕ ಅಮರನಾಥ ಶೇಟ್ಟಿ ಮಾತನಾಡುತ್ತ ರೋಟರಿ ಸಂಸ್ಥಯಿAದ ಪ್ರತೀ ವರ್ಷ ಹೊಲಿಗೆ ಹಾಗೂ ಇನ್ನಿತರ ಅನೇಕ ತರಬೇತಿ ಶಿಭಿರಗಳನ್ನು ಆಯೋಜಿಸುತ್ತಿದ್ದೇವೆ. ಇದರಿಂದ ಅನೇಕರು ಸದುಪಯೋಗ ಪಡೆದುಕೊಂಡಿದ್ದಾರೆ. ಅನೇಕ ಮಹಿಳೆಯರಿಗೆ ಸ್ವ-ಉದ್ಯೋಗಕ್ಕಾಗಿ ಉಚಿತ ಹೊಲಿಗೆ ಯಂತ್ರಗಳನ್ನು ನೀಡಿದ್ದೇವೆ. ಅವರು ತಮ್ಮ ಮನೆಗಳಲ್ಲಿ ಸ್ವಂತ ಹೊಲಿಗೆ ಉದ್ಯೋಗವನ್ನು ಮಾಡುತ್ತಿದ್ದಾರೆ ಎಂದರು.
ಕಾರ್ಯದರ್ಶಿ ಗುರುದತ್ತ ಬಂಟ ರವರು ಮಾತನಾಡುತ್ತ ‘ಇಂದು ವಿದ್ಯಾರ್ಥಿಗಳಿಗೆ ಕಲಿಯುವುದಕ್ಕಾಗಿ ಅನೇಕ ಸವಲತ್ತುಗಳು, ಅವಕಾಶಗಳು ಇವೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಸಂಸ್ಥೆಯ ಪ್ರಾಚಾರ್ಯರಾದ ಪ್ರಸನ್ನ ಜಿ. ತೆಂಡೂಲ್ಕರ ಬಂದ ಎಲ್ಲಾ ಅತಿಥಿಗಳನ್ನು ಸ್ವಾಗತಿಸುತ್ತ ಇಂದು ಕೆಲವೇ ವಿದ್ಯಾರ್ಥಿಗಳಿಗೆ ಮಾತ್ರ ತರಬೇತಿಗೆ ಆಯ್ಕೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಪ್ರಾಯೋಜಕರು ಸಿಕ್ಕಲ್ಲಿ ಇನ್ನೂ ಹೆಚ್ಚಿನ ವಿದ್ಯಾಥಿಗಳಿಗೆ ಸೇರಿಸಿಕೊಳ್ಳುವವರಿದ್ದೇವೆ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಸುರೇಶ ವಿ. ನಾಯಕ ರವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಸದಸ್ಯರಾದ ಡಾ. ಸಮೀರಕುಮಾರ ನಾಯಕ, ಮಿನಿನ ಪುಡ್ತಾಡೊ, ಪಾಂಡುರoಗ ಎಸ್. ನಾಯ್ಕ, ಮುರಳಿ ಗೊವೇಕರ, ಗಣೇಶ ಪೈ, ವಿನೋದ ಕೊಠಾರಕರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶೈಲೇಶ ಹಳದೀಪುರ ನಡೆಸಿಕೊಟ್ಟರು. ಮಾರುತಿ ಪಿ.ಕಾಮತ ಎಲ್ಲರನ್ನೂ ವಂದಿಸಿದರು.